»   » ಶಿವಣ್ಣ ಹೈ ವೋಲ್ಟೇಜ್ ಚಿತ್ರಕ್ಕೆ ಮುಂಗಡ ಬುಕಿಂಗ್

ಶಿವಣ್ಣ ಹೈ ವೋಲ್ಟೇಜ್ ಚಿತ್ರಕ್ಕೆ ಮುಂಗಡ ಬುಕಿಂಗ್

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಹೈ ವೋಲ್ಟೇಜ್ ಸಿನಿಮಾ 'ಲಕ್ಷ್ಮಿ' ಇದೇ ಶುಕ್ರವಾರದಿಂದ (ಜ.18) ಅಮೋಘ ಪ್ರಾರಂಭವಾಗುತ್ತಿದೆ. ನಿಮ್ಮ ನೆಚ್ಚಿನ ಚಿತ್ರಮಂದಿರಳಲ್ಲಿ 'ಲಕ್ಷ್ಮಿ' ಚಿತ್ರವನ್ನು ಕಣ್ತುಂಬಿಕೊಳ್ಳಬಹುದು.

ಗುರುವಾರದಿಂದಲೇ (ಜ.17) ಮುಂಗಡ ಬುಕಿಂಗ್ ಸೌಲಭ್ಯ ಕಲ್ಪಿಸಲಾಗಿದೆ. 'ಲಕ್ಷ್ಮಿ' ಚಿತ್ರ ರಾಜ್ಯದಾದ್ಯಂತ 130ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ. ಭರಣಿ ಮಿನರಲ್ಸ್ ನಿರ್ಮಾಣದ ಈ ಚಿತ್ರ ತೆರೆಗೆ ಬರಲು ಸರಿಸುಮಾರು ಎರಡು ವರ್ಷಗಳಷ್ಟು ಸಮಯ ತೆಗೆದುಕೊಂಡಿದೆ. ಭಾರಿ ಬಜೆಟ್ ಚಿತ್ರ ಇದಾಗಿದೆ.


'ಲಕ್ಷ್ಮಿ' ಚಿತ್ರದ ಇನ್ನೊಂದು ಆಕರ್ಷಣೆ ಎಂದರೆ ಗ್ರಾಫಿಕ್ಸ್. ಚಿತ್ರದಲ್ಲಿ ಒಟ್ಟು 30 ರಿಂದ 40 ನಿಮಿಷಗಳಷ್ಟು ನಿಬಿಡವಾಗಿದೆ. ಹಾಂಕಾಂಗ್ ನ ಜೂಜು ಅಡ್ಡೆಗಳಲ್ಲಿ ಚಿತ್ರದ ಕೆಲವು ಸನ್ನಿವೇಶಗಳನ್ನು ಚಿತ್ರೀಕರಿಸಿರುವುದು ವಿಶೇಷ.

ಇಷ್ಟಕ್ಕೂ 'ಲಕ್ಷ್ಮಿ' ಎಂದರೆ ಯಾರು? ಸಿಬಿಐ ಅಧಿಕಾರಿ ಲಕ್ಷ್ಮಿ ನಾರಾಯಣ ಪಾತ್ರದಲ್ಲಿ ಶಿವಣ್ಣ ಕಾಣಿಸಲಿದ್ದಾರೆ. ದೇಶವನ್ನು ಲೂಟಿ ಹೊಡೆಯುತ್ತಿರುವವರನ್ನು ಮಟ್ಟ ಹಾಕುತ್ತಾನೆ. ಇದರ ಜೊತೆಗೆ ಸೆಂಟಿಮೆಂಟ್, ಎಮೋಷನ್, ಥ್ರಿಲ್, ಸಸ್ಪೆನ್ಸ್ ಅಂಶಗಳು ಚಿತ್ರದಲ್ಲಿವೆಯಂತೆ.

ಈ ಚಿತ್ರದ ಮಗದೊಂದು ಆಕರ್ಷಣೆ ಎಂದರೆ ಐಟಂ ಸಾಂಗ್. "ಪುಸ್ಸಿ ಕ್ಯಾಟ್ ಪುಸ್ಸಿ ಕ್ಯಾಟ್ ಕಳೆದೋಯ್ತು ನನ್ನ ಪುಸ್ಸಿ ಕ್ಯಾಟ್..." ಎಂಬ ಹಾಡಿಗೆ ಶಾಲಿನಿ ನಾಯ್ಡು ಸೊಂಟ ಬಳುಕಿಸಿದ್ದಾರೆ. ಗುರುಕಿರಣ್ ಅವರ ಸಂಗೀತ ಕವಿರಾಜ್ ಅವರ ಸಾಹಿತ್ಯದ ಜುಗಲ್ ಬಂಧಿಗೆ ತಕ್ಕಂತೆ ಶಾಲಿನಿ ತಮ್ಮ ಮೈಮಾಟ ಕುಣಿಸಿದ್ದಾರೆ. (ಒನ್ಇಂಡಿಯಾ ಕನ್ನಡ)

English summary
Hat Trick Hero Shivrajkumar's high voltage film Lakshmi will be releasing on 18th January. The film hits more than 130 theatres. In 'Lakshmi' Shivanna plays CBI officer role. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada