»   » ಜಯನಗರದಿಂದ ಚುನಾವಣೆ ಸ್ಪರ್ಧೆ ಸುದ್ದಿ ಬಗ್ಗೆ ತಾರಾ ನೀಡಿದ ಸ್ಪಷ್ಟನೆ

ಜಯನಗರದಿಂದ ಚುನಾವಣೆ ಸ್ಪರ್ಧೆ ಸುದ್ದಿ ಬಗ್ಗೆ ತಾರಾ ನೀಡಿದ ಸ್ಪಷ್ಟನೆ

Posted By:
Subscribe to Filmibeat Kannada
ನಟಿ ತಾರಾ ಕೊಟ್ರು ಸ್ಪೋಟಕ ಸುದ್ದಿ !! | Filmibeat Kannada

ಕನ್ನಡ ಚಿತ್ರರಂಗ ಹಾಗೂ ರಾಜಕೀಯರಂಗ ಎರಡರಲ್ಲಿಯೂ ಗುರುತಿಸಿಕೊಂಡಿರುವ ನಟಿ ತಾರಾ ಜಯನಗರ ಕ್ಷೇತ್ರದಿಂದ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಾರೆ ಎನ್ನುವ ಸುದ್ದಿ ನಿನ್ನೆ ರಾತ್ರಿಯಿಂದ ಹರಿದಾಡುತ್ತಿದೆ. ಜಯನಗರದ ಕ್ಷೇತ್ರದಲ್ಲಿಯೇ ಸಾಕಷ್ಟು ವರ್ಷಗಳಿಂದ ವಾಸವಿರುವ ತಾರಾ ಅವರನ್ನು ಚುನಾವಣೆಯ ಕಣಕ್ಕೆ ಇಳಿಸುತ್ತಾರೆ ಎನ್ನುವ ಉಹಾಪೋಹ ಇತ್ತು.

ಜಯನಗರದ ಬಿಜೆಪಿ ಅಭ್ಯರ್ಥಿ ವಿಜಯಕುಮಾರ್ ಅವರ ನಿಧನದಿಂದ ಚುನಾವಣೆಯನ್ನು ಮುಂದೂಡಿದ್ದು ಆ ಸ್ಥಾನಕ್ಕೆ ತಾರಾ ಅನುರಾಧ ಸರಿಯಾದ ಆಯ್ಕೆ ಎನ್ನುವುದು ಪಕ್ಷದಲ್ಲಿ ಚರ್ಚೆ ಆಗಿದೆಯಂತೆ. ಅದಷ್ಟೇ ಅಲ್ಲದೆ ಸೌಮ್ಯ ರೆಡ್ಡಿ ಎದುರಿಗೆ ಮಹಿಳಾ ಅಭ್ಯರ್ಥಿಯನ್ನ ಸ್ಪರ್ಧೆಗಿಳಿಸುವುದು ಉತ್ತಮ ಎನ್ನುವ ಆಲೋಚನೆ ಸಹ ಇದೆಯಂತೆ. ಹೀಗಿರುವಾಗ ಇದೆಲ್ಲದರ ಬಗ್ಗೆ ಇದೀಗ ನಟಿ ತಾರಾ ಅವರೇ 'ಫಿಲ್ಮಿಬೀಟ್ ಕನ್ನಡ' ಜೊತೆಗೆ ಮಾತಾನಾಡಿದ್ದಾರೆ.

ಬೆಂಗಳೂರು ವಾಸಿಗಳ ಬದ್ಧತೆ ಬಗ್ಗೆ ಪ್ರಶ್ನಿಸಿದ ನಟ ಜಗ್ಗೇಶ್.!

Tara clarified about contesting in Karnataka assembly elections

''ನಾನು ಜಯನಗರದ ಬಿಜೆಪಿ ಅಭ್ಯರ್ಥಿ ಎಂಬ ಸುದ್ದಿ ನನಗೂ ಕೇಳಿ ಬಂದಿದೆ. ಆದರೆ ಪಕ್ಷದ ಕಡೆಯಿಂದ ನನಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಹಾಗೇನಾದರೂ ಅವಕಾಶ ಸಿಕ್ಕರೆ ಖಂಡಿತ ಸ್ಪರ್ಧಿಸುವೆ'' ಎಂದು ತಾರ ಸ್ಪಷ್ಟ ಪಡಿಸಿದ್ದಾರೆ.

ಅಂದಹಾಗೆ, ಜಯನಗರದಲ್ಲಿ ಹುಟ್ಟು ಬೆಳೆದಿರುವ ತಾರಾ ಅಲ್ಲಿನ ಜನತೆಗೆ ತುಂಬಾ ಪರಿಚಿತರು. ಅಷ್ಟೇ ಅಲ್ಲದೆ, ಮಾಜಿ ಶಾಸಕ ವಿಜಯಕುಮಾರ್ ಅವರ ಜೊತೆಯಲ್ಲಿ ಚುನಾವಣಾ ಪ್ರಚಾರವನ್ನು ಮಾಡಿದ್ದರು. ಇದೇ ಕಾರಣದಿಂದ ಇವೆಲ್ಲವೂ ಚುನಾವಣೆಗೆ ಪ್ಲಸ್ ಪಾಯಿಂಟ್ ಆಗುತ್ತೆ ಎನ್ನುವ ಲೆಕ್ಕಾಚಾರ ಬಿಜೆಪಿ ಪಕ್ಷದವರದ್ದು ಎನ್ನಲಾಗುತ್ತಿದೆ.

English summary
The news is that the Kannada actress Tara is contesting from Jayanagar in Karnataka assembly elections. Tara clarified about contesting in Karnataka assembly elections.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X