For Quick Alerts
ALLOW NOTIFICATIONS  
For Daily Alerts

  ಬಾಲಿವುಡ್ ಟಾಪ್ 5 ಬಿಕಿನಿ ಬೆಡಗಿಯರು 2012

  By ರವಿಕಿಶೋರ್
  |

  ಐಟಂ ಹಾಡಿನಷ್ಟೇ ಬಿಕಿನಿ ಸನ್ನಿವೇಶಗಳಿಗೂ ಡಿಮ್ಯಾಂಡ್ ಇದೆ. ಹಾಗಾಗಿ ಈ ಎರಡೂ ವಿಚಾರಗಳಲ್ಲಿ ಬಾಲಿವುಡ್ ಚಿತ್ರಗಳು ಹಿಂದೆ ಬಿದ್ದಿಲ್ಲ. ಬಣ್ಣಬಣ್ಣದ ಬಿಕಿನಿಗಳೊಂದಿಗೆ ತಾರೆಯರನ್ನು ತೋರಿಸುತ್ತಲೇ ಇವೆ. ಆದರೆ 2012ರ ಟಾಪ್ 5 ಬಿಕಿನಿ ತಾರೆಗಳು ಯಾರು?

  ಈ ವರ್ಷ ಬಹಳಷ್ಟು ತಾರೆಗಳು ಬಿಕಿನಿಯಲ್ಲಿ ಕಂಗೊಳಿಸಿದರಾದರೂ ಕೆಲವರು ಬಿಕಿನಿ ಹಾಕಿದರೂ ಹಾಕದಿದ್ದರೂ ಅಷ್ಟೇನು ಸುದ್ದಿ ಮಾಡಲಿಲ್ಲ. ಈ ಬಿಕಿನಿ ಬಗ್ಗೆ ಒಂಚೂರು ಇತಿಹಾಸದ ಪುಟಗಳನ್ನು ತಿರುಗಿಸಿದರೆ, ನೂತನ್ ಎಂಬ ತಾರೆ ಮೊದಲು ಈಜುಡುಗೆಯಲ್ಲಿ ಚಿತ್ರರಸಿಕರನ್ನು ಐವತ್ತರ ದಶಕದಲ್ಲೇ ಬೆವರುವಂತೆ ಮಾಡಿದ್ದರು.

  ದೀಪಿಕಾ ಪಡುಕೋಣೆ 'ಕಾಕ್ ಟೈಲ್'

  ನೀವಿಲ್ಲಿ ನೋಡುತ್ತಿರುವುದು 'ಕಾಕ್ ಟೇಲ್; ಚಿತ್ರದ ದೃಶ್ಯ. ಕೆಂಪು ಬಿಕಿನಿಯಲ್ಲಿ ದೀಪಿಕಾ ಪಡುಕೋಣೆ ಪಡ್ಡೆಗಳ ನಿದ್ದೆಗೆಡಿಸಿದರು. ದೀಪಿಕಾ ಮೈಮಾಟ ಬಿಕಿನಿಗೆ ಹೇಳಿಮಾಡಿಸಿದಂತಿದೆ. ಹಾಗಾಗಿಯೇ ಕೆಂಪು ಬಿಕಿನಿಯಲ್ಲಿ ಸಖತ್ ಕೂಲ್ ಆಗಿ ಕಾಣಿಸುತ್ತಿದ್ದಾರೆ.

  ತಾರೆ ಸನ್ನಿ ಲಿಯೋನ್ ಬಿಕಿನಿ ಚೆಲುವು

  ಮೊದಲೇ ಈಕೆ ನೀಲಿ ಚಿತ್ರಗಳ ತಾರೆ. ಇನ್ನು ಬಿಕಿನಿ ಎಂದರೆ ಕೇಳಬೇಕೆ. 'ಜಿಸ್ಮ್ 2' ಚಿತ್ರ ಓಡಿದ್ದೇ ಈಕೆಯ ಸಲುವಾಗಿ. ಚಿತ್ರದಲ್ಲಿ ಈಕೆಯ ಅಂದಚೆಂದ, ವೈಯ್ಯಾರ ಬಿಟ್ಟರೆ ಇನ್ನೇನು ಇರಲಿಲ್ಲ. ಇನ್ನೇನು ಬೇಕು ಬಿಡಿ. ಹಾಟ್ ದೃಶ್ಯಗಳಿಂದ ಚಿತ್ರ ಗೆದ್ದಿತು.

  ಅನುಷ್ಕಾ ಶರ್ಮಾ ಬಿಕಿನಿ ಮಾಯಾಜಾಲ

  ಬೆಂಗಳೂರಿನಲ್ಲೇ ಬಹಳಷ್ಟು ಕಾಲ ವಾಸವಿದ್ದ ತಾರೆ ಅನುಷ್ಕಾ ಶರ್ಮಾ. ಈಕೆಗೆ ಕನ್ನಡ ಭಾಷೆಯೂ ಗೊತ್ತು. ಜಬ್ ತಕ್ ಹೈ ಜಾನ್ ಚಿತ್ರದಲ್ಲಿ ಬಿಕಿನಿಯಲ್ಲಿ ದರ್ಶನ ನೀಡುವ ಮೂಲಕ ತಾವೂ ಏನೇನು ಕಮ್ಮಿ ಇಲ್ಲ ಎಂದು ಇತರೆ ಬಾಲಿವುಡ್ ತಾರೆಗಳಿಗೆ ಶಾಖ್ ನೀಡಿದರು.

  ಬಿಪಾಶಾ ಬಸು ಬಿಕಿನಿ ಸೀನ್ ಮನಮೋಹಕ

  ಚುಂಬನ ದೃಶ್ಯಗಳಿಂದ ಫೇಮಸ್ ಆಗಿದ್ದ ಬಿಪಾಶಾ ಬಸು ಕೂಡ ಬಿಕಿನಿಗೆ ಶರಣೆಂದರು. ಪ್ಲೇಯರ್ಸ್ ಚಿತ್ರದಲ್ಲಿ ಈಕೆಯ ಮೈಮಾಟ ನೋಡಿದವರು ದಂಗಾದರು. ಯೋಗ, ವ್ಯಾಯಾಮ ಮಾಡಿ ತಮ್ಮ ದೇಹದ ಸೌಂದರ್ಯವನ್ನು ವರ್ಧಿಸಿಕೊಂಡಿದ್ದರು.

  ತಾರೆ ಶಹಜಹಾನ್ ಬಿಕಿನಿ ಹೌಸ್ ಫುಲ್

  ಬೆರೆಳೆಣಿಕೆಯಷ್ಟು ಹಿಂದಿ ಚಿತ್ರಗಳಲ್ಲಿ ಅಭಿನಯಿಸಿರುವ ಶಹಜಹಾನ್ ತೆಲುಗು, ತಮಿಳು ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ಹಿಂದಿಯ ಹೌಸ್ ಫುಲ್ 2 ಚಿತ್ರದಲ್ಲಿ ಬಿಕಿನಿ ತೊಡುವ ಮೂಲಕ ಎಲ್ಲರ ಕಣ್ಣುಕುಕ್ಕಿದರು.


  ಅದು ಈಜುಡೆಗೆ ಮಾತಾಯಿತು. ಆದರೆ ಮೊಟ್ಟ ಮೊದಲ ಬಾರಿಗೆ ಬಿಕಿನಿ ತೊಟ್ಟಿದ್ದು ಮಾತ್ರ ಶರ್ಮಿಳಾ ಠಾಗೋರ್. ಆ ಚಿತ್ರದ ಹೆಸರು An Evening in Paris. ಅಲ್ಲಿಯವರೆಗೂ ಬಿಕಿನಿ ಎಂದರೆ ಸಾಕು ನಟಿಯರು ಬೆವರುತ್ತಿದ್ದರು. ಈಗ ಪರಿಸ್ಥಿತಿ ಉಲ್ಟಾ ಆಗಿದೆ.

  ಬಿಕಿನಿ ಏನೋ ಎಲ್ಲರೂ ತೊಡಬಹುದು. ಆದರೆ ಅದಕ್ಕೆ ಅವರ ದೇಹವೂ ಅಷ್ಟೇ ಸುಂದರವಾಗಿ, ಬಳುಕುವ ಬಳ್ಳಿಯ ತರಹ ಇರಬೇಕು. ಇದಕ್ಕಾಗಿ ನಟಿಯರು ತಮ್ಮ ಮೈಯಲ್ಲಿನ ಕೊಬ್ಬನ್ನು ಕೆಜಿಗಟ್ಟಲೆ ಕರಗಿಸಬೇಕಾಗುತ್ತದೆ.

  2012ರಲ್ಲಿ ಕಾಕ್ ಟೈಲ್ ಚಿತ್ರಕ್ಕಾಗಿ ದೀಪಿಕಾ ಪಡುಕೋಣೆ ಬಿಕಿನಿ ತೊಟ್ಟಾಗ ಎಲ್ಲರೂ ಆಕೆಯ ಸೌಂದರ್ಯಕ್ಕೆ ಮರುಳಾಗಿದ್ದರು. ಆದರೆ ದೀಪಿಕಾ ಬಿಕಿನಿ ತೊಡುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಇದಕ್ಕಾಗಿ ಆಕೆ ತಮ್ಮ ಸಪೂರ ದೇಹವನ್ನು ಒಂಚೂರು ಬಿಕಿನಿಗೆ ಹೊಂದಾಣಿಕೆಯಾಗುವಂತೆ ಕಸರತ್ತು ಮಾಡಿದ್ದರು.

  ಸಿಕ್ಕಾಪಟ್ಟೆ ತಿನ್ನುವಂಗಿಲ್ಲ. ಹೊರಗಡೆ ತಿಂಡಿ, ತೀರ್ಥಗಳು ಮುಟ್ಟೋ ಹಂಗಿಲ್ಲ. ಹೆಚ್ಚಾಗಿ ದ್ರವಾಹಾರವೇ ಗತಿ. ಸಾಲದಕ್ಕೆ ಮೈ ಬೆವರುವಂತೆ ಕಸರತ್ತು ಮಾಡಬೇಕು. ಹಸಿಹಸಿ ತರಕಾರಿ, ಹಣ್ಣುಹಂಪಲುಗಳೇ ಮೃಷ್ಟಾನ್ನ. ಆದರೆ ಅವನ್ನೂ ಅಳತೆ ಪ್ರಕಾರವೇ ಸೇವಿಸಬೇಕು. ಇಷ್ಟೆಲ್ಲಾ ಮಾಡಿದರೆ ಬಿಕಿನಿ ಸಲೀಸಾಗಿ ದೇಹವನ್ನು ಅವರಿಸುತ್ತದೆ. 2-12ರ ಟಾಪ್ 5 ಬಿಕಿನಿ ಬೇಬಿಗಳು ಇಲ್ಲಿವೆ ನೋಡಿ.

  English summary
  Apart from break-ups, patch-ups and other controversies, our Bollywood heroines are also famous for their hot bikini bodies. In 2012, many actress raised the temperature by wearing bikinis on screen.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more