»   » ಚಂದನ್ ಶೆಟ್ಟಿ ಹೊಸ ಹೇರ್ ಸ್ಟೈಲ್ ಗೆ ಮಾರು ಹೋದ ಶೃತಿ ಹರಿಹರನ್

ಚಂದನ್ ಶೆಟ್ಟಿ ಹೊಸ ಹೇರ್ ಸ್ಟೈಲ್ ಗೆ ಮಾರು ಹೋದ ಶೃತಿ ಹರಿಹರನ್

Posted By:
Subscribe to Filmibeat Kannada
ಮಗು ಆದ್ಮೇಲೆ ಬರೋಬ್ಬರಿ 22 ಕೆಜಿ ತೂಕ ಇಳಿಸಿಕೊಂಡ ನಟಿ ಶ್ವೇತಾ ಶ್ರೀವಾತ್ಸವ್ | Filmibeat Kannada

ಕನ್ನಡ ರಾಪರ್ ಚಂದನ್ ಶೆಟ್ಟಿ ಬಿಗ್ ಬಾಸ್ ವಿನ್ನರ್ ಪಟ್ಟ ಪಡೆದು ಅಭಿಮಾನಿಗಳ ಆಸೆಯನ್ನು ಈಡೆರಿಸಿದ್ದರು. ಅದರ ಬಳಿಕ ಚಂದನ್ ಅವರ ಹಾಡುಗಳಿಗೆ ಲಕ್ಷಾಂತರ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಆದರೆ, ಸದ್ಯ ಚಂದನ್ ಹಾಡಿಗೆ ಮಾತ್ರವಲ್ಲದೆ ಅವರ ಹೇರ್ ಸ್ಟೈಲ್ ನೋಡಿ ಕನ್ನಡದ ನಟಿ ಶೃತಿಹರಿಹರನ್ ಮಾರು ಹೋಗಿದ್ದಾರೆ.

ರಾಪರ್ ಚಂದನ್ ಶೆಟ್ಟಿ ಆಗಾಗ ತಮ್ಮ ಬೇರೆ ಬೇರೆ ರೀತಿಯ ಹೇರ್ ಸ್ಟೈಲ್ ಮಾಡುತ್ತಿರುತ್ತಾರೆ. ಅದೇ ರೀತಿ ಈಗ ಶೆಟ್ರು ಒಂದು ಹೊಸ ಕೇಶ ವಿನ್ಯಾಸದೊಂದಿಗೆ ಬಂದಿದ್ದಾರೆ. ನಟಿ ಶೃತಿ ಹರಿಹರನ್ ಗೆ ಚಂದನ್ ಹೇರ್ ಸ್ಟೈಲ್ ಸಖತ್ ಇಷ್ಟ ಆಗಿದೆ. ಶೃತಿ ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ಚಂದನ್ ಜೊತೆಗೆ ತೆಗೆಸಿಕೊಂಡ ಫೋಟೋ ಹಾಕಿದ್ದು ಅವರ ಹೇರ್ ಸ್ಟೈಲ್ ಬಗ್ಗೆ ಬರೆದಿದ್ದಾರೆ. ಚಂದನ್ ಶೆಟ್ಟಿ ಹೊಸ ಹೇರ್ ಸ್ಟೈಲ್ ಅವರ ಫ್ಯಾನ್ಸ್ ಗಳಿಗೆ ಕೂಡ ಮೆಚ್ಚುಗೆಯಾಗಿದೆ.

ಚಂದನ್ ಶೆಟ್ಟಿ ಆಯ್ಕೆ ಬಗ್ಗೆ ಶುರುವಾಯ್ತು ಪರ ವಿರೋಧ ಚರ್ಚೆ !

 Shruthi Hariharan likes Chandan Shettys hairstyle

ಅಂದಹಾಗೆ, ಬಿಗ್ ಬಾಸ್ ಮುಗಿಸಿದ ಚಂದನ್ ಡೈರೆಕ್ಟ್ ಆಗಿ ಈಗ ಕಲರ್ಸ್ ಸೂಪರ್ ವಾಹಿನಿಯ 'ಮಾಸ್ಟರ್ ಡ್ಯಾನ್ಸರ್' ಕಾರ್ಯಕ್ರಮಕ್ಕೆ ಬಂದಿದ್ದಾರೆ. ಈ ಕಾರ್ಯಕ್ರಮದಲ್ಲಿ ನಟಿ ಶೃತಿ ಹರಿಹರನ್ ಮತ್ತು ಮಯೂರಿ ಸಾಥ್ ನೀಡಿದ್ದಾರೆ. ಈ ಕಾರ್ಯಕ್ರಮ ಕಲರ್ಸ್ ಸೂಪರ್ ವಾಹಿನಿಯಲ್ಲಿ ರಾತ್ರಿ 8 ಗಂಟೆಗೆ ಪ್ರಸಾರ ಆಗುತ್ತಿದೆ.

'ಮಾಸ್ಟರ್ ಡ್ಯಾನ್ಸರ್' ಶೋಗೆ ಚಂದನ್ ಶೆಟ್ಟಿ ಜಡ್ಜ್ ಆಗಿರೋದು ಈ ಕಾರಣಕ್ಕೆ.!

English summary
Kannada actress Shruthi Hariharan likes Chandan Shetty's hairstyle.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X