»   » ಚಿತ್ರದುರ್ಗದಲ್ಲಿ ಬಿಡುಗಡೆ ಆಗಲಿದೆ 'ಟಗರು' ಸಿನಿಮಾದ ಆಡಿಯೋ

ಚಿತ್ರದುರ್ಗದಲ್ಲಿ ಬಿಡುಗಡೆ ಆಗಲಿದೆ 'ಟಗರು' ಸಿನಿಮಾದ ಆಡಿಯೋ

Posted By:
Subscribe to Filmibeat Kannada

ಶಿವರಾಜ್ ಕುಮಾರ್ ಅಭಿನಯದ 'ಟಗರು' ಸಿನಿಮಾ ಈಗಾಗಲೇ ದೊಡ್ಡ ಕ್ರೇಜ್ ಸೃಷ್ಟಿ ಮಾಡಿದೆ. 'ಕಡ್ಡಿಪುಡಿ' ಚಿತ್ರದ ನಂತರ ಮತ್ತೆ ಶಿವಣ್ಣ ಮತ್ತು ನಿರ್ದೇಶಕ ಸೂರಿ ಒಂದಾಗಿದ್ದು, ಚಿತ್ರದ ಮೇಲಿನ ನಿರೀಕ್ಷೆ ಬೆಟ್ಟದಷ್ಟಿದೆ.

'ಟಗರು' ಸಿನಿಮಾ ತಂಡದಿಂದ ಈಗ ಆಡಿಯೋ ರಿಲೀಸ್ ಬಗ್ಗೆ ಮಾಹಿತಿ ಹೊರ ಬಂದಿದೆ. ಸಿನಿಮಾದ ಆಡಿಯೋ ಇದೇ ನವೆಂಬರ್ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ. ಅಂದಹಾಗೆ 'ಟಗರು' ಚಿತ್ರದ ಹಾಡುಗಳನ್ನು ಅದ್ದೂರಿ ಕಾರ್ಯಕ್ರಮದಲ್ಲಿ ಚಿತ್ರದುರ್ಗದಲ್ಲಿ ಬಿಡುಗಡೆ ಮಾಡುವುದಕ್ಕೆ ನಿರ್ಮಾಪಕ ಶ್ರೀ ಕಾಂತ್ ಪ್ಲಾನ್ ಮಾಡಿದ್ದಾರೆ.

'Tagaru' movie audio will be releaseing in Chitradurga.

ವಿಶೇಷ ಅಂದರೆ, ಶಿವಣ್ಣನ 'ಜೋಗಯ್ಯ', ಮೈಲಾರಿ, ಸೇರಿದಂತೆ ಕೆಲ ಸಿನಿಮಾಗಳು ಚಿತ್ರದುರ್ಗದಲ್ಲಿಯೇ ಆಡಿಯೋ ಬಿಡುಗಡೆಯಾಗಿತ್ತು. ಇನ್ನು 'ಟಗರು' ಚಿತ್ರಕ್ಕೆ 'ಗೋಧಿ ಬಣ್ಣ ಸಾಧಾರಣ ಮೈ ಕಟ್ಟು' ಖ್ಯಾತಿಯ ಚರಣ್ ರಾಜ್ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ನಟ ಧನಂಜಯ್, ವಸಿಷ್ಠ, ನಟಿ ಭಾವನ ಮತ್ತು ಮಾನ್ವಿತಾ ಹರೀಶ್ ಕಾಣಿಸಿಕೊಂಡಿದ್ದಾರೆ. 'ಟಗರು' ಸಿನಿಮಾ ಡಿಸೆಂಬರ್ ತಿಂಗಳಿನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

English summary
Actor Shiva Rajkumar's 'Tagaru' movie audio will be releaseing in Chitradurga.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X