»   » ನಟ ಅಂಬರೀಶ್ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು

ನಟ ಅಂಬರೀಶ್ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು

By: ಉದಯರವಿ
Subscribe to Filmibeat Kannada

ಕನ್ನಡದ ಕನ್ವರ್ ಲಾಲ್, ಕಲಿಯುಗ ಕರ್ಣ, ಮಂಡ್ಯದ ಗಂಡು ಹಾಗೂ ರೆಬೆಲ್ ಸ್ಟಾರ್ ಅಂಬರೀಶ್ ಅವರ ಬಗ್ಗೆ ಕೆಲವು ಆಪಾದನೆಗಳು, ಗಾಸಿಪ್ ಗಳು ಆಗಾಗ ಹರಿದಾಡುತ್ತಿರುತ್ತವೆ. ಆದರೆ ಅಂಬರೀಶ್ ಮಾತ್ರ ಇದ್ಯಾವುದಕ್ಕೂ ಕೇರ್ ಮಾಡುವ ಮನುಷ್ಯರಲ್ಲ.

ಅವರನ್ನು ಹತ್ತಿರದಿಂದ ಬಲ್ಲವರಿಗೆ ಅಂಬರೀಶ್ ಬಗ್ಗೆ ಸಾಕಷ್ಟು ಗೊತ್ತಿರುತ್ತದೆ. ಆದರೆ ಅವರ ಅಭಿಮಾನಿಗಳು ಕೇವಲ ಊಹಾಪೋಹಗಳನ್ನೇ ನಿಜವೆಂದು ಭ್ರಮಿಸುತ್ತಾರೆ. ನೋಡಲು ರಫ್ ಅಂಡ್ ಟಪ್ ನಂತಿದ್ದರೂ ಅವರು ಇದ್ದಲ್ಲಿ ಸದಾ ನಗುವಿನ ವಾತಾವರಣವಿರುತ್ತದೆ.

ಅಂಬರೀಶ್ ಅವರಿಗೆ ರಾಜಕೀಯಕ್ಕೆ ಬರಬೇಕು ಎಂಬ ಮಹದಾಸೆಯೇನು ಇರಲಿಲ್ಲ. ಬಂದ ಮೇಲೆ ಇಲ್ಲಿನ ರಾಜಕೀಯ ದೊಂಬರಾಟವನ್ನು ನೋಡಿ ಬೇಸತ್ತಿದ್ದೂ ಇದೆ. ಇದೆಲ್ಲಾ ಬೇಕಾಗಿತ್ತಾ ಎಂದೂ ಅವರು ಅಂದುಕೊಂಡದ್ದುಂಟು. ಸ್ಲೈಡ್ ನಲ್ಲಿ ನೋಡಿ ಮತ್ತಷ್ಟು ಸೀಕ್ರೆಟ್ ಸಂಗತಿಗಳು...

ಶಾಲಾ ದಿನಗಳಲ್ಲಿ ಅಂಬಿ ಫಸ್ಟ್ ಕ್ಲಾಸ್ ವಿದ್ಯಾರ್ಥಿ

ಅಂಬರೀಶ್ ಅವರು ಶಾಲಾ ದಿನಗಳಲ್ಲಿ ಫಸ್ಟ್ ಕ್ಲಾಸ್ ವಿದ್ಯಾರ್ಥಿಯಾಗಿದ್ದರು. ಆದರೆ ಕಾಲೇಜು ಮೆಟ್ಟಿಲೇರಿದ ಮೇಲೆ 'ಎ' ವಿದ್ಯಾರ್ಥಿ ಅನ್ನಿಸಿಕೊಂಡರು. ಅವರ ಪ್ರಕಾರ 'ಎ' ಎಂದರೆ ಗ್ರೇಡ್ ಅಲ್ಲ, ಆಬ್ಸೆಂಟ್ ಎಂದರ್ಥ.

ಕನ್ನಡ ಮೇಷ್ಟ್ರಿಗೆ ಪಾಠ ಕಲಿಸಿದ ಅಂಬರೀಶ್

ಒಮ್ಮೆ ಅವರು ಶಾಲಾ ದಿನಗಳಲ್ಲಿ ಕನ್ನಡ ಮೇಷ್ಟ್ರೊಬ್ಬರು ಪಾಠ ಮಾಡುತ್ತಾ ಬೋರ್ಡ್ ಮೇಲೆ "ರಾಮನು ಮನೆಗೆ ಹೋದನು" ಎಂದು ಬರೆದರಂತೆ. ಕೊನೆಯ ಬೆಂಚ್ ನಲ್ಲಿ ಕೂತಿದ್ದ ಅಂಬರೀಶ್ ಕೂಡಲೆ ಕೈ ಎತ್ತಿ ಅಂಬರೀಶನು ಮನೆಗೆ ಹೋಗುತ್ತಿದ್ದಾನೆ ಎಂದು ಹೇಳಿ ಹೊರಟೇ ಬಿಟ್ಟರು. ಇದನ್ನು ಈಗಲೂ ನೆನೆಸಿಕೊಂಡು ಅಂಬಿ ಗಹಗಹಿಸಿ ನಗುತ್ತಾರೆ.

