For Quick Alerts
  ALLOW NOTIFICATIONS  
  For Daily Alerts

  ಎಲ್ಲರ ಕಣ್ಣು ತಪ್ಪಿಸಿ ಡೈರೆಕ್ಟರ್ ಜೊತೆ ನಾಯಕಿ ಜೂಟ್

  By ಅನಂತರಾಮು, ಹೈದರಾಬಾದ್
  |

  ಸಿನಿಮಾ ಶೂಟಿಂಗ್ ಗೆ ಎಂದು ಲಾಡ್ಜ್ ಗೆ ಬಂದ ಹೀರೋಯಿನ್ ಒಬ್ಬರು ಕಾಣೆಯಾಗಿದ್ದಾರೆ. ಈಕೆಯ ಹೆಸರು ದಿವ್ಯಾ ಪ್ರತಿಭಾ (22), ಇನ್ನೂ ಉದಯೋನ್ಮುಖ ತಾರೆ. ಈ ಘಟನೆ ಹೈದರಾಬಾದಿನ ಚೈತನ್ಯಪುರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  ಆಂಧ್ರ ಪೊಲೀಸರ ಪ್ರಕಾರ, ವಿಜಯನಗರ ಜಿಲ್ಲೆಗೆ ಸೇರಿದ ದಿವ್ಯ ಪ್ರತಿಭಾ ಸಿನಿಮಾ ಶೂಟಿಂಗ್ (ಇನ್ನೂ ಹೆಸರಿಡ ಚಿತ್ರ) ಬಂದಿದ್ದರು. ದಿಲ್ ಸುಖ್ ನಗರದ ಡಿಬಿಆರ್ ಲಾಡ್ಜ್ ನಲ್ಲಿ ರಾತ್ರಿ ತಂಗಿದ್ದರು. ಮರುದಿನ ಶೂಟಿಂಗ್ ಗೆ ಹೋಗಬೇಕಾಗಿದ್ದರು ಕಾಣೆಯಾಗಿದ್ದಾರೆ.

  ಆದರೆ ಅದೇ ಚಿತ್ರದ ಡೈರೆಕ್ಟರ್ ಶಿವ ಎಂಬುವವರು ನಾಪತ್ತೆಯಾಗಿದ್ದಾರೆ. ದಿವ್ಯ ಪ್ರತಿಭಾ ನಾಪತ್ತೆ ಹಿಂದೆ ಶಿವನ ಕೈವಾಡವಿದೆ ಎಂದು ಆಕೆಯ ತಂದೆ ಅಂಬಟಿ ಕುಮಾರ್ ಆರೋಪಿಸಿದ್ದಾರೆ. ಈ ಸಂಬಂಧ ಅವರು ಪೊಲೀಸರಿಗೂ ದೂರು ನೀಡಿದ್ದಾರೆ. ಕೇಸು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  ತೆಲುಗಿನ ಕಂದಿರೀಗ ಎಂಬ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ದಿವ್ಯಾ ಅಭಿನಯಿಸಿದ್ದರು. ಸದ್ಯಕ್ಕೆ ರೋಡ್ ನಂ.76, ಚಂಚಲ್ ಗೂಡ ಏರಿಯಾ ಎಂಬ ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ. ಈಕೆಯ ಹಲವಾರು ಚಿತ್ರಗಳು ಇನ್ನೂ ಚಿತ್ರೀಕರಣ ಹಂತದಲ್ಲಿವೆ. ಆದರೆ ಈಕೆ ಆಗಲೇ ಡೈರೆಕ್ಟರ್ ಜೊತೆ ಜೂಟ್ ಹೇಳಿ ಬಡಪಾಯಿ ನಿರ್ಮಾಪಕರ ಹೊಟ್ಟೆಗೆ ತಣ್ಣೀರು ಬಟ್ಟೆ ಕೊಟ್ಟಿದ್ದಾರೆ.

  English summary
  A complaint about a Tollywood actress Divya Pratibha who went missing from this Sunday was lodged with the City Police by her Father. She is acted in Kandireega film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X