»   » ಈ ವರ್ಷದ ಮೊದಲ ಚಿತ್ರವಾಗಿ ಶಿವಣ್ಣನ ಲಕ್ಷ್ಮಿ

ಈ ವರ್ಷದ ಮೊದಲ ಚಿತ್ರವಾಗಿ ಶಿವಣ್ಣನ ಲಕ್ಷ್ಮಿ

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಹೈ ವೋಲ್ಟೇಜ್ ಚಿತ್ರ ಲಕ್ಷ್ಮಿ. ಈ ವರ್ಷದ ಮೊದಲ ಚಿತ್ರವಾಗಿ ಪ್ರೇಕ್ಷಕರ ಮುಂದೆ ಬರುತ್ತಿದೆ. ಸಂಕ್ರಾಂತಿ ಹಬ್ಬಕ್ಕೆ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ 'ಲಕ್ಷ್ಮಿ' ಚಿತ್ರವನ್ನು ಕಣ್ತುಂಬಿಕೊಳ್ಳಬಹುದು.

ಬೆಂಗಳೂರಿನ ಪ್ರಮುಖ ಚಿತ್ರಮಂದಿರಗಳಾದ ಕಪಾಲಿ, ನವರಂಗ್, ಉಮಾ, ಈಶ್ವರಿ, ಸಿದ್ಧಲಿಂಗೇಶ್ವರ, ಗೋವರ್ಧನ್, ಕೃಷ್ಣ, ರಾಜಮುರಳಿ ಸೇರಿದಂತೆ ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳಾದ ಪಿವಿಆರ್, ಐನಾಕ್ಸ್ ಗಳಲ್ಲೂ ರಾಜ್ಯದಾದ್ಯಂತ ತೆರೆಕಾಣುತ್ತಿದೆ.


'ಲಕ್ಷ್ಮಿ' ಚಿತ್ರದ ಪ್ರಮುಖ ಆಕರ್ಷಣೆಗಳಲ್ಲಿ ಐಟಂ ಹಾಡು ಸಹ ಒಂದು. "ಪುಸ್ಸಿ ಕ್ಯಾಟ್ ಪುಸ್ಸಿ ಕ್ಯಾಟ್ ಕಳೆದೋಯ್ತು ನನ್ನ ಪುಸ್ಸಿ ಕ್ಯಾಟ್..." ಎಂಬ ಹಾಡು ಈಗಾಗಲೆ ಬಹಳಷ್ಟು ಜನಪ್ರಿಯವಾಗಿದೆ. ಶಾಲಿನಿ ನಾಯ್ಡು ಎಂಬ ಬೆಡಗಿಯ ಮಾದಕ ಸ್ಟೆಪ್ ಗಳು ಚಿತ್ರದ ಪ್ರಮುಖ ಆಕರ್ಷಣೆಯಾಗಿ ನಿಲ್ಲಲಿವೆ.

ಶಿವಣ್ಣ ಅಭಿನಯದ 101ನೇ ಚಿತ್ರವಾಗಿರುವ ಇದನ್ನು ರಾಘವ ಲೋಕಿ ನಿರ್ದೇಶಿಸಿದ್ದಾರೆ. ಭರಣಿ ಮಿಲ್ಸ್ ನ ಭಾಸ್ಕರ್ ನಿರ್ಮಿಸಿರುವ ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡಿದ್ದಾರೆ. ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನ ಚಿತ್ರಕ್ಕಿದೆ.

ಶಿವಣ್ಣನಿಗೆ ಜೊತೆಯಾಗಿ ಪ್ರಿಯಾಮಣಿ ಅಭಿನಯಿಸಿದ್ದಾರೆ. ರಂಗಾಯಣ ರಘು, ಕೋಮಲ್ ಕುಮಾರ್, ಅವಿನಾಶ್ ಸೇರಿದಂತೆ ಮುಂತಾದವರ ತಾರಾಗಣ ಚಿತ್ರಕ್ಕಿದೆ. ಕರ್ನಾಟಕದ ಸುಂದರ ತಾಣಗಳು ಸೇರಿದಂತೆ ಹಾಂಕಾಂಗ್, ಮಕಾವು ತಾಣಗಳಲ್ಲೂ ಚಿತ್ರೀಕರಣ ನಡೆದಿದೆ. (ಏಜೆನ್ಸೀಸ್)

English summary
Hat Trick Hero Shivarajkumar and Bangalore beauty Priyamani lead Kannada film Lakshmi all set to releases on Sankranti festival. The film marks Shivarajkumar's 101st venture, and is produced by Bhaskar of Bharani Minerals.
Please Wait while comments are loading...