ಶೂಟಿಂಗ್ ಗೆ ಟೈಮಿಗೆ ಸರಿಯಾಗಿ ಹೋಗಲ್ಲ ಯಾಕೆ?

ಇನ್ನು ಶೂಟಿಂಗ್ ಗೆ ಟೈಮಿಗೆ ಸರಿಯಾಗಿ ಅಂಬಿ ಹೋಗುವುದಿಲ್ಲ. ಇದಕ್ಕೆ ಅವರು ಕೊಡುವ ವಿವರಣೆ ಮುಂಚೆಯಲ್ಲಾ ಟೈಮಿಗೆ ಹೋಗುತ್ತಿದ್ದೆ. ರಾಜಕೀಯಕ್ಕೆ ಬಂದ ಮೇಲೆ ಈಗಾಯಿತು ಎನ್ನುತ್ತಾರೆ.

ತನ್ನ ಮಗ ಡಾಕ್ಟರ್ ಆಗಬೇಕೆಂದು ಅಂಬಿ ಅಪ್ಪ ಬಯಸಿದ್ದರು

ಅಂಬರೀಶ್ ಅವರ ತಂದೆಯವರು ತನ್ನ ಮಗ ಡಾಕ್ಟರ್ ಆಗಬೇಕು ಎಂದು ಬಯಸಿದ್ದರು. ಆದರೆ ಅಂಬಿ ಆಗಿದ್ದು ಮಾತ್ರ ಆಕ್ಟರ್. ಅಪ್ಪನ ಆಸೆ ಈಡೇರಿಸಲಿಲ್ಲ ಎಂಬ ಕೊರಗು ಅಂಬಿಗೆ ಇದೆ. ಹಾಗೆಯೇ ಚಿತ್ರರಂಗಕ್ಕೆ ಬಂದ ಬಗ್ಗೆ ಯಾವುದೇ ಬೇಸರವೂ ಇಲ್ಲ.

ಅಂಬಿಗೆ ಅಂಬಿಕಾ ಪ್ರಪೋಸ್ ಮಾಡಿದ್ದರು!

'ಚಕ್ರವ್ಯೂಹ' (1983) ಚಿತ್ರದಲ್ಲಿ ಅಂಬರೀಶ್ ಹಾಗೂ ಅಂಬಿಕಾ ಅವರು ಚಳಿಚಳಿ ತಾಳೆನು ಈ ಚಳಿಯಾ ಹಾಡು ಈಗಲೂ ಚಿತ್ರಸಿಕರ ಪಾಲಿಗೆ ಹಾಟ್ ಫೇವರಿಟ್. ಇವರಿಬ್ಬರ ಆನ್ ಸ್ಕ್ರೀನ್ ಕೆಮಿಸ್ಟ್ರಿ ತುಂಬಾ ಚೆನ್ನಾಗಿತ್ತು. ಆದರೆ ರಿಯಲ್ ಲೈಫ್ ನಲ್ಲಿ ಅಂಬಿಕಾ ಅವರೇ ಅಂಬಿಗೆ ಪ್ರೊಪೋಸ್ ಮಾಡಿದ್ದರು. ಆದರೆ ಅಂಬಿಗೆ ಅಂಬಿಕಾ ಅವರನ್ನು ಮದುವೆಯಾಗಬೇಕೆಂಬ ಐಡಿಯಾನೇ ಇರಲಿಲ್ಲವಂತೆ.

ಅಂಬರೀಶ್ ಕುದುರೆ ಬಾಲದ ಹಿಂದೆ ಬಿದ್ದಿದ್ದರಾ?

ಅಂಬರೀಶ್ ಅವರು ಜೂಜು ಪ್ರಿಯರು ಎಂದೇ ಎಲ್ಲರೂ ಭಾವಿಸಿದ್ದಾರೆ. ಈ ಮಾತನ್ನು ಸ್ವತಃ ಅಂಬಿ ಕೂಡ ಒಪ್ಪುತ್ತಾರೆ. ಹೌದು ಒಂದು ಕಾಲದಲ್ಲಿ ನಾನೊಬ್ಬ ಬೇಸಿಕಲಿ ಗ್ಯಾಂಬ್ಲರ್ ಎಂಬ ಮಾತನ್ನು ಒಪ್ಪುತ್ತಾರೆ. ಒಮ್ಮೆ ರಾಜ್ ಕುಮಾರ್ ಅವರನ್ನೂ ಜೊತೆಗೆ ಕರೆದುಕೊಂಡು ಹೋಗಿದ್ದರಂತೆ. ಕುದುರೆ ಬಾಲಕ್ಕೆ ದುಡ್ಡು ಕಟ್ಟಬೇಕು ಎಂದಲ್ಲ, ಜಸ್ಟ್ ಅದನ್ನು ನೋಡುವ ಕುತೂಹಲಕ್ಕಷ್ಟೇ.

ಈ ಹಿಂದೆಯೂ ಅಂಬಿ ಬಗ್ಗೆ ವದಂತಿ ಹಬ್ಬಿತ್ತು

ಅಂಬರೀಶ್ ಬಗ್ಗೆ ಸಾಕಷ್ಟು ಏನೋ ಆಗಿದೆ ಎಂಬ ವದಂತಿಗಳು ಹಬ್ಬಿದ್ದವು. ಈ ಬಗ್ಗೆ ಅವರಿಗೇನು ಬೇಸರವಿಲ್ಲ. ಇನ್ನೂ ಆಯುಸ್ಸು ಜಾಸ್ತಿ ಆಗತ್ತೆ ಬಿಡಿ ಅಂತಾರೆ. 'ಏಳು ಸುತ್ತಿನ ಕೋಟೆ'(1987) ಶೂಟಿಂಗ್ ನಡೆಯಬೇಕಾದರೂ ಈ ರೀತಿಯ ವದಂತಿ ಹಬ್ಬಿತ್ತು. ಆಗ ಅವರ ತಾಯಿಯವರೇ ಸ್ವತಃ ಫೋನ್ ಮಾಡಿ ವಿಚಾರಿಸಿದ್ದರಂತೆ. ಡೋಂಟ್ ವರಿ ನನಗೇನು ಆಗಿಲ್ಲ ಎಂದು ಹೇಳುವಷ್ಟರಲ್ಲಿ ಅವರಿಗೆ ಸಾಕಾಗಿತ್ತಂತೆ.

ಅಂಬರೀಶ್ ಅವರು ಸಾಕಷ್ಟು ಕುಡೀತಾರಂತೆ ಹೌದಾ?

ಅಂಬರೀಶ್ ಅವರು ಸಿಕ್ಕಾಪಟ್ಟೆ ಕುಡೀತಾರೆ ಎಂಬ ಮಾತುಗಳು ಕೇಳಿಬರುತ್ತಿರುತ್ತವೆ. ಆದರೆ ಈ ಮಾತನ್ನು ಅವರು ಒಪ್ಪಲ್ಲ. ನಾನು ಆರೋಗ್ಯವಾಗಿದ್ದೇನೆ, ಫಿಟ್ ಅಂಡ್ ಫೈನ್. ಸುಮ್ಮನೆ ಯಾರೋ ಏನೇನೋ ಮಾತಾಡಿಕೊಳ್ತಾರೆ. ನಾನು ಕುಡೀತೀನಿ ಎಂಬುದನ್ನು ಅವರು ಬಂದು ನೋಡಿದ್ದಾರಾ? ಅಂತಾರೆ ಅಂಬಿ.

ಶೂಟಿಂಗ್ ಸ್ಪಾಟ್ ನಲ್ಲಿ ಅಂಬರೀಶ್ ಹೇಗಿರುತ್ತಾರೆ?

ಶೂಟಿಂಗ್ ನಲ್ಲಿ ಅಂಬಿ ಹೇಗಿರುತ್ತಾರೆ ಎಂಬುದು ಬಹಳ ಜನಕ್ಕೆ ಗೊತ್ತಿರಲಿಲ್ಲ. ಶೂಟಿಂಗ್ ಸ್ಪಾಟ್ ನಲ್ಲಿ ಅಂಬಿ ಇದ್ದಾರೆ ಎಂದರೆ ಅಲ್ಲಿ ಬಿಗುವಿನ ವಾತಾವರಣ ಇರುವುದಿಲ್ಲ...ಏನಿದ್ದರೂ ನಗುವಿನ ವಾತಾವರಣ. ಇದುವರೆಗೂ ಅವರು ಶೂಟಿಂಗ್ ಸ್ಪಾಟ್ ನಲ್ಲಿ ಯಾರ ಮೇಲೂ ಕೈ ಮಾಡಿಲ್ಲ.

English summary
Interesting and unknown facts about Rebel Star Ambareesh. Amabareesh married actress Sumalatha on 8 December 1991 at the age of 39 and they have a son named Abishek. He first met his wife on the sets of Aahuti directed by T. S. Nagabharana where she played his female co-star.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada