»   » 'ಬುಲೆಟ್ ಬಸ್ಯಾ' ಬಂದ... ಸೈಲೆಂಟಾಗ್ ನಿಂತು ಸೈಡ್ ಕೊಡಿ..

'ಬುಲೆಟ್ ಬಸ್ಯಾ' ಬಂದ... ಸೈಲೆಂಟಾಗ್ ನಿಂತು ಸೈಡ್ ಕೊಡಿ..

Posted By:
Subscribe to Filmibeat Kannada

ಕಾಮಿಡಿ ಕಿಂಗ್ ಶರಣ್ 'ಬುಲೆಟ್ ಬಸ್ಯಾ' ಗಾಂಧಿನಗರದಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದೆ. ಹಲವಾರು ವಿಶೇಷತೆಗಳಿಂದ ಕೂಡಿರುವ ಶರಣ್, ಹರಿಪ್ರಿಯ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ಬಹುನಿರೀಕ್ಷಿತ 'ಬುಲೆಟ್ ಬಸ್ಯಾ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

ವೀರ ಕೇಸರಿ ಅಂತೆ ಬಿಲ್ಡಪ್ ಕೊಡುವ 'ಬುಲೆಟ್ ಬಸ್ಯಾ' ಕಮಾಲ್ ಹೇಗಿದೆ ಅಂತ ಈಗಷ್ಟೆ ರಿಲೀಸ್ ಆಗಿರುವ ಚಿತ್ರದ ಟ್ರೈಲರ್ ಇಲ್ಲಿದೆ ನೋಡಿ..


Watch Kannada movie 'Bullet Basya' official trailer

''ಹಲೋ' ಟ್ರೆಂಡು ಚೇಂಜಾಗದೆ ಇವತ್ತು ಕಾಮಿಡಿಯನ್ಸೇ ಹೀರೋಗಳು'' ಅಂತ ಪಂಚಿಂಗ್ ಡೈಲಾಗ್ಸ್ ಇರುವ ಶರಣ್ 'ಬುಲೆಟ್ ಬಸ್ಯಾ' ಚಿತ್ರದ ಟ್ರೈಲರ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. 'ಬುಲೆಟ್' ಇಟ್ಕೊಂಡು 'ಆಡಿ ಕಾರ್'ನಂತೆ ಪೋಸ್ ಕೊಡುವ ಶರಣ್ ಇಡೀ ಚಿತ್ರದಲ್ಲಿ ಕಲರ್ ಫುಲ್ ಕಾಸ್ಟ್ಯೂಮ್ಸ್ ನಲ್ಲಿ ಮಿಂಚಿದ್ದಾರೆ.[ಸೆನ್ಸಾರ್ ನಿಂದ ಕ್ಲೀನ್ ಚಿಟ್ ಪಡೆದ ಶರಣ್ 'ಬುಲೆಟ್ ಬಸ್ಯಾ']


'ವಿಕ್ಟರಿ', 'ಜೈಲಲಿತ', 'ಅಧ್ಯಕ್ಷ', ಹೀಗೆ ಸಾಲು-ಸಾಲು ಹಿಟ್ ಚಿತ್ರಗಳನ್ನು ನೀಡಿದ್ದ ಕಾಮಿಡಿ ಸ್ಟಾರ್ ಇಲ್ಲೂ ಕಾಮಿಡಿ ಪ್ರಿಯರಿಗೆ ಸಖತ್ ಕಿಕ್ ಕೊಡುವುದರಲ್ಲಿ ಅನುಮಾನ ಇಲ್ಲ. ಜೊತೆಗೆ 'ಉಗ್ರಂ' ಖ್ಯಾತಿಯ ಹರಿಪ್ರಿಯ ಗ್ಲಾಮರ್ ಲುಕ್ ಟ್ರೈಲರ್ ನ ಮತ್ತೊಂದು ಹೈಲೈಟ್.['ಬುಲೆಟ್ ಬಸ್ಯಾ' ಮೂಲಕ ಕಥೆಗಾರನಾದ ಶರಣ್]


ಒಟ್ಟಾರೆ ಹೇಳಬೇಕು ಅಂದರೆ ಈ ಮಾನ್ಸೂನ್ ಗೆ ಶರಣ್ 'ಬುಲೆಟ್ ಬಸ್ಯಾ' ಗಾಂಧಿನಗರದ ಮಂದಿಗೆ ಒಂದೊಳ್ಳೆ ಮನೋರಂಜನೆ ನೀಡೋದು ಗ್ಯಾರಂಟಿ. ಚಿತ್ರದಲ್ಲಿರುವ ಬ್ಯೂಟಿಫುಲ್ ಹಾಡುಗಳಿಗೆ ಅರ್ಜುನ್ ಜನ್ಯಾ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. [ಬುಲ್ಲೆಟ್ ಬಸ್ಯಾನೋ ಮಳೆನೋ, ಒಟ್ನಲ್ಲಿ ಎರಡೂ ಮುಳುಗದಿರಲಿ]


ಜಯಣ್ಣ ಕಂಬೈನ್ಸ್ ಬ್ಯಾನರ್ ನಡಿ 'ಬುಲೆಟ್ ಬಸ್ಯಾ' ನಿಗೆ ನಿರ್ದೇಶಕ ಜಯತೀರ್ಥ ಆಕ್ಷನ್ ಕಟ್ ಹೇಳಿದ್ದಾರೆ. ಟ್ರೈಲರ್ ನಲ್ಲಿ ಕಾಮಿಡಿ ಕಿಕ್ ಜೋರಾಗೇ ಇದ್ದು ಚಿತ್ರವನ್ನ ನೋಡೋಕೆ ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ. ಇದೇ 24ಕ್ಕೆ 'ಬುಲೆಟ್ ಬಸ್ಯಾ' ನಿಮ್ಮ ಮುಂದೆ.

English summary
Kannada Movie 'Bullet Basya' official trailer is released. 'Bullet Basya' features Kannada actor Sharan, Kannada Actress Haripriya in the lead role. The movie is directed by Jayatheertha.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada