ಮಹೇಶ್ ಬಾಬು ನಂತರ 'ತಲಾ' ಅಜಿತ್ ಭೇಟಿ ಮಾಡಿದ ಶ್ರೀಮುರಳಿ

Recommended Video

ಮಹೇಶ್ ಬಾಬು ನಂತರ 'ತಲಾ' ಅಜಿತ್ ಭೇಟಿ ಮಾಡಿದ ಶ್ರೀಮುರಳಿ..! |FILMIBEAT KANNADA

ರೋರಿಂಗ್ ಸ್ಟಾರ್ ಶ್ರೀಮುರಳಿ ಸದ್ಯ ಭರಾಟೆ ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ರಾಜಸ್ತಾನ ಭಾಗದ ಶೂಟಿಂಗ್ ಮುಗಿಸಿ ಬಂದಿದ್ದ ಶ್ರೀಮುರಳಿ ಈಗ ಹೈದ್ರಾಬಾದ್ ನ ರಾಮೋಜಿ ಫಿಲಂ ಸಿಟಿಯಲ್ಲಿ ಬ್ಯುಸಿಯಾಗಿದ್ದಾರೆ.

ಇತ್ತೀಚಿಗಷ್ಟೆ ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಅವರನ್ನ ಭೇಟಿ ಮಾಡಿದ್ದ ಶ್ರೀಮುರಳಿ, ಈಗ ತಮಿಳು ಸೂಪರ್ ಸ್ಟಾರ್ ಅಜಿತ್ ಕುಮಾರ್ ಅವರನ್ನ ಮೀಟ್ ಮಾಡಿದ್ದಾರೆ.

ಅಜಿತ್ ಅವರನ್ನ ಭೇಟಿ ಮಾಡಿ ಕೆಲ ಸಮಯ ಇಂಡಸ್ಟ್ರಿಯ ಬಗ್ಗೆ ಮಾತನಾಡಿದ್ದಾರೆ. ಯಶ್ ಕೆಜಿಎಫ್ ಹಾಗೂ ಭರಾಟೆ ಚಿತ್ರಗಳ ಬಗ್ಗೆ ಅಭಿಪ್ರಾಯಗಳನ್ನ ಹಂಚಿಕೊಂಡಿದ್ದಾರೆ. ಈ ವೇಳೆ ಭರಾಟೆ ಚಿತ್ರದ ದೃಶ್ಯಗಳನ್ನ ಕೂಡ ತೋರಿಸಿದ್ದಾರೆ.

Sri Murali met tamil super star ajith kumar

ತಮಿಳು ನಟ ಅಜಿತ್ 'ವಿಶ್ವಾಸಂ' ಚಿತ್ರದ ಯಶಸ್ಸಿನ ನಂತರ ಹಿಂದಿಯ ಪಿಂಕ್ ಚಿತ್ರದ ರೀಮೇಕ್ ನಲ್ಲಿ ನಟಿಸುತ್ತಿದ್ದು, ಈ ಚಿತ್ರದ ಚಿತ್ರೀಕರಣಕ್ಕಾಗಿ ರಾಮೋಜಿ ಫಿಲಂ ಸಿಟಿಗೆ ಆಗಮಿಸಿದ್ದಾರೆ. ಈ ವೇಳೆ ಶ್ರೀಮುರಳಿ ಸಿಕ್ಕಿ ಅವರೊಂದಿಗೆ ಸ್ನೇಹಪೂರ್ವಕವಾಗಿ ಮಾತನಾಡಿದ್ದಾರೆ.

ಅಷ್ಟೇ ಅಲ್ಲದೇ ಬಾಲಿವುಡ್ ನಟ ಸುನಿಲ್ ಶೆಟ್ಟಿ ಅವರನ್ನ ಕೂಡ ಶ್ರೀಮುರಳಿ ಭೇಟಿ ಮಾಡಿದ್ದಾರೆ. ಸುನಿಲ್ ಶೆಟ್ಟಿ ಪೈಲ್ವಾನ್ ಚಿತ್ರಕ್ಕಾಗಿ ಹೈದ್ರಾಬಾದ್ ಗೆ ಬಂದಿದ್ದಾರೆ. ಈ ವೇಳೆ ಅವರನ್ನ ಕೂಡ ರೋರಿಂಗ್ ಸ್ಟಾರ್ ಮೀಟ್ ಮಾಡಿ ಯೋಗಕ್ಷೇಮ ವಿಚಾರಿಸಿದ್ದಾರೆ.

Sri Murali met tamil super star ajith kumar

ಇನ್ನು ಶ್ರೀಮುರಳಿ ಮಾತ್ರವಲ್ಲದೇ ಕಿಚ್ಚ ಸುದೀಪ್, ಧ್ರುವ ಸರ್ಜಾ ಕೂಡ ಅಲ್ಲೇ ಇದ್ದಾರೆ. ಪೈಲ್ವಾನ್ ಚಿತ್ರೀಕರಣದಲ್ಲಿ ಸುದೀಪ್, ಪೊಗರು ಚಿತ್ರೀಕರಣದಲ್ಲಿ ಧ್ರುವ ಸರ್ಜಾ ಹಾಗೂ ಭರಾಟೆ ಚಿತ್ರೀಕರಣಕ್ಕಾಗಿ ಶ್ರೀಮುರಳಿ ರಾಮೋಜಿ ಫಿಲಂ ಸಿಟಿಯಲ್ಲಿದ್ದಾರೆ.

More from Filmibeat

English summary
Kannada actor Sri Murali met tamil super star ajith kumar in Ramoji film city Hyderabad.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X