Don't Miss!
- Sports
ಮಹಾರಾಜ ಟ್ರೋಫಿ: ಟೇಬಲ್ ಟಾಪರ್ಸ್ ವಿರುದ್ಧ ಗೆದ್ದು 2 ಸ್ಥಾನ ಜಿಗಿದ ಮೈಸೂರು ವಾರಿಯರ್ಸ್!
- News
Breaking: ಕರ್ನಾಟಕದಲ್ಲಿ 2ನೇ ದಿನವೂ ಕೊರೊನಾದಿಂದ 5 ಮಂದಿ ಸಾವು!
- Lifestyle
ಸ್ವಾತಂತ್ರ್ಯದ ಅಮೃತ ಮಹೋತ್ಸಕ್ಕೆ ಸ್ಪೆಷಲ್ ರೆಸಿಪಿ: ತಿರಂಗಾ ಹಲ್ವಾ
- Automobiles
ಇವಿ ಬಸ್ ಸೇವೆಗಾಗಿ 1 ಬಿಲಿಯನ್ ಡಾಲರ್ ಮೌಲ್ಯದ ಸ್ವಿಚ್ ಮೊಬಿಲಿಟಿ ನಿರ್ಮಾಣದ 5 ಸಾವಿರ ಇವಿ ಬಸ್ ನಿಯೋಜನೆ
- Technology
ಬ್ಲೂ ಬೋಲ್ಡ್ N2 ಸ್ಮಾರ್ಟ್ಫೋನ್ ಬಿಡುಗಡೆ! ಏನೆಲ್ಲಾ ಫೀಚರ್ಸ್ ಲಭ್ಯ!
- Finance
ಕೇರಳ ಲಾಟರಿ: 'ಕಾರುಣ್ಯ KR 562' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ
- Education
CSG Karnataka Recruitment 2022 : 128 ಪ್ರಾಜೆಕ್ಟ್ ಮ್ಯಾನೇಜರ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
4 ಭಾಷೆಗಳಲ್ಲೂ 'ವಿಜಯಾನಂದ' ಟೀಸರ್ ಸೂಪರ್ ಹಿಟ್
ಖ್ಯಾತ ಉದ್ಯಮಿ ವಿಜಯ ಸಂಕೇಶ್ವರ ಜೀವನಾಧರಿತ 'ವಿಜಯಾನಂದ' ಸಿನಿಮಾ ಟೀಸರ್‌ಗೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದೆ. 4 ಭಾಷೆಗಳಲ್ಲಿ ಲಕ್ಷ ಲಕ್ಷ ವೀವ್ಸ್ ಸಾಧಿಸಿ ಟೀಸರ್ ಸೂಪರ್ ಹಿಟ್ ಆಗಿದೆ.
1976ರಲ್ಲಿ ಒಂದೇ ಒಂದು ಟ್ರಕ್‌ನಿಂದ ತಮ್ಮ ವೃತ್ತಿ ಜೀವನ ಆರಂಭಿಸಿದ ವಿಜಯ ಸಂಕೇಶ್ವರ ಇಂದು ಭಾರತದ ಯಶಸ್ವಿ ಉದ್ಯಮಿ ಎನಿಸಿಕೊಂಡಿದ್ದಾರೆ. ಈ ರೋಚಕ ಕಥೆಯನ್ನು 'ವಿಜಯಾನಂದ' ಚಿತ್ರದಲ್ಲಿ ಎಳೆ ಎಳೆಯಾಗಿ ಬಿಚ್ಚಿಡಲಾಗುತ್ತಿದೆ. ವಿಆರ್‌ಎಲ್ ಫಿಲಂ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ವಿಜಯ ಸಂಕೇಶ್ವರ ಅವರ ಪುತ್ರ ಆನಂದ್ ಸಂಕೇಶ್ವರ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. 'ಕನ್ನಡ ಚಿತ್ರರಂಗದ ಭೀಷ್ಮ' ಜಿ. ವಿ ಅಯ್ಯರ್ ಮೊಮ್ಮಗಳು ರಿಷಿಕಾ ಶರ್ಮಾ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ನಟ ನಿಹಾಲ್ 'ವಿಜಯಾನಂದ' ಚಿತ್ರದಲ್ಲಿ ವಿಜಯ ಸಂಕೇಶ್ವರ ಅವರ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
ಕೆಜಿಎಫ್
2
ಟೀಸರ್
ವಿಶ್ವದಾಖಲೆ:
ಧೂಳಿಪಟವಾದ
'ಮಾಸ್ಟರ್',
'ಅವೇಂಜರ್ಸ್'
ವಿಜಯ ಸಂಕೇಶ್ವರ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ 'ವಿಜಯಾನಂದ' ಚಿತ್ರದ ಟೀಸರ್ ರಿಲೀಸ್ ಆಗಿತ್ತು. ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು, ಮಲಯಾಳಂ ಭಾಷೆಗಳಿಗೆ ಸಿನಿಮಾ ಡಬ್ ಆಗಿ ರಿಲೀಸ್ ಆಗುತ್ತಿದ್ದು, ಎಲ್ಲಾ ಭಾಷೆಗಳಲ್ಲೂ ಟೀಸರ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಟೀಸರ್ ನೋಡಿದವರೆಲ್ಲಾ ಪ್ರೇರಣದಾಯಕ ಸಿನಿಮಾ ಅಂತ ಹೇಳುತ್ತಿದ್ದಾರೆ. ಇನ್ನು ಈ ಚಿತ್ರದಲ್ಲಿ ವಿಜಯ ಸಂಕೇಶ್ವರ ಮತ್ತು ಅವರ ಪುತ್ರ ಆನಂದ ಸಂಕೇಶ್ವರ ಜೊತೆಗೆ ಪತ್ರಿಕೆ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಯಶಸ್ವಿಯಾದ ಕಥೆಯೂ ಇದೆ.

ಟೀಸರ್ ಹೇಗಿದೆ?
ವಿಜಯ ಸಂಕೇಶ್ವರ ತಾರುಣ್ಯದ ದಿನಗಳು ಹಾಗೂ ಉದ್ಯಮವನ್ನು ಶುರು ಮಾಡಿದ ಸಂದರ್ಭವನ್ನು ಟೀಸರ್‌ನಲ್ಲಿ ಹೈಲೆಟ್ ಮಾಡಿ ತೋರಿಸಲಾಗಿದೆ. ವಿಜಯ ಸಂಕೇಶ್ವರ ತಂದೆ ಬಿ. ಜಿ ಸಂಕೇಶ್ವರ ಪಾತ್ರದಲ್ಲಿ ಅನಂತ್ ನಾಗ್, ಮಂಡಿ ಮಾಲೀಕನ ಪಾತ್ರದಲ್ಲಿ ಕ್ರೇಜಿ ಸ್ಟಾರ್ ವಿ. ರವಿಚಂದ್ರನ್ ಮಿಂಚಿದ್ದಾರೆ. ವಿಜಯ ಸಂಕೇಶ್ವರ ಪಾತ್ರದಲ್ಲಿ ನಿಹಾಲ್ ಗಮನ ಸೆಳೆದಿದ್ದಾರೆ. ಪ್ರತಿ ಫ್ರೇಮ್ ನೈಜತೆಗೆ ಹತ್ತಿರ ಎನಿಸುವಂತಿದ್ದು, ಹಿನ್ನೆಲೆ ಸಂಗೀತವೂ ಸೊಗಸಾಗಿದೆ.

'ವಿಜಯಾನಂದ' ಟೀಸರ್‌ಗೆ ಸಖತ್ ರೆಸ್ಪಾನ್ಸ್
ದಕ್ಷಿಣ ಭಾರತದ 4 ಭಾಷೆಗಳಲ್ಲೂ 'ವಿಜಯಾನಂದ' ಟೀಸರ್ ಹಿಟ್ ಆಗಿದೆ. ಮೂರು ದಿನಕ್ಕೆ ಕನ್ನಡ ಟೀಸರ್ 2.7 ಮಿಲಿಯನ್ ವೀವ್ಸ್ ಗಿಟ್ಟಿಸಿದ್ರೆ, ತಮಿಳು ಟೀಸರ್ 2.1, ತೆಲುಗು ಟೀಸರ್ 1.5 ಹಾಗೂ ಮಲಯಾಳಂ ಟೀಸರ್‌ಗೆ 1.2 ವೀವ್ಸ್ ಸಿಕ್ಕಿದೆ. ಪರ ಭಾಷಿಕರು ಕೂಡ ಈ ಮೋಟಿವೇಷನಲ್ ಬಯೋಪಿಕ್ ಸಿನಿಮಾ ನೋಡಲು ಕಾತುರದಿಂದ ಕಾಯುತ್ತಿದ್ದಾರೆ.

ಪ್ರತಿಭಾನ್ವಿತ ತಂಡದ ಶ್ರಮ
ಕನ್ನಡ ಚಿತ್ರರಂಗ ಮೊದಲ ಅಫೀಷಿಯಲ್ ಹಾಗೂ ಕಮರ್ಷಿಯಲ್ ಬಯೋಪಿಕ್ ಸಿನಿಮಾ 'ವಿಜಯಾನಂದ'. ರಿಷಿಕಾ ಶರ್ಮಾ ಘಟಾನುಘಟಿ ಕಲಾವಿದರು ಮತ್ತು ನುರಿತ ತಂತ್ರಜ್ಞರ ತಂಡ ಕಟ್ಟಿಕೊಂಡು ಸಿನಿಮಾ ಕಥೆ ಹೇಳುತ್ತಿದ್ದಾರೆ. ವಿನಯಾ ಪ್ರಸಾದ್, ಪ್ರಕಾಶ್ ಬೆಳವಾಡಿ, ಅನೀಶ್ ಕುರುವಿಲ್ಲಾ, ಸಿರಿ ಪ್ರಹ್ಲಾದ್ ತಾರಾಗಣದಲ್ಲಿ ಇದ್ದಾರೆ. ಗೋಪಿ ಸುಂದರ್ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಹೇಮಂತ್ ಕುಮಾರ್ .ಡಿ ಸಂಕಲನ ಚಿತ್ರಕ್ಕಿದೆ.

ಇದೇ ವರ್ಷ 'ವಿಜಯಾನಂದ' ರಿಲೀಸ್
ಚಿತ್ರೀಕರಣ ಭರದಿಂದ ಸಾಗಿದ್ದು, ಇದೇ ವರ್ಷ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ನಡೀತಿದೆ. ರೋರಿಂಗ್ ಸ್ಟಾರ್ ಶ್ರೀಮುರಳಿ ಸೇರಿದಂತೆ ಸಾಕಷ್ಟು ಸೆಲೆಬ್ರೆಟಿಗಳು 'ವಿಜಯಾನಂದ' ಟೀಸರ್ ನೋಡಿ ಮೆಚ್ಚಿಕೊಂಡಿದ್ದಾರೆ. ಕಳೆದ ವರ್ಷ ವಿಆರ್‌ಎಲ್ ಕ್ಯಾಂಪಸ್‌ನಲ್ಲೇ ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ಮುಹೂರ್ತ ನೆರವೇರಿತ್ತು. ಅಷ್ಟೇ ಅದ್ಧೂರಿಯಾಗಿ ಸಿನಿಮಾವನ್ನು ರಿಲೀಸ್ ಮಾಡಲು ತಂಡ ಮುಂದಾಗಿದೆ.