For Quick Alerts
  ALLOW NOTIFICATIONS  
  For Daily Alerts

  'ದಿ ವಿಲನ್' ಟೀಸರ್ ಟಿಕೆಟ್ ಕೊಂಡವರಿಗೆ ಧನ್ಯವಾದ ಹೇಳಿದ ಕಿಚ್ಚ

  By Naveen
  |
  500 ರೂಪಾಯಿ ಕೊಟ್ಟು ದಿ ವಿಲನ್ ಟೀಸರ್ ಟಿಕೆಟ್ ಕೊಂಡವರಿಗೆ ಕಿಚ್ಚ ಏನಂದ್ರು ಗೊತ್ತಾ..!?

  ಅಂತೂ ನಟ ಶಿವರಾಜ್ ಕುಮಾರ್ ಹಾಗೂ ಸುದೀಪ್ ಅಭಿಮಾನಿಗಳು ಕಾಯುತ್ತಿದ್ದ ಘಳಿಗೆ ಬಂದಿದೆ. ಈ ವರ್ಷದ ಬಹು ನಿರೀಕ್ಷಿತ ಚಿತ್ರ 'ದಿ ವಿಲನ್' ಸಿನಿಮಾದ ಟೀಸರ್ ನಾಳೆ ಬಿಡುಗಡೆಯಾಗಲಿದೆ.

  ಈ ಚಿತ್ರದ ಟೀಸರ್ ನೋಡುವುದಕ್ಕೆ 500 ರೂಪಾಯಿ ಕೊಟ್ಟು ಟಿಕೆಟ್ ಖರೀದಿ ಮಾಡಬೇಕಾಗಿದೆ. ಈಗಾಗಲೇ ಬಹುತೇಕ ಟಿಕೆಟ್ ಗಳ ಮಾರಾಟ ಆಗಿವೆ. ವಿಶೇಷ ಅಂದರೆ, ಒಂದು ಚಿತ್ರದ ಟೀಸರ್ ಗೆ ನೋಡುವುದಕ್ಕೆ 500 ರೂಪಾಯಿ ಟಿಕೆಟ್ ಮಾಡಿರುವುದು ಇದೇ ಮೊದಲು. ಇನ್ನು ಈ ಟಿಕೆಟ್ ನಿಂದ ಬಂದ ಹಣವನ್ನು ಕಷ್ಟದಲ್ಲಿ ಇರುವ ನಿರ್ದೇಶಕರಿಗೆ ನೀಡಲಾಗುತ್ತದೆ.

  ಇವ್ರೆಲ್ಲ 500 ರೂಪಾಯಿ ಕೊಟ್ಟು 'ದಿ ವಿಲನ್' ಟೀಸರ್ ಟಿಕೆಟ್ ಕೊಂಡ್ಕೊಂಡ್ರು ಇವ್ರೆಲ್ಲ 500 ರೂಪಾಯಿ ಕೊಟ್ಟು 'ದಿ ವಿಲನ್' ಟೀಸರ್ ಟಿಕೆಟ್ ಕೊಂಡ್ಕೊಂಡ್ರು

  ಅಂದಹಾಗೆ, ಟೀಸರ್ ನೋಡುವುದಕ್ಕೆ ಟಿಕೆಟ್ ಕೊಂಡುಕೊಂಡ ಅಭಿಮಾನಿಗಳಿಗೆ ಸುದೀಪ್ ಧನ್ಯವಾದ ಹೇಳಿದ್ದರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸುದೀಪ್ ''ನಾಳೆ 'ದಿ ವಿಲನ್' ಚಿತ್ರದ ಟೀಸರ್ ಬಿಡುಗಡೆಯಾಗುತ್ತಿದ್ದು, ನಿರ್ದೇಶಕ ಪ್ರೇಮ್ ಅವರಿಗೆ ಶುಭಾಶಯ ಕೋರುತ್ತೇನೆ. ಜೊತೆಗೆ ಟೀಸರ್ ನೋಡುವುದಕ್ಕೆ ಟಿಕೆಟ್ ಖರೀದಿ ಮಾಡಿರುವ ಎಲ್ಲರಿಗೆ ಧನ್ಯವಾದ'' ಎಂದಿದ್ದಾರೆ.

  ಇನ್ನು 'ದಿ ವಿಲನ್' ಚಿತ್ರದ ಟೀಸರ್ ನಾಳೆ ಸಂಜೆ 7 ಗಂಟೆಗೆ ಮಾಗಡಿ ರಸ್ತೆಯ ಜಿಟಿ ಮಾಲ್ ನಲ್ಲಿ ರಿಲೀಸ್ ಆಗಲಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಗಣ್ಯಾತಿಗಣ್ಯರು ಭಾಗಿಯಾಗಲಿದ್ದಾರೆ.

  'ದಿ ವಿಲನ್' ಸ್ಯಾಂಡಲ್ ವುಡ್ ನ ಈ ವರ್ಷದ ಬಹು ನಿರೀಕ್ಷಿತ ಸಿನಿಮಾವಾಗಿದೆ. ಮೊದಲ ಬಾರಿಗೆ ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಹಾಗೂ ಸುದೀಪ್ ಒಂದಾಗಿದ್ದಾರೆ. ಆಮಿ ಜಾಕ್ಸನ್ ಚಿತ್ರ ನಾಯಕಿಯಾಗಿದ್ದು, ಈ ಚಿತ್ರದ ಮೂಲಕ ಅವರು ಕನ್ನಡಕ್ಕೆ ಕಾಲಿಟ್ಟಿದ್ದಾರೆ. ಸಿನಿಮಾ ಈ ವರ್ಷದ ವರಮಹಾಲಕ್ಷ್ಮಿ ಹಬ್ಬದ ಪ್ರಯಕ್ತ ಬಿಡುಗಡೆಯಾಗಲಿದೆ.

  English summary
  Actor Sudeep and Shivarajkumar starring 'The Villain' teaser will be releasing tomorrow. The movie is directed by Prem.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X