twitter
    For Quick Alerts
    ALLOW NOTIFICATIONS  
    For Daily Alerts

    ಜನತಾ ಚಿತ್ರಮಂದಿರ, ಸಿನಿನಗರಿ ನಿರ್ಮಾಣ: ಸಿಎಂ

    By Mahesh
    |

    ಕನ್ನಡ ಚಿತ್ರರಂಗದ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ನಮ್ಮ ಸರ್ಕಾರದ ನೆರವು ಇದ್ದೇ ಇರುತ್ತದೆ. ಕನ್ನಡ ಸಿನಿಮಾಗಳನ್ನು ಮಾತ್ರ ಪ್ರದರ್ಶನ ಮಾಡುವ ಚಿತ್ರಮಂದಿರಗಳು ರಾಜ್ಯದೆಲ್ಲೆಡೆ ನಿರ್ಮಾಣವಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

    ದಕ್ಷಿಣ ಭಾರತ ಮತ್ತ್ತು ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳ ಜತೆ ನಡೆದ ಸಭೆಯಲ್ಲಿ ಸಿದ್ದರಾಮಯ್ಯ ಅವರು ಕನ್ನಡ ಚಲನಚಿತ್ರ ರಂಗದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದರು.

    ಮುಖ್ಯಮಂತ್ರಿ ಭೇಟಿಯಾದ ನಿಯೋಗದಲ್ಲಿ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಶಶಿಕುಮಾರ್, ರಾಜ್ಯ ಮಂಡಳಿ ಅಧ್ಯಕ್ಷ ಎಚ್.ಡಿ.ಗಂಗರಾಜ್, ಹಿರಿಯ ನಿರ್ಮಾಪಕರಾದ ಸಾ.ರಾ.ಗೋವಿಂದು, ಬಿ.ವಿಜಯ್‌ಕುಮಾರ್ ಭಾಗಿಯಾಗಿದ್ದರು. ಸಭೆ ನಂತರ ಸಿದ್ದರಾಮಯ್ಯ ಅವರಿಗೆ ಆತ್ಮೀಯ ಅನ್ಮಾನ ಮಾಡಲಾಯಿತು.

    ಕನ್ನಡ ಚಿತ್ರರಂಗಕ್ಕೆ ಅಗತ್ಯ ನೆರವು ಸಿಗುತ್ತಿಲ್ಲ. ಆದರೆ ಚಿತ್ರರಂಗ ನಶಿಸಿಹೋಗಿದೆ ಎಂಬ ಆರೋಪ ಮಾಡುವವರಿದ್ದಾರೆ, ಇದನ್ನು ನಾನು ಒಪ್ಪುವುದಿಲ್ಲ. ಚಿತ್ರರಂಗದ ಅಭಿವೃದ್ಧಿಗೆ ಸರ್ಕಾರ ಸಹಾಯ ಮಾಡಬೇಕಿದೆ ಎಂದು ಭಾರತೀಯ ಚಲನಚಿತ್ರ ಒಕ್ಕೂಟ(FFI), ದಕ್ಷಿಣ ಭಾರತ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ(SIFCC)ಯ ಪದಾಧಿಕಾರಿಗಳೊಂದಿಗೆ ಕೃಷ್ಣಾದಲ್ಲಿ ಭಾನುವಾರ ನಡೆದ ಸಭೆಯ ಬಳಿಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

    Siddaramaiah assured Janata Theatres

    ಸಭೆಯಲ್ಲಿ ನಡೆದ ಚರ್ಚೆ, ಸಿಎಂ ನೀಡಿದ ಭರವಸೆಗಳ ಮುಖ್ಯಾಂಶಗಳು ಇಂತಿದೆ:
    * ರಾಜ್ಯದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಚಿತ್ರನಗರಿ ನಿರ್ಮಾಣ ಮಾಡಲು ಸರ್ಕಾರ ನಿರ್ಧರಿಸಿದೆ. ಬಜೆಟ್‌ನಲ್ಲಿ ಘೋಷಿಸಿರುವಂತೆ ಚಿತ್ರನಗರಿ ನಿರ್ಮಾಣ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಹೆಸರಘಟ್ಟದಲ್ಲಿ ಚಿತ್ರನಗರಿ ನಿರ್ಮಾಣ ಮಾಡಲಾಗುವುದು.
    * ಸೇವಾ ತೆರಿಗೆ ರದ್ದು ಹಾಗೂ ಮಲ್ಟಿಪ್ಲೆಕ್ಸ್‌ನಲ್ಲಿ ಕನ್ನಡ ಚಿತ್ರ ಪ್ರದರ್ಶನ ಕುರಿತಂತೆ ತುರ್ತಾಗಿ ಸಭೆ ನಡೆಸುತ್ತೇನೆ. ಮಲ್ಟಿಪ್ಲೆಕ್ಸ್ ಮಾಲೀಕರೊಂದಿಗೆ ಸಭೆ ನಡೆಸುತ್ತೇನೆ
    * ಪ್ರತಿ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ 400ಕ್ಕೂ ಅಧಿಕ ಜನತಾ ಚಿತ್ರಮಂದಿರ ಪ್ರಾರಂಭಿಸಲು ಸರ್ಕಾರ ಉದ್ದೇಶಿಸಿದೆ.
    * ಬಂಡವಾಳ ಹೂಡಿಕೆಗೆ ಚಿತ್ರಮಂದಿರ ಮಾಲೀಕರು, ವಾಣಿಜ್ಯ ಮಂಡಳಿಗೆ ವಾರ್ತಾ ಸಚಿವ ರೋಷನ್ ಬೇಗ್ ಕರೆ.
    * ಜನತಾ ಚಿತ್ರಮಂದಿರ ನಿರ್ಮಾಣಕ್ಕೆ ಮುಂದೆ ಬರುವವರಿಗೆ ಸರ್ಕಾರ ಉಚಿತ ಜಮೀನು ನೀಡಲಿದೆ.
    * ಜನತಾ ಚಿತ್ರಮಂದಿರದಲ್ಲಿ ಕಡ್ಡಾಯವಾಗಿ ಕನ್ನಡ ಚಲನಚಿತ್ರಗಳನ್ನು ಮಾತ್ರ ಪ್ರದರ್ಶಿಸಬೇಕು.
    * ಮಲ್ಟಿಫ್ಲೆಕ್ಸ್ ಮಾಲೀಕರ ಜತೆ ಮುಖ್ಯಮಂತ್ರಿ ನೇತೃತ್ವದಲ್ಲಿ ಜತೆ ಸಭೆ ನಡೆಸಲಾಗುವುದು, ಕನ್ನಡ ಸಿನಿಮಾಗಳ ಪ್ರದರ್ಶನ ವಿಚಾರದಲ್ಲಿ ತಾರತಮ್ಯ ಆಗದಂತೆ ನೋಡಿಕೊಳ್ಳಲಾಗುವುದು.
    * ಕರ್ನಾಟಕ ಸರ್ಕಾರ ಕನ್ನಡ ಚಿತ್ರಗಳಿಗೆ ಶೇ 100 ರಷ್ಟು ತೆರಿಗೆ ವಿನಾಯತಿ, ಮಕ್ಕಳ ಚಿತ್ರಗಳಿಗೆ ಪ್ರೋತ್ಸಾಹ, ರಾಜ್ಯ ಪ್ರಶಸ್ತಿ ನೀಡುತ್ತಾ ಬಂದಿದೆ. ಕನ್ನಡ ಚಿತ್ರರಂಗ ಕ್ರಿಯಾಶೀಲವಾಗಿರುವಂತೆ ನೋಡಿಕೊಳ್ಳಲಾಗುವುದು

    English summary
    Construction of Janata Cinema Theatres for the benefit of the poor and general public will get full support from the State Government, Karnataka Chief Minister Siddaramaiah said After meeting with FFI, SIFCC, KFCC delegates.
    Monday, June 9, 2014, 9:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X