»   » ರಾಗಿಣಿ 'ಪರಪಂಚ'ದೊಳ್ ಏನೇನೈತಿ?

ರಾಗಿಣಿ 'ಪರಪಂಚ'ದೊಳ್ ಏನೇನೈತಿ?

Posted By:
Subscribe to Filmibeat Kannada

ದೂದ್ ಪೇಡಾ ದಿಗಂತ್ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡು ಹತ್ತತ್ರ ಎರಡು ವರ್ಷಗಳಾಗಿವೆ. ಲೂಸ್ ಮಾದ ಯೋಗಿ ಕೂಡ ಕಿರುತೆರೆಯಲ್ಲೇ ಬಿಜಿಯಿದ್ದಾರೆ. ಇನ್ನೂ 'ಶಿವಂ' ಚಿತ್ರದ ನಂತರ ರಾಗಿಣಿ ದ್ವಿವೇದಿ ಸಿಲ್ವರ್ ಸ್ಕ್ರೀನ್ ನಲ್ಲಿ ಪತ್ತೆ ಆಗಿಲ್ಲ.

ಇಂತಿಪ್ಪ ಮೂವರು ಒಟ್ಟುಗೂಡಿರುವುದು ಹೊಸ 'ಪರಪಂಚ'ದಲ್ಲಿ. ವೆಜ್, ನಾನ್ ವೆಜ್ ಅನ್ನುವ ಕ್ಯಾಪ್ಷನ್ ಇಟ್ಟುಕೊಂಡಿರುವ 'ಪರಪಂಚ' ಚಿತ್ರದಲ್ಲಿ ಏನೇನಿದೆ, ಏನೇನಿಲ್ಲ ಅನ್ನೋದನ್ನ ತಿಳಿದುಕೊಳ್ಳುವುದಕ್ಕೆ ಈ ಹಾಡನ್ನ ಮೊದಲು ನೋಡಿ....

Watch Kannada Movie 'Parapancha' songs

''ಬಾಯಿ ಬಸಳೆ ಸೊಪ್ಪು, ಆಲೂಗಡ್ಡೆ, ಈರುಳ್ಳಿ...ಮೈಸೂರು ಸ್ಯಾಂಡ್ಲು ಸೋಪು, ಕೊಬ್ಬರಿ ಎಣ್ಣೆ, ಕೊತ್ತೊಂಬ್ರಿ...'' ಅಂತ ಅರ್ಧ ಡಜನ್ ರೇಷನ್ ಸಾಮಾನು ಇರುವ ಹಾಡಲ್ಲಿ ರಾಗಿಣಿ ತುಪ್ಪದ ಘಮ ಪಡ್ಡೆಗಳ ನಿದ್ದೆಗೆಡಿಸದೆ ಇರಲ್ಲ. [ಲೂಸ್ ಮಾದನ ಕೆನ್ನೆಗೆ ರಾಗಿಣಿ ಬಿಸಿಬಿಸಿ ಚುಂಬನ]

ಖಾಕಿ ತೊಟ್ಟು 'ಪೋಲಿ'ಸ್ ಆಗಿ ಎಂಟ್ರಿಕೊಡುವ ಯೋಗಿ, ರಾಗಿಣಿ 'ಪರಪಂಚ'ದಲ್ಲಿ ಸೂಪರ್ ಸ್ಟೆಪ್ ಹಾಕಿದ್ದಾರೆ. ಇಬ್ಬರ ನಡುವೆ ದಿಗಂತ್ ಅತ್ಲಾಗೂ ಇಲ್ಲದೆ ಇತ್ಲಾಗೂ ಇಲ್ಲದೆ ವಾಲಾಡಿರುವ ಈ ಹಾಡು ಭಟ್ರ ಅಭಿಮಾನಿಗಳಿಗೆ ಇಷ್ಟವಾಗುವುದರಲ್ಲಿ ಡೌಟ್ ಇಲ್ಲ. [ಭಟ್ಟರ 'ಪರಪಂಚ'ದಲ್ಲಿ ನಟ ದಿಗಂತ್ ಬೆತ್ತಲೆ ಓಟ]

ವೆಜ್ ಮತ್ತು ನಾನ್ ವೆಜ್ ಊಟ ದೊರಕುವ ಹೊಟೇಲ್ ಸುತ್ತ ನಡೆಯುವ ಕಥೆ 'ಪರಪಂಚ'. ಊಟದ ಮ್ಯಾಟರ್ ಇರುವ ಕಾರಣ 'ಆರೋಗ್ಯ ಭಾಗ್ಯ'ದ ಬಗ್ಗೆ ಹೇಳ್ಲೇಬೇಕಲ್ವಾ? ಅದಕ್ಕೂ ನಿರ್ದೇಶಕ ಕ್ರಿಶ್ ಜೋಷಿ ಪ್ಲಾನ್ ಮಾಡಿ ಭಟ್ರ ಕೈಲಿ 'ಹೆಲ್ತ್ ಇಂಪಾರ್ಟೆಂಟು' ಅಂತ ಹಾಡು ಬರೆಸಿದ್ದಾರೆ. ಅದನ್ನ ನೀವು ಕಿವಿಯಾರೆ ಕೇಳಿಬಿಡಿ....

Watch Kannada Movie 'Parapancha' songs

ಯೋಗರಾಜ್ ಭಟ್ರ 'ಎಬಡ ತಬಡ' ಸಾಹಿತ್ಯಕ್ಕೆ ಸಂಗೀತ ನಿರ್ದೇಶಕ ವೀರ್ ಸಮರ್ಥ್ ಮ್ಯೂಸಿಕ್ ನೀಡಿದ್ದಾರೆ. ಭಟ್ರ ಬ್ಯಾನರ್ ನಲ್ಲೇ ಚಿತ್ರ ರೆಡಿಯಾಗಿದೆ. ಈಗಷ್ಟೆ ರಿಲೀಸ್ ಆಗಿರುವ ಎರಡು ಹಾಡುಗಳಲ್ಲಿ 'ಪರಪಂಚ' ಕಂಡಿದ್ದು ಇಷ್ಟು. ಬಾಕಿ ಸಮಾಚಾರಕ್ಕೆ ಸಿನಿಮಾ ರಿಲೀಸ್ ಆಗುವವರೆಗೂ ಕಾಯ್ತಿರಿ.

ಬಾಯಿ ಬಸಳೆ ಸೊಪ್ಪು ಆಲೂಗಡ್ಡೆ ಈರುಳ್ಳಿ..
ಮೈಸೂರು ಸ್ಯಾಂಡ್ಲು ಸೋಪು, ಕೊಬ್ಬರಿ ಎಣ್ಣೆ, ಕೊತ್ತೊಂಬ್ರಿ..
ಈ ರೇಷನ್ ಚೀಟಿನ ಜೇಬಲ್ಲಿ ಇಟ್ಟುಕೊಂಡು,
ಅಂಗಡಿಗೆ ಹೋಗೋ ಬದ್ಲು ಇಲ್ಲಿ ಬನ್ರಿ..
ನನ್ನನ್ನು ನೋಡುತ್ತಾ ಹೆಂಡತೀರ ಫೋನ್ ನಂಬರ್ ಕಟ್ ಮಾಡ್ರಿ..
ಠಣ ಠಣ ಗಂಟೆ ಬಾರಿಸಿತು..
ಮಧುಶಾಲೆ ಕ್ಲಾಸು ಸ್ಟಾರ್ಟ್ ಆಯ್ತು..
ಆ ಗ್ಲಾಸು ಈ ಗ್ಲಾಸು ಟಚ್ ಆಯ್ತು..
ಆರ್ ಆಯ್ತು, ಏಳ್ ಆಯ್ತು, ಕತ್ಲಾಯ್ತು..

English summary
Kannada Actress Ragini Dwivedi, Kannada Actor Yogesh, Diganth starrer 'Parapancha' songs are out. The movie is produced by Yogaraj Bhat and Directed by Krish Joshi. Watch the songs here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada