For Quick Alerts
  ALLOW NOTIFICATIONS  
  For Daily Alerts

  ನಟ ವಿನೋದ್ ಪ್ರಭಾಕರ್ ಕಣ್ಣಿಗೆ ಬಲವಾದ ಪೆಟ್ಟು

  By Rajendra
  |
  ಟೈಗರ್ ಪ್ರಭಾಕರ್ ಅವರ ಪುತ್ರ ಮರಿ ಟೈಗರ್ ಎಂದೇ ಗುರುತಿಸಿಕೊಂಡಿರುವ ವಿನೋದ್ ಪ್ರಭಾಕರ್ ಚಿತ್ರೀಕರಣದಲ್ಲಿ ಗಾಯಗೊಂಡಿದ್ದಾರೆ. ಗಜೇಂದ್ರ ಚಿತ್ರೀಕರಣದ ವೇಳೆ ಅವರ ಎಡಗಣ್ಣಿನ ಹುಬ್ಬಿನ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದೆ.

  ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಮಂಗಳವಾರ (ಜು.31) ಈ ಘಟನೆ ನಡೆದಿದೆ. 'ಗಜೇಂದ್ರ' ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣ ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನದಲ್ಲಿ ನಡೆಯುತ್ತಿತ್ತು. ಆಗ ಅವರ ಎಡಗಣ್ಣಿನ ಹುಬ್ಬಿಗೆ ಬಲವಾದ ಪೆಟ್ಟುಬಿತ್ತು.

  ಕೂಡಲೆ ಅವರನ್ನು ಮಲ್ಯ ಆಸ್ಪತ್ರೆಗೆ ದಾಖಲಿಸಲಾಯಿತು. ಕಣ್ಣಿನ ಹುಬ್ಬಿನ ಭಾಗದಲ್ಲಿ ಮೂರು ಹೊಲಿಗೆಗಳನ್ನು ಹಾಕಲಾಗಿದ್ದು ಪ್ಲಾಸ್ಟಿಕ್ ಸರ್ಜರಿಯನ್ನೂ ಮಾಡಲಾಗಿದೆ. ಪೆಟ್ಟು ಬಿದ್ದ ರಭಸಕ್ಕೆ ಅವರ ಕಣ್ಣಿನ ಭಾಗ ಊದಿಕೊಂಡಿತ್ತು.

  ಆದರೂ ಅವರು ಚಿತ್ರೀಕರಣಕ್ಕೆ ಬಂದಿದ್ದು ಚಿತ್ರತಂಡದ ಹುಬ್ಬೇರಿಸಿತ್ತು. ಒಂದು ವಾರ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ವಿನೋದ್ ಪ್ರಭಾಕರ್ ಅವರಿಗೆ ಸೂಚಿಸಿದ್ದಾರೆ. ಹಾಗಾಗಿ ಇಂದಿನ ಚಿತ್ರೀಕರಣಕ್ಕೆ ಪ್ಯಾಕಪ್ ಹೇಳಲಾಯಿತು.

  'ಹೋರಿ' ಚಿತ್ರದ ಬಳಿಕ ಸಾಕಷ್ಟು ಗ್ಯಾಪ್ ತೆಗೆದುಕೊಂಡಿರುವ ವಿನೋದ್ ಪ್ರಭಾಕರ್ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಜೆಜೆ ಕೃಷ್ಣ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ. ಸ್ಲಂ ಹುಡುಗನಾಗಿ ಬಳಿಕ ಎಂಎಲ್ ಎ ಆಗಿ ವಿನೋದ್ ಅವರದು ಈ ಚಿತ್ರದಲ್ಲಿ ದ್ವಿಪಾತ್ರಾಭಿನಯ. ಭ್ರಷ್ಟ ಪೊಲೀಸ್ ಅಧಿಕಾರಿಯಾಗಿ ಶೋಭರಾಜ್ ಅಭಿನಯಿಸುತ್ತಿದ್ದಾರೆ.

  ಡೈಸಿ ಶಾ ಹಾಗೂ ಸ್ವಾತಿ ಚಿತ್ರದ ಇಬ್ಬರು ನಾಯಕಿಯರು. ರಾಜೇಶ್ ರಾಮನಾಥ್ ಅವರ ಸಂಗೀತವಿರುವ ಚಿತ್ರಕ್ಕೆ ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಐಹೊಳೆ ಹಾಗೂ ಪಟ್ಟದಕಲ್ಲಿನ ಐತಿಹಾಸಿಕ ಪ್ರದೇಶಗಳಲ್ಲಿ ಹಾಡುಗಳನ್ನು ಚಿತ್ರೀಕರಿಸಲಾಗಿದೆ. (ಏಜೆನ್ಸೀಸ್)

  English summary
  Kannada actor Vinod Prabhakar injured during shooting of a fight sequence of his latest film Gajendra in Bangalore Palace Grounds. He was taken to a Mallya hospital where he is said to be out of danger.
  Tuesday, July 31, 2012, 16:55
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X