»   » ಬೆಳ್ಳಿಹೆಜ್ಜೆಯಲ್ಲಿ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು

ಬೆಳ್ಳಿಹೆಜ್ಜೆಯಲ್ಲಿ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು

Posted By:
Subscribe to Filmibeat Kannada
SV Rajendra Singh Babu
ಕನ್ನಡ ಚಿತ್ರರಂಗದ ನಿರ್ದೇಶಕ ಹಾಗೂ ನಿರ್ಮಾಪಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಅವರು ಹಲವಾರು ಹಿಟ್ ಚಿತ್ರಗಳನ್ನು ಕೊಟ್ಟಂತಹವರು. ಅವರ ನಿರ್ದೇಶನದ ನಾಗರಹೊಳೆ, ಅಂತ, ಬಂಧನ, ಮುತ್ತಿನ ಹಾರ, ಹೂವು ಹಣ್ಣು, ಮುಂಗಾರಿನ ಮಿಂಚು, ಭೂಮಿ ತಾಯಿಯ ಚೊಚ್ಚಲ ಮಗ...ಮುಂತಾದ ಚಿತ್ರಗಳು ಇಂದಿಗೂ ಜನಾದರಣೀಯ.

ಮೈಸೂರಿನಲ್ಲಿ ಹುಟ್ಟಿ ಬೆಳೆದ ಬಾಬು ಅವರು ಕನ್ನಡ ಚಿತ್ರಗರಂಗದ ನಿರ್ಮಾಪಕ ದಿವಂಗತ ಶಂಕರ್ ಸಿಂಗ್ ಅವರ ಪುತ್ರ. ಮಹಾತ್ಮ ಲಾಂಛನದಲ್ಲಿ ಹಲವಾರು ಸದಭಿರುಚಿಯ ಚಿತ್ರಗಳನ್ನು ನಿರ್ಮಿಸಿದ ಸಂಸ್ಥೆ ಅವರದು.

ಈಗ ವಿಷಯ ಏನೆಂದರೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಮುನ್ನಡೆಸಿಕೊಂಡು ಬರುತ್ತಿರುವ 'ಬೆಳ್ಳಿಹೆಜ್ಜೆ' ಕಾರ್ಯಕ್ರಮದಲ್ಲಿ ಈ ಬಾರಿ ಅವರು ಚಿತ್ರರಸಿಕರಿಗೆ ಮುಖಾಮುಖಿಯಾಗಲಿದ್ದಾರೆ. ಈ ಹಿಂದೆ ಇದೇ 'ಬೆಳ್ಳಿಹೆಜ್ಜೆ' ಕಾರ್ಯಕ್ರಮದಲ್ಲಿ ಬಾಬು ಅವರ ತಾಯಿ ಪ್ರತಿಮಾ ದೇವಿ ಅವರು ಚಿತ್ರರಂಗದ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದರು.

ತಿರುಗುಬಾಣ (ಅಂಬರೀಶ್), ಕಲಿಯುಗ (ರಾಜೇಶ್), ಕೃಷ್ಣಾ ನೀ ಬೇಗನೆ ಬಾರೋ (ವಿಷ್ಣುವರ್ಧನ್), ಯುಗ ಪುರುಷ (ರವಿಚಂದ್ರನ್), ಬುದ್ಧಿವಂತ (ಉಪೇಂದ್ರ) ಸೇರಿದಂತೆ ಮುಂತಾದ ಚಿತ್ರಗಳನ್ನು ಬಾಬು ನಿರ್ಮಿಸಿದ್ದಾರೆ. ಕೇವಲ ಕನ್ನಡದಲ್ಲಷ್ಟೇ ಅಲ್ಲದೆ ಹಿಂದಿಯಲ್ಲೂ ಕೈಯಾಡಿಸಿದ ಅನುಭವ ಅವರದು.

ಇದೇ ಶನಿವಾರ (ಸೆ.22) ಸಂಜೆ 5 ಗಂಟೆಗೆ ಬೆಳ್ಳಿಹೆಜ್ಜೆ ಕಾರ್ಯಕ್ರಮ ಆರಂಭವಾಗಲಿದೆ. ಸ್ಥಳ: ಬಾದಾಮಿ ಹೌಸ್, ಜೆಸಿ ರಸ್ತೆ, ಬೆಂಗಳೂರು. ರಾಜೇಂದ್ರ ಸಿಂಗ್ ಬಾಬು ಅವರು ಸುತ್ತು ಬಳಸಿ ಮಾತನಾಡುವ ಪೈಕಿಯಲ್ಲ. ಅವರದು ಏನಿದ್ದರೂ ನೇರಾನೇರ ನುಡಿ. ಬೆಳ್ಳಿಹೆಜ್ಜೆ ಕಾರ್ಯಕ್ರಮಕ್ಕೆ ಹೋಗಿ ನೋಡಿ. (ಒನ್ಇಂಡಿಯಾ ಕನ್ನಡ)

English summary
Kannada film maker and producer S.V. Rajendra Singh Babu hsa the guest honour at ‘Belli Hejje’ programme of Karnataka Chalanachitra Academy. The programme held on 22nd Sept at Badami House in Bangalore at around 5 pm.
Please Wait while comments are loading...