ಸಿಂಪಲ್ಲಾಗ್ ಮತ್ತೊಂದು ಚಿತ್ರ ಕೈಗೆತ್ತಿಕೊಂಡ ಸುನಿ
ಏತನ್ಮಧ್ಯೆಯೇ ಚಿತ್ರದ ನಿರ್ದೇಶಕ ಸುನಿ ಅವರು ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈ ಬಾರಿ ಅವರು ಚಿತ್ರಕ್ಕೆ ಸೀದಾ ಸಾದಾ ಎಂದು ಹೆಸರಿಟ್ಟಿದ್ದಾರೆ. ಇದು ಸ್ಕ್ರಿಪ್ಟ್ ಓರಿಯಂಟೆಡ್ ಸಿನಿಮಾ ಎನ್ನುತ್ತಾರೆ ನಿರ್ದೇಶಕರು.
ಮೊದಲ ಚಿತ್ರದ ಮೂಲಕವೇ ಗಾಂಧಿನಗರದ ಗಮನಸೆಳೆದ ಸುನಿ ಈ ಬಾರಿ ಏನೂ ಮಾಡುತ್ತಾರೋ ಎಂಬ ಕುತೂಹಲವಂತೂ ಇದ್ದೇ ಇದೆ. ಈ ಚಿತ್ರಕ್ಕೆ ನಿರ್ಮಾಪಕರು ಯಾರು? ತಾರಾಬಳಗ, ತಾಂತ್ರಿಕ ವರ್ಗದ ವಿವರಗಳು ಶೀಘ್ರದಲ್ಲೇ ಹೊರಬೀಳಲಿವೆ.
'ಸೀದಾ ಸಾದಾ' ಚಿತ್ರಕ್ಕೆ ಹೊಸಬರನ್ನೇ ಹಾಕಿಕೊಳ್ಳಬೇಕೋ ಅಥವಾ ಸ್ಟಾರ್ ನಟ ಹಾಕಿಕೊಳ್ಳಬೇಕು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆಯಂತೆ. ದೊಡ್ಡ ಬ್ಯಾನರ್ ಚಿತ್ರವಾಗಿರುವ ಕಾರಣ ಸ್ಟಾರ್ ಹೀರೋನೇ ನಾಯಕ ನಟನಾಗುವ ಸಾಧ್ಯತೆಗಳಿವೆ.
ಚಿತ್ರದ ಮೊದಲರ್ಧ ಗೊಂದಲದ ಗೂಡು. ಸೆಕೆಂಡ್ ಆಫ್ ನಲ್ಲಿ ಇವೆಲ್ಲಾಕ್ಕೂ ಉತ್ತರ ಸಿಗುತ್ತದೆ. ಪ್ರೇಕ್ಷಕನ ತಲೆಯಲ್ಲಿ ಕಥೆ ಗಿರಕಿ ಹೊಡೆಯುತ್ತಿರುತ್ತದೆ ಎಂದು ಹೇಳುವ ಮೂಲಕ ಸುನಿ ಅವರು ಮತ್ತಷ್ಟು ಗೊಂದಲ ಮೂಡಿಸಿದ್ದಾರೆ. ಅಂದಹಾಗೆ ಜೂನ್ 16ಕ್ಕೆ ಸೀದಾ ಸಾದಾ ಮುಹೂರ್ತವಂತೆ.


Click it and Unblock the Notifications












