Don't Miss!
- News
ನೋಡ ಬನ್ನಿರಾ ಪರಶುರಾಮ ಥೀಮ್ ಪಾರ್ಕ್: ಸಚಿವ ಸುನಿಲ್ ಕುಮಾರ್ ಸಂದರ್ಶನ
- Sports
ರಿಷಭ್ ಪಂತ್ ಆರೋಗ್ಯದಲ್ಲಿ ಭಾರೀ ಚೇತರಿಕೆ: ಈ ವಾರವೇ ಆಸ್ಪತ್ರೆಯಿಂದ ಡಿಶ್ಚಾರ್ಜ್ ಸಾಧ್ಯತೆ
- Finance
ಹೊಸ ಆಫರ್: ಗೃಹ ಸಾಲದ ಬಡ್ಡಿದರ ಇಳಿಸಿದ ಎಸ್ಬಿಐ!
- Lifestyle
Horoscope Today 30 Jan 2023: ಸೋಮವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸುಮಲತಾ ಗೆ ಕೊರೊನಾ ಪಾಸಿಟಿವ್: ಯಾರಿಗೆಲ್ಲಾ ಕೊರೊನಾ ಆತಂಕ
ಮಂಡ್ಯ ಸಂಸದೆ, ನಟಿ ಸುಮಲತಾ ಅವರಿಗೆ ಕೊರೊನಾ ಪಾಸಿಟಿವ್ ಆಗಿದೆ. ಈ ವಿಷಯವನ್ನು ಅವರು ನಿನ್ನೆಯಷ್ಟೆ ಸ್ವತಃ ಬಹಿರಂಗಪಡಿಸಿದ್ದಾರೆ.
Recommended Video
ಸುಮಲತಾ ಅವರಿಗೆ ಕೊರೊನಾ ಪಾಸಿಟಿವ್ ಬಂದಿರುವುದು ಸಿನಿಮಾ ರಂಗದ ಹಾಗೂ ರಾಜಕೀಯ ರಂಗದ ಕೆಲವು ಗಣ್ಯರಿಗೆ ಆತಂಕ ತಂದಿದೆ. ಕೆಲವರು ಸುಮಲತಾ ಅವರ ಆಪ್ತವಲಯದಲ್ಲಿದ್ದವರು ಕೋವಿಡ್ ಭೀತಿಯನ್ನು ಎದುರಿಸುತ್ತಿದ್ದಾರೆ.
ಆಘಾತಕಾರಿ
ಸಂಗತಿ
ಹಂಚಿಕೊಂಡ
ನಟಿ,
ಸಂಸದೆ
ಸುಮಲತಾ
ಅಂಬರೀಶ್
ಕೆಲವು ದಿನಗಳಿಂದ ಸಂಸದೆ ಸುಮಲತಾ ಅವರು ಹಲವಾರು ರಾಜಕಾರಣಿಗಳನ್ನು, ಸಿನಿಮಾ ಪ್ರಮುಖರನ್ನು ಭೇಟಿ ಆಗಿದ್ದಾರೆ. ಕೆಲವು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸಹ ಭಾಗವಹಿಸಿದ್ದಾರೆ. ಹಾಗಾಗಿ ಕೆಲವರಿಗೆ ಕೊರೊನಾ ಭೀತಿ ಕಾಡುತ್ತಿದೆ.

ಸಿಎಂ ಅವರನ್ನು ಭೇಟಿ ಮಾಡಿದ್ದ ಸುಮಲತಾ
ಜೂನ್ 29 ರಂದು ಸಂಸದೆ ಸುಮಲತಾ ಅವರು ಸಿಎಂ ಅವರನ್ನು ಭೇಟಿಯಾಗಿದ್ದರು. ಅಂದು ಅಂಬರೀಶ್ ಅವರ ಸ್ಮಾರಕ ವಿಚಾರವಾಗಿ ಬಹು ಸಮಯ ಸಿಎಂ ಜೊತೆ ಚರ್ಚೆ ನಡೆಸಿದರು. ಅಂದು ತೆಗೆದಿರುವ ಚಿತ್ರದಲ್ಲಿರುವಂತೆ ಸಿಎಂ ಪಕ್ಕದಲ್ಲಿಯೇ ಸುಮಲತಾ ಕೂತಿದ್ದರು. ಆದರೆ ಆಗ ಇಬ್ಬರೂ ಮಾಸ್ಕ್ ಧರಿಸಿದ್ದರು ಎಂಬುದು ಗಮನಿಸಬೇಕಾದುದು.

