For Quick Alerts
  ALLOW NOTIFICATIONS  
  For Daily Alerts

  ಸುಮನ್ ರಂಗನಾಥ್ ಹ್ಞೂಂ ಅಂದ್ರೆ ಗುಡಿ ಕಟ್ತಾರಂತೆ

  By Rajendra
  |

  ಮಿಂಚಿ ಹೋಗುವ ಪಾತ್ರಗಳಲ್ಲಿ ಬಂದು ಮರೆಯಾಗುವ ಬೆಡಗಿ ಸುಮನ್ ರಂಗನಾಥ್ ಮತ್ತೆ ಗಾಂಧಿನಗರದಲ್ಲಿ ಪ್ರತ್ಯಕ್ಷರಾಗಿದ್ದಾರೆ. 'ಬುದ್ಧಿವಂತ' ಚಿತ್ರದಲ್ಲಿ ಚಿತ್ರಾನ್ನ ಚಿತ್ರಾನ್ನ ಎಂದು ರಸಿಕರಿಗೆ ಪಂಚಾಮೃತ ಬಡಿಸಿದ್ದ ತಾರೆ ಈಗ ಮತ್ತೊಮ್ಮೆ ತಮ್ಮ ತುಂಬಿದ ಚೆಲುವನ್ನು ಪಡ್ಡೆಗಳಿಗೆ ಉಣಬಡಿಸಲು ಬಂದಿದ್ದಾರೆ.

  ಲೂಸ್ ಮಾದ ಅಲಿಯಾಸ್ ಯೋಗೇಶ್ ಅಭಿನಯದ 'ಜಿಂಕೆಮರಿ' ಚಿತ್ರದಲ್ಲಿ ಸುಮನ್ ಐಟಂ ಡಾನ್ಸ್ ಮಾಡಿದ್ದಾರೆ. ತಮ್ಮ ತುಂಬಿ ತುಳುಕುವ ತಾರುಣ್ಯ ರಾಶಿಯನ್ನು ಈ ಹಾಡಿನಲ್ಲಿ ಸುಮನ್ ಧಾರೆ ಎರೆದಿರುವುದು ವಿಶೇಷ. ಇತ್ತೀಚೆಗೆ ಈ ಹಾಡಿನ ಚಿತ್ರೀಕರಣ ರಾಕ್ ಲೈನ್ ಸ್ಟುಡಿಯೋದಲ್ಲಿ ನಡೆಯಿತು.

  ಸುಮನ್ ರಂಗನಾಥ್ ಜೊತೆ 30 ಸಹಕಲಾವಿದರು ಸೊಂಟ ಬಳುಕಿಸಿದರು. ನಮ್ಮ ಲೂಸ್ ಮಾದ ಯೋಗೇಶ್ ಕೂಡ ಇವರೊಂದಿಗೆ ಹೆಜ್ಜೆ ಹಾಕಿದ. 'ಸಿದ್ಲಿಂಗು' ಚಿತ್ರದಲ್ಲಿ ಆಂಡಳಮ್ಮ ಟೀಚರ್ ಪಾತ್ರ ಪೋಷಿಸಿದ್ದ ಸುಮನ್ ಪಡ್ಡೆಗಳ ನಿದ್ದೆಗೆಡಿಸಿದ್ದರು. ನಮ್ಮ ಲೂಸ್ ಮಾದನ ಜೊತೆ ರೊಮ್ಯಾಂಟಿಕ್ ಸನ್ನಿವೇಶಗಳಲ್ಲಿ ಲೀಲಾಜಾಲವಾಗಿ ಅಭಿನಯಿಸಿದ್ದರು.

  ಈಗ ಹೆಜ್ಜೆ ಹಾಕಿರುವ 'ಜಿಂಕೆಮರಿ' ಚಿತ್ರದಲ್ಲಿ "ನರಸಮ್ಮ ಬಾಬಾ...ಬಂಗಾರಪೇಟೆಯಿಂದ ನಾನೊಬ್ಬಳೆ ಬಂಗಾರಿ...ನಾನು ಸೊಂಟ ಕುಣಿಸಿದರೆ ಎಲ್ಲರೂ ಪ್ರಾಣ ಬಿಡುತ್ತಾರೆ...ಹ್ಞೂಂ ಅಂದ್ರೆ ಗುಡಿ ಕಟ್ಟಿಸ್ತಾರೆ..." ಎಂಬ ಗೀತೆಗೆ ಹೆಜ್ಜೆಹಾಕಿದ್ದಾರೆ.

  ಸಹದೇವ್ ಬರೆದಿರುವ ಈ ಹಾಡನ್ನು ಮಮತಾ ಶರ್ಮಾ ಹಾಗೂ ಪ್ರಿಯಾ ಹಿಮೇಶ್ ಹಾಡಿದ್ದಾರೆ. ಈ ಹಾಡಿನಲ್ಲಿ ಕುಣಿದಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಸುಮನ್, "ಹಾಡಿನ ನೃತ್ಯ ಸಂಯೋಜನೆ ಚೆನ್ನಾಗಿದೆ. ಸಾಹಿತ್ಯವೂ ಅಷ್ಟೇ ಸೊಗಸಾಗಿದೆ. ಸ್ಟೆಪ್ಸ್ ವೈವಿಧ್ಯಭರಿತವಾಗಿದ್ದು 3 ದಿನಗಳ ಕಾಲ ಶೂಟಿಂಗ್ ನಡೆಯಿತು. ಐ ಯಾಮ್ ಹ್ಯಾಪಿ" ಎಂದಿದ್ದಾರೆ.

  ಕಬ್ಬಿನಜಲ್ಲೆಯಂತಹ ತಾರೆ ಜೊತೆ ಹೆಜ್ಜೆ ಹಾಕಿರುವುದಕ್ಕೆ ನಮ್ಮ ಲೂಸ್ ಮಾದ ಯೋಗೇಶ್ ಕೂಡ ಆನಂದತುಂದಿಲರಾಗಿದ್ದರು. ಈ ಹಾಡಿನಲ್ಲಿ ಕುಣಿದಿರುವ ಬಗ್ಗೆ ಸಿಕ್ಕಾಪಟ್ಟೆ ಖುಷಿಯಾಗಿದ್ದರು ಯೋಗೇಶ್. ಅಂದಹಾಗೆ 'ಜಿಂಕೆಮರಿ' ಚಿತ್ರ ತೆಲುಗಿನ ಯಶಸ್ವಿ 'ಬಿಂದಾಸ್' ಚಿತ್ರದ ರೀಮೇಕ್.

  ಮಾದೇಶ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನವೀನ್ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ನಿರ್ಮಾಪಕರು ಸ್ವತಃ ಪಾತ್ರವೊಂದನ್ನು ಪೋಷಿಸುತ್ತಿದ್ದು ಪೊಲೀಸ್ ಅಧಿಕಾರಿಯಾಗಿ ಕಾಣಿಸಲಿದ್ದಾರೆ. ಸೋನಿಯಾ ಗೌಡ ಚಿತ್ರದ ನಾಯಕಿ. (ಒನ್ ಇಂಡಿಯಾ ಕನ್ನಡ)

  English summary
  Actress Suman Ranganath made a comeback after short break with the item number. The actress done a special item song in Yogesh and Sonia Gowda lead Kannada film Jinke Mari. The song lines starting from Bangarupete Bangari was picturised in a special set erected in Rockline Studios.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X