»   » 50 ದಿನ ಪೂರೈಸಿದ 'ಟಗರು' : ಅಭಿಮಾನಿಗಳ ಜೊತೆಗೆ ಯಶಸ್ವಿ ಕಾರ್ಯಕ್ರಮ

50 ದಿನ ಪೂರೈಸಿದ 'ಟಗರು' : ಅಭಿಮಾನಿಗಳ ಜೊತೆಗೆ ಯಶಸ್ವಿ ಕಾರ್ಯಕ್ರಮ

Posted By:
Subscribe to Filmibeat Kannada

ಶಿವರಾಜ್ ಕುಮಾರ್ ಅಭಿನಯದ 'ಟಗರು' ಸಿನಿಮಾ ಈಗ 50 ದಿನ ಪೂರೈಸಿದೆ. ಫೆಬ್ರವರಿ 23ಕ್ಕೆ ರಿಲೀಸ್ ಆಗಿದ್ದ ಈ ಸಿನಿಮಾ ನಾಳೆಗೆ (ಶುಕ್ರವಾರ) ಸರಿಯಾಗಿ ಐವತ್ತು ದಿನವನ್ನು ಕಂಪ್ಲೀಟ್ ಮಾಡಲಿದೆ. ಈ ಸಂಭ್ರಮವನ್ನು ಅಭಿಮಾನಿಗಳ ಜೊತೆಗೆ ಆಚರಿಸಲು ಚಿತ್ರತಂಡ ಪ್ಲಾನ್ ಮಾಡಿದೆ.

ಈಗಾಗಲೇ, ರಾಜ್ಯದ ಅನೇಕ ಜಿಲ್ಲೆಗಳ ಚಿತ್ರಮಂದಿರಗಳಿಗೆ ಶಿವಣ್ಣ ಭೇಟಿ ನೀಡಿದ್ದರು. ಇದೀಗ ಐವತ್ತು ದಿನದ ವಿಶೇಷವಾಗಿ ಇದೇ ಶನಿವಾರ ಉಳಿದ ಕೆಲವು ಚಿತ್ರಮಂದಿರಗಳಿಗೆ ಶಿವಣ್ಣ ಹೋಗಲಿದ್ದಾರೆ. ಬೆಂಗಳೂರಿನ ಸಂತೋಷ್, ವಿರೇಶ್, ಗೋಪಾಲನ್ ಆರ್ಚ್, ಸಿದ್ಧಲಿಂಗೇಶ್ವರ ಚಿತ್ರಮಂದಿರಗಳಿಗೆ ಶಿವರಾಜ್ ಕುಮಾರ್ ಬೇಟಿ ನೀಡಲಿದ್ದಾರೆ. ಎಪ್ರಿಲ್ 15 ಎಂದು ಹಾಸನ, ಮಂಡ್ಯ, ಮೈಸೂರಿನ ಚಿತ್ರಮಂದಿರದಲ್ಲಿ 'ಟಗರು' ವಿಜಯಯಾತ್ರೆ ನಡೆಯಲಿದೆ. ಇವುಗಳ ನಂತರ ಸಿನಿಮಾ ಪ್ರದರ್ಶನ ದುಬೈನಲ್ಲಿ ನಡೆಯಲಿದೆ.

Tagaru kannada movie completed 50days

ವಿಮರ್ಶೆ: ಟಗರು ಖದರು, ಡಾಲಿ ಪೊಗರು, ಸ್ಕ್ರೀನ್ ಪ್ಲೇ ಸೂಪರ್ರು

ಅಂದಹಾಗೆ, 'ಟಗರು' ಸಿನಿಮಾವನ್ನು ಪ್ರೇಕ್ಷಕರು ಮಾತ್ರವಲ್ಲದೆ ಚಿತ್ರರಂಗದ ಅನೇಕರು ತುಂಬ ಇಷ್ಟ ಪಟ್ಟಿದ್ದಾರೆ. ಅದರಲ್ಲಿಯೂ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮ ಚಿತ್ರ ನೋಡಿ ಸಿಕ್ಕಾಪಟ್ಟೆ ಹೊಗಳಿದ್ದರು. ಸಿನಿಮಾದಲ್ಲಿ ಸೂರಿ ಮಾಡಿರುವ ಸ್ಕ್ರೀನ್ ಪ್ಲೇ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ಚಿತ್ರದ ಪಾತ್ರಗಳಾದ ಟಗರು ಶಿವ, ಡಾಲಿ, ಚಿಟ್ಟೆ, ಅಂಕಲ್, ಕಾನ್ಸಟೇಬಲ್ ಸರೋಜ, ಕಾಕ್ರೋಜ್ ಪಾತ್ರಗಳು ಎಲ್ಲರ ಮೆಚ್ಚುಗೆ ಗಳಿಸಿತು.

English summary
Actor Shiva Rajkumar's Tagaru kannada movie completed 50days. The movie is directed by Duniya Suri.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X