»   » 'ಮಾಸ್ ಲೀಡರ್' ನಮ್ಮದು.! ನೀವ್ಯಾರ್ರೀ ಪರ್ಮಿಷನ್ ಕೊಡೋಕೆ.?

'ಮಾಸ್ ಲೀಡರ್' ನಮ್ಮದು.! ನೀವ್ಯಾರ್ರೀ ಪರ್ಮಿಷನ್ ಕೊಡೋಕೆ.?

Posted By:
Subscribe to Filmibeat Kannada

ಬರೋಬ್ಬರಿ ಮೂರು ವರ್ಷಗಳಿಂದ 'ಲೀಡರ್' ಶೀರ್ಷಿಕೆ ವಿವಾದದಿಂದ ಬೇಸೆತ್ತಿರುವ ನಿರ್ಮಾಪಕ ತರುಣ್ ಶಿವಪ್ಪ ಫೇಸ್ ಬುಕ್ ನಲ್ಲಿ ಸಿಡಿದೆದ್ದಿದ್ದಾರೆ. ನಿರ್ದೇಶಕ ಎ.ಎಂ.ಆರ್.ರಮೇಶ್ ವಿರುದ್ಧ ತರುಣ್ ತಿರುಗಿ ಬಿದ್ದಿದ್ದಾರೆ.

ಮೂರು ವರ್ಷಗಳ ಹಿಂದೆ 'ಲೀಡರ್' ಟೈಟಲ್ ಕಾಂಟ್ರವರ್ಸಿ ಬಗೆ ಹರಿದ್ಮೇಲೆ, ಚಿತ್ರೀಕರಣಕ್ಕೆ ಚಾಲನೆ ನೀಡಲಾಗಿತ್ತು. ಇನ್ನೇನು 'ಲೀಡರ್' ಶೂಟಿಂಗ್ ಗೆ ಕುಂಬಳಕಾಯಿ ಹೊಡೆಯಬೇಕು ಎನ್ನುವಾಗ ಎ.ಎಮ್.ಆರ್.ರಮೇಶ್ 'ಲೀಡರ್' ಟೈಟಮ್ ನಮ್ಮದು ಅಂತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮೆಟ್ಟಿಲೇರಿದ್ದರು.[ನಿಲ್ಲದ 'ಲೀಡರ್' ಟೈಟಲ್ ವಿವಾದ: ಫಿಲ್ಮ್ ಚೇಂಬರ್ ವಿರುದ್ಧ AMR ರಮೇಶ್ ಕೆಂಡಾಮಂಡಲ]

ಫಿಲ್ಮ್ ಚೇಂಬರ್ ಬಳಿ ಪ್ರತಿಭಟನೆ ನಡೆಸಿದ್ಮೇಲೆ, 'ಮಾಸ್ ಲೀಡರ್' ಶೀರ್ಷಿಕೆಯನ್ನ 'ತರುಣ್ ಟಾಕೀಸ್' ರವರಿಗೆ ಬಿಟ್ಟುಕೊಡಲು ಅನುಮತಿ ನೀಡುತ್ತೇನೆ ಅಂತ ಫೇಸ್ ಬುಕ್ ನಲ್ಲಿ ಎ.ಎಮ್.ಆರ್.ರಮೇಶ್ ಪೋಸ್ಟ್ ಮಾಡಿದ್ದರು. ಇದರಿಂದ ಕಣ್ಣು ಕೆಂಪಗೆ ಮಾಡಿಕೊಂಡಿರುವ ನಿರ್ಮಾಪಕ ತರುಣ್ ಶಿವಪ್ಪ, '''ಮಾಸ್ ಲೀಡರ್' ನಮ್ಮದು.! ನೀವ್ಯಾರ್ರೀ ಪರ್ಮಿಷನ್ ಕೊಡೋಕೆ.?'' ಅಂತ ಕಿಡಿಕಾರಿದ್ದಾರೆ. ಮುಂದೆ ಓದಿ....

ಫೇಸ್ ಬುಕ್ ನಲ್ಲಿ ತರುಣ್ ಶಿವಪ್ಪ ಸಿಡಿಮಿಡಿ

'ಲೀಡರ್' ಶೀರ್ಷಿಕೆ ಕುರಿತು ಹೊಸ ತಗಾದೆ ತೆಗೆದಿರುವ ನಿರ್ದೇಶಕ ಎ.ಎಂ.ಆರ್.ರಮೇಶ್ ವಿರುದ್ಧ ಫೇಸ್ ಬುಕ್ ನಲ್ಲಿ ನಿರ್ಮಾಪಕ ತರುಣ್ ಶಿವಪ್ಪ ಸಿಡಿಮಿಡಿಗೊಂಡಿದ್ದಾರೆ.[ಶಿವಣ್ಣನ 'ಲೀಡರ್' ಚಿತ್ರಕ್ಕೆ ಮಗದೊಂದು ಬಾರಿ ಶೀರ್ಷಿಕೆ ಕಂಟಕ.! ]

ತರುಣ್ ಶಿವಪ್ಪ ಫೇಸ್ ಬುಕ್ ಸ್ಟೇಟಸ್ ಏನು.?

''ಮಿ.ರಮೇಶ್ ಮೊಟ್ಟ ಮೊದಲನೇಯದಾಗಿ 'ಮಾಸ್ ಲೀಡರ್' ಟೈಟಲ್ ನಮ್ಮದು. ಶೀರ್ಷಿಕೆ ಬಳಸಲು ನಮಗೆ ಪರ್ಮಿಷನ್ ಕೊಡೋಕೆ ನೀವ್ಯಾರು.? ನಮಗೆ ಶೀರ್ಷಿಕೆ ಕೊಟ್ಟಿರುವುದು ವಾಣಿಜ್ಯ ಮಂಡಳಿ. ನಿಮ್ಮ ಕೆಲಸವನ್ನ ನೀವು ನೋಡಿಕೊಳ್ಳಿ. ದೊಡ್ಡ ತ್ಯಾಗ ಮಾಡಿರುವ ಹಾಗೆ ತೋರಿಕೆ ಬೇಡ'' ಎಂದು ಫೇಸ್ ಬುಕ್ ನಲ್ಲಿ ತರುಣ್ ಶಿವಪ್ಪ ಬರೆದುಕೊಂಡಿದ್ದಾರೆ.

ಎ.ಎಮ್.ಆರ್.ರಮೇಶ್ ಹೇಳಿದ್ದೇನು.?

''ಚಿತ್ರವೊಂದಕ್ಕೆ ನಿರ್ಮಾಪಕ ಹಾಕುವ ದುಡ್ಡು ಹಾಗೂ ಶ್ರಮಕ್ಕೆ ಬೆಲೆ ಕೊಟ್ಟು ನಾನು 'ತರುಣ್ ಟಾಕೀಸ್' ರವರಿಗೆ 'ಮಾಸ್ ಲೀಡರ್' ಶೀರ್ಷಿಕೆ ಬಳಕೆ ಮಾಡಲು ಅನುಮತಿ ನೀಡಲು ನಿರ್ಧರಿಸಿದ್ದೇನೆ. 'ಲೀಡರ್' ಶೀರ್ಷಿಕೆ ನನ್ನ ಬಳಿಯೇ ಇರಲಿದೆ. ಹೀಗಾಗಿ 'ಮಾಸ್ ಲೀಡರ್' ಶೀರ್ಷಿಕೆ ಬಳಕೆ ಮಾಡಲು ಇರುವ ನಿಯಮಗಳನ್ನ 'ತರುಣ್ ಟಾಕೀಸ್' ಅನುಸರಿಸುತ್ತಾರೆಂದು ಭಾವಿಸುತ್ತೇನೆ. ಒಂದ್ವೇಳೆ ನಿಯಮ ಮುರಿದರೆ, ನ್ಯಾಯಕ್ಕಾಗಿ ನಾನು ಮತ್ತೆ ಹೋರಾಡುತ್ತೇನೆ. 'ಲೀಡರ್' ಶೀರ್ಷಿಕೆಯನ್ನ 'ಮಾಸ್ ಲೀಡರ್' ಆಗಿ ಬದಲಿಸಲು ತರುಣ್ ಟಾಕೀಸ್ ರವರಿಗೆ 15-20 ದಿನಗಳ ಗಡುವು ನೀಡುತ್ತೇನೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಡಿರುವ ಅನ್ಯಾಯದಿಂದ ನನಗೆ ನೋವಾಗಿದೆ'' ಎಂದು ನಿನ್ನೆಯಷ್ಟೇ ಫೇಸ್ ಬುಕ್ ನಲ್ಲಿ ನಿರ್ದೇಶಕ ಎ.ಎಮ್.ಆರ್.ರಮೇಶ್ ಪೋಸ್ಟ್ ಮಾಡಿದ್ದರು.

'ಮಾಸ್ ಲೀಡರ್' ಪೋಸ್ಟರ್ ಹರಿದಾಡುತ್ತಿದೆ.!

ಶೀರ್ಷಿಕೆ ವಿವಾದಕ್ಕೆ ಫುಲ್ ಸ್ಟಾಪ್ ಇಡಲು ಈಗಾಗಲೇ ಶಿವಣ್ಣ ಅಭಿನಯದ ಚಿತ್ರಕ್ಕೆ 'ಮಾಸ್ ಲೀಡರ್' ಎಂಬ ಶೀರ್ಷಿಕೆ ಇರುವ ಪೋಸ್ಟರ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

English summary
Producer Tarun Shivappa is annoyed with Director AMR Ramesh

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada