»   » ಥಿಯೇಟರ್ ಹಿಡಿಯೋಕು ಮಾಸ್ಟರ್ ಮೈಂಡ್ ಬೇಕು

ಥಿಯೇಟರ್ ಹಿಡಿಯೋಕು ಮಾಸ್ಟರ್ ಮೈಂಡ್ ಬೇಕು

By: ಜೀವನರಸಿಕ
Subscribe to Filmibeat Kannada

ಉಸ್ಸಪ್ಪಾ ಅಂಥ ನಿಟ್ಟುಸಿರು ಬಿಟ್ಟಿದ್ದಾರೆ 'ಶ್' ಖ್ಯಾತಿಯ ಕುಮಾರ್ ಗೋವಿಂದ್. ಒಳ್ಳೆಯ ಸಿನಿಮಾ ಮಾಡಿದ್ದೀನಿ. 'ಮಾಸ್ಟರ್ ಮೈಂಡ್' ಚಿತ್ರ ಮಸ್ತ್ ಥ್ರಿಲ್ಲರ್. ಚಿತ್ರವನ್ನ ಬೇಗ ಥಿಯೇಟರ್ ಗೆ ತರಬೇಕು ಅಂತ.

ಆದ್ರೆ ಎರಡು ವರ್ಷದಿಂದ ಥಿಯೇಟರ್ ಗಾಗಿ ಕಾದುಕಾದು ಕಂಗಾಲಾಗಿ ಕೊನೆಗೆ ಯಾವುದೋ ಒಂದು ಥಿಯೇಟರ್ ಸಾಕು ಅಂಥ ನಿರ್ಧಾರ ಮಾಡಿ ಸಿನಿಮಾ ರಿಲೀಸ್ ಮಾಡ್ತಿದ್ದಾರೆ ಕುಮಾರ್ ಗೋವಿಂದ್.

ಹೊಸ ಪ್ರತಿಭೆಗಳನ್ನ ನಂಬಿ ಸಿನಿಮಾ ಮಾಡಿರೋ ಹಿರಿಯ ನಟ ಚಿತ್ರ ಭರ್ಜರಿ ಯಶಸ್ಸು ಕಾಣುತ್ತೆ ಅನ್ನೋ ನಂಬಿಕೆಯಲ್ಲಿದ್ದಾರೆ. ಕೆಜಿ ರೋಡ್ ನಲ್ಲಿ ಒಂದು ಥಿಯೇಟರ್ ಗೆ ಎರಡು ವರ್ಷ ಸರ್ಕಸ್ ಮಾಡಿರೋ ನಿರ್ದೇಶಕರು ಈ ವಾರ (ಮಾ.13) ಸಿನಿಮಾವನ್ನ ತೆರೆಗೆ ತರ್ತಿದ್ದಾರೆ.

Theater problem for Kumar Govind's 'Master Mind'

ಥ್ರಿಲ್ಲರ್ ಸಿನಿಮಾ ಅಂದ್ರೆ ಥ್ರಿಲ್ಲಾಗೋ ನಿರ್ದೇಶಕ ಕುಮಾರ್ ಗೋವಿಂದ್ ಚಿತ್ರದ ಆಡಿಯೋ ರಿಲೀಸನ್ನು ತಮ್ಮ ಗೆಳೆಯ ರಿಯಲ್ ಸ್ಟಾರ್ ಉಪೇಂದ್ರ ಅವರಿಂದ ಮಾಡಿಸಿದ್ರು. 2012ರಲ್ಲಿ ತಯಾರಾದ ಚಿತ್ರ ಥಿಯೇಟರ್ ಗಾಗಿ ಕಾದೂಕಾದೂ ಸುಸ್ತಾಗಿ ಅಂತೂ ಇಂತೂ ಮಾರ್ಚ್ 13ಕ್ಕೆ ತೆರೆಗೆ ಬರ್ತಿದೆ.

ಮಾಸ್ಟರ್ ಮೈಂಡ್ ಚಿತ್ರದ ಟ್ರೈಲರ್ ಥ್ರಿಲ್ಲಿಂಗ್ ಆಗಿದ್ದು ಚಿತ್ರದ ಬಗ್ಗೆ ಒಂದು ಮಟ್ಟಿಗಿನ ನಿರೀಕ್ಷೆಯಂತೂ ಇದೆ. ಈ ಥ್ರಿಲ್ಲರ್ ಚಿತ್ರಕ್ಕೆ ಕುಮಾರ್ ಗೋವಿಂದ್ ಅವರೇ ಚಿತ್ರಕಥೆ ಬರೆದಿದ್ದಾರೆ. ಕಿಡ್ನಾಪ್ ಒಂದರ ವೃತ್ತಾಂತದ 'ಎ ವೆಡ್ ನೆಸ್ ಡೇ' ಚಿತ್ರದ ಸ್ಫೂರ್ತಿ ಈ ಚಿತ್ರಕ್ಕಿದೆ.

ಗೌತಮ್ ಶ್ರೀವತ್ಸ ಅವರ ಸಂಗೀತ ಹಾಗೂ ಎಸಿ ಮಹೇಂದ್ರನ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಕೇವಲ ಕನ್ನಡದಲ್ಲಷ್ಟೇ ಅಲ್ಲದೆ ತೆಲುಗು, ತಮಿಳು ಹಾಗೂ ಮಲಯಾಳಂನಲ್ಲೂ ಚಿತ್ರ ತೆರೆಕಾಣುತ್ತಿದೆ. ಹುಬ್ಬಳ್ಳಿಯ ಹುಡುಗಿ ಭಕ್ತಿ, ದಿವ್ಯಾ ಗೌಡ ಹಾಗೂ ಬುಲೆಟ್ ಪ್ರಕಾಶ್ ಚಿತ್ರದ ಪಾತ್ರವರ್ಗದಲ್ಲಿದ್ದಾರೆ.

English summary
Actor, director and producer Kumar Govind's multilingual movie 'Master Mind' is all set for release on 13th March, 2015. But the thriller movie is facing theater problem.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada