»   » ಶೀತಲ್ ಶೆಟ್ಟಿ ನಟನೆಯ ಹೊಸ ಚಿತ್ರ 'ಪ್ರೇಮಗೀಮ ಜಾನೆ ದೊ' ಟ್ರೈಲರ್

ಶೀತಲ್ ಶೆಟ್ಟಿ ನಟನೆಯ ಹೊಸ ಚಿತ್ರ 'ಪ್ರೇಮಗೀಮ ಜಾನೆ ದೊ' ಟ್ರೈಲರ್

Posted By:
Subscribe to Filmibeat Kannada

'ಉಳಿದವರು ಕಂಡಂತೆ' ಚಿತ್ರದ ನಂತರ ವಾರ್ತಾ ನಿರೂಪಕಿ ಶೀತಲ್ ಶೆಟ್ಟಿ '#96' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅಂತ ಸುದ್ದಿ ಆಗಿತ್ತು. ಆದ್ರೀಗ, '#96' ಸದ್ದು ಮಾಡುವ ಮುನ್ನವೇ 'ಪ್ರೇಮಗೀಮ ಜಾನೆ ದೊ' ಚಿತ್ರದ ಟ್ರೈಲರ್ ಬಿಡುಗಡೆ ಆಗಿದ್ದು, ಚಿತ್ರದ ಪ್ರಮುಖ ತಾರಾಗಣದಲ್ಲಿ ಶೀತಲ್ ಶೆಟ್ಟಿ ಮಿಂಚಿದ್ದಾರೆ.

ಅಂದ್ಹಾಗೆ, 'ಪ್ರೇಮಗೀಮ ಜಾನೆ ದೊ' ಹೊಚ್ಚ ಹೊಸಬರ ವಿನೂತನ ಪ್ರಯತ್ನ. ಸೂಸೈಡ್ ಪಾಯಿಂಟ್, Delirium tremens ಎನ್ನುವ ವಿಚಿತ್ರ ಕಾಯಿಲೆ, ಭ್ರಮೆ ಹಾಗೂ ಪ್ರೀತಿ-ಗೀತಿ ಸುತ್ತ ಹೆಣೆದಿರುವ ಸಸ್ಪೆನ್ಸ್ ಚಿತ್ರ 'ಪ್ರೇಮಗೀಮ ಜಾನೆ ದೊ'.

ಇದೀಗಷ್ಟೇ ಬಿಡುಗಡೆ ಆಗಿರುವ 'ಪ್ರೇಮಗೀಮ ಜಾನೆ ದೊ' ಚಿತ್ರದ ಟ್ರೈಲರ್ ಒಮ್ಮೆ ನೋಡಿಬಿಡಿ....

watch-kannada-movie-prema-geema-jaane-do-trailer

ಮೊದಮೊದಲು ಇದು ಕಾಲೇಜು ಹುಡುಗರ ಸರ್ವೇ ಸಾಮಾನ್ಯ ಲವ್ ಸ್ಟೋರಿ ಅಂತ ಭಾಸವಾದರೂ, ಚಿತ್ರದಲ್ಲಿ ಅನೇಕ ಕುತೂಹಲಕಾರಿ ತಿರುವುಗಳಿದೆ ಎನ್ನುವುದಕ್ಕೆ ಈ ಟ್ರೈಲರ್ ಸಾಕ್ಷಿ.

ಗೌತಮ್, ಪಲ್ಲವಿ ಗೌಡ, ಶೃತಿ ತಿಮ್ಮಯ್ಯ, ರಮೇಶ್ ಭಟ್, ಪ್ರಶಾಂತ್ ಸಿದ್ಧಿ, ಶೀತಲ್ ಶೆಟ್ಟಿ ಸೇರಿದಂತೆ ಅನೇಕರು