ರಾಕ್‌ಲೈನ್ ವೆಂಕಟೇಶ್, ದೊಡ್ಡಣ್ಣ, ಅಭಿಷೇಕ್ ಗೂ ಭೀತಿ
ಅದೇ ದಿನ ರಾಕ್‌ಲೈನ್ ವೆಂಕಟೇಶ್, ನಟ ದೊಡ್ಡಣ್ಣ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ ಆರ್ ಜೈರಾಜ್ ಮತ್ತು ಪುತ್ರ ಅಭಿಷೇಕ್ ಅಂಬರೀಶ್ ಸಹ ಸುಮಲತಾ ಅವರೊಂದಿಗೆ ಇದ್ದರು ಹಾಗಾಗಿ ಅವರಿಗೂ ಕೊರೊನಾ ಭೀತಿ ಎದುರಾಗಿದೆ.
ಜೀವನ
ಸಾಗಿಸಲು
ದಿನಸಿ
ಅಂಗಡಿ
ತೆರೆದ
ಸಿನಿಮಾ
ನಿರ್ದೇಶಕ

ಮಾಸ್ಕ್ ಧರಿಸದೆ ಕುಳಿತಿದ್ದ ಸುಮಲತಾ!
ಸುಮಲತಾ ಅವರು ಆಶಾ ಕಾರ್ಯಕರ್ತೆ ಅವರಿಗೆ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಕೆಲವು ದಿನಗಳ ಹಿಂದೆ ಭಾಗವಹಿಸಿದ್ದರು, ಆ ಕಾರ್ಯಕ್ರಮದಲ್ಲಿ ಕೆಲವು ಶಾಸಕರು, ರಾಜಕೀಯ ಗಣ್ಯರು, ಸಾಕಷ್ಟು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು. ಆ ಕಾರ್ಯಕ್ರಮದಲ್ಲಿ ಸುಮಲತಾ ಮಾಸ್ಕ್ ಹಾಕದೆ ಕುಳಿತಿರುವ ಚಿತ್ರವೊಂದು ಇದೀಗ ವೈರಲ್ ಆಗಿದೆ.

ಮಾಹಿತಿ ನೀಡಿರುವ ಸುಮಲತಾ
ಈ ನಡುವೆ ತಮ್ಮ ಹೊಣೆಗಾರಿಕೆಯನ್ನು ಮೆರೆದಿರುವ ಸುಮಲತಾ, ಕೆಲವು ದಿನಗಳಲ್ಲಿ ತಮ್ಮೊಂದಿಗೆ ಸಂಪರ್ಕಕ್ಕೆ ಬಂದಿದ್ದ ಜನರ ಮಾಹಿತಿಗಳನ್ನು ಅಧಿಕಾರಿಗಳಿಗೆ ನೀಡಿದ್ದಾರೆ. ಹಾಗೆಯೇ ತಮ್ಮನ್ನು ಭೇಟಿ ಮಾಡಿದ್ದ ಯಾರಲ್ಲಾದರೂ ಲಕ್ಷಣ ಕಂಡುಬಂದರೆ ತಪಾಸಣೆಗೆ ಒಳಗಾಗುವಂತೆ ಸಲಹೆ ನೀಡಿದ್ದಾರೆ.
ನಟಿ
ನವ್ಯಾ
ಸ್ವಾಮಿ
ಸಹ
ನಟ
ರವಿಕೃಷ್ಣಗೆ
ಕೊರೊನಾ
ಪಾಸಿಟಿವ್:
ನಟ
ಹೇಳಿದ್ದೇನು?