For Quick Alerts
  ALLOW NOTIFICATIONS  
  For Daily Alerts

  ಅಂಡರ್ ವರ್ಲ್ಡ್ ನಿಂದ ಆಚೆ ಬಂದ ಆದಿತ್ಯಗೆ ಒಂದು ಹೆಸರು ಕೊಡಿ

  By Naveen
  |

  ನಟ ಆದಿತ್ಯ ಎಂದ ತಕ್ಷಣ ನೆನಪಾಗುವುದು ಅಂಡರ್ ವರ್ಲ್ಡ್ ಸಿನಿಮಾಗಳು. 'ಡೆಡ್ಲಿ ಸೋಮ', 'ಡೆಡ್ಲಿ 2', 'ಎದೆಗಾರಿಕೆ' 'ಬೆಂಗಳೂರು ಅಂಡರ್ ವರ್ಲ್ಡ್' ಹೀಗೆ ಭೂಗತ ಲೋಕದ ಚಿತ್ರಗಳಿಗೆ ಬ್ರಾಂಡ್ ಆಗಿದ್ದ ಆದಿತ್ಯ ಅದರಿಂದ ಈಗ ಆಚೆ ಬರುವ ಪ್ಲಾನ್ ಮಾಡಿದ್ದಾರೆ.

  ಆದಿತ್ಯ ಈಗ ಒಂದು ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರವನ್ನು ರವಿ ಶ್ರೀವತ್ಸ ನಿರ್ದೇಶನ ಮಾಡುತ್ತಿದ್ದಾರೆ. ಇತ್ತ ರವಿ ಶ್ರೀವತ್ಸ ಕೂಡ ಮಚ್ಚು ಲಾಂಗು ಸಿನಿಮಾಗಳಿಗೆ ಹೆಸರುವಾಸಿ. ಆದಿತ್ಯ ಮತ್ತು ರವಿ ಶ್ರೀವತ್ಸ 'ಡೆಡ್ಲಿ ಸೋಮ', 'ಡೆಡ್ಲಿ 2' ನಂತರ ಮತ್ತೆ ಒಂದಾಗಿ ಹೊಸ ಸಿನಿಮಾ ಶುರು ಮಾಡಿದ್ದಾರೆ. ಹೀಗಿದ್ದರೂ ಈ ಚಿತ್ರ ಅಂಡರ್ ವರ್ಲ್ಡ್ ಕಥೆ ಹೊಂದಿಲ್ಲ.

  ಈ ವಿಷಯವನ್ನು ಸ್ವತಃ ಚಿತ್ರ ನಾಯಕ ಆದಿತ್ಯ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರವಿ ಶ್ರೀ ವತ್ಸ ಅವರ ಜೊತೆಗೆ ಮೂರನೇ ಸಿನಿಮಾ ಮಾಡುತ್ತಿದ್ದು, ಅದಕ್ಕೆ ಟೈಟಲ್ ಸೂಚಿಸಿ ಎಂದು ಅಭಿಮಾನಿಗಳಲ್ಲಿ ಕೇಳಿ ಕೊಂಡಿದ್ದಾರೆ.

  ಅವರೇ ಹೇಳಿರುವಂತೆ ಇದು ಒಂದು ಪಕ್ಕಾ ಕಮರ್ಶಿಯಲ್ ಸಿನಿಮಾ ಆಗಿದೆಯಂತೆ. ಈ ಮೂಲಕ ಆದಿತ್ಯ ಜೊತೆಗೆ ರವಿ ಶ್ರೀವತ್ಸ ಕೂಡ ಭೂಗತ ಜಗತ್ತಿನ ಸಿನಿಮಾಗಳಿಂದ ದೂರ ಬಂದಿದ್ದಾರೆ. ಅಂದಹಾಗೆ, ಆದಿತ್ಯ ಅವರ ಈ ಹೊಸ ಚಿತ್ರಕ್ಕೆ ನಿಮಗೂ ಒಳ್ಳೆಯ ಟೈಟಲ್ ಹೊಳೆದರೆ ಕೆಳೆಗಿನ ಕಮೆಂಟ್ ಬಾಕ್ಸ್ ಮೂಲಕ ತಿಳಿಸಿ.

  English summary
  Suggest good title for kannada actor Adithya and director Ravi Srivatsa's combination new movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X