»   » ಎರಡನೇ ಸಲ ತಾತನಾದ ರಜನಿಕಾಂತ್ ಗೆ ಕಂಗ್ರಾಟ್ಸ್

ಎರಡನೇ ಸಲ ತಾತನಾದ ರಜನಿಕಾಂತ್ ಗೆ ಕಂಗ್ರಾಟ್ಸ್

Posted By:
Subscribe to Filmibeat Kannada

ಆಲ್ ಇಂಡಿಯಾ ಸೂಪರ್ ಸ್ಟಾರ್ ರಜನಿಕಾಂತ್ ಮತ್ತೊಮ್ಮೆ ತಾತನಾಗಿದ್ದಾರೆ. ಅವರ ಕಿರಿಯ ಪುತ್ರಿ ಸೌಂದರ್ಯ ಅವರು ಬುಧವಾರ ರಾತ್ರಿ ಚೆನ್ನೈನ ಅಪೊಲೋ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದರು.

ಈಗಾಗಲೆ ತಾತ ಎನ್ನಿಸಿಕೊಂಡಿರುವ ಅವರು ತಮ್ಮ ಮೊಮ್ಮಗನನ್ನು ನೋಡಿ ಇನ್ನಷ್ಟು ಖುಷಿಯಾಗಿದ್ದಾರೆ. ತಾಯಿ ಮಗು ಆರೋಗ್ಯವಾಗಿದ್ದು, ತಾತನಾದ ಕಾರಣಕ್ಕೆ ರಜನಿ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

Soundarya Rajinikanth blessed with baby boy

ಬಿಜಿನೆಸ್ ಮ್ಯಾನ್ ಅಶ್ವಿನ್ ರಾಮ್ ಕುಮಾರ್ ಅವರನ್ನು ವರಿಸಿರುವ ಸೌಂದರ್ಯಾ ಅವರಿಗೆ ಇದು ಚೊಚ್ಚಲ ಮಗು. ಇನ್ನು ರಜನಿಕಾಂತ್ ಅವರ ಹಿರಿಯ ಪುತ್ರಿ ಐಶ್ವರ್ಯಾ ಅವರು ಧನುಷ್ ಅವರನ್ನು ಪ್ರೇಮವಿವಾಹ ಮಾಡಿಕೊಂಡಿದ್ದು ಗೊತ್ತೇ ಇದೆ. ಅವರ ಪ್ರೇಮದ ಸಂಕೇತವಾಗಿ ಇಬ್ಬರು ಪುತ್ರರಿದ್ದಾರೆ.

'ಲಿಂಗಾ' ಚಿತ್ರದ ಬಳಿಕ ರಜನಿಕಾಂತ್ ಈಗ ಕೊಂಚ ವಿಶ್ರಾಂತಿ ಪಡೆಯುತ್ತಿದ್ದಾರೆ. ರಜನಿ ಮುಂದಿನ ಚಿತ್ರ 'ರೋಬೋ 2' ಎನ್ನಲಾಗಿದೆ. ಆದರೆ ರಜನಿ ಮಾತ್ರ ಒಬ್ಬ ಯುವ ನಿರ್ದೇಶಕನಿಗೆ ಚಾನ್ಸ್ ಕೊಟ್ಟಿದ್ದಾರೆ ಎನ್ನುತ್ತವೆ ಮೂಲಗಳು. ರಂಜಿತ್ ಎಂಬ ನಿರ್ದೇಶಕನೊಂದಿಗೆ ಚಿತ್ರಕ್ಕೆ ಓಕೆ ಎಂದಿದ್ದಾರೆ. (ಏಜೆನ್ಸೀಸ್)

English summary
Filmmaker Soundarya Rajinikanth, daughter of superstar Rajinikanth, delivered a baby boy at Apollo Hospital on Wednesday night. Soundarya married Ashwin Ramkumar, an industrialist, in 2010. This is the couple’s first child. Congrats to Super Star Rajikanth for becoming grand father!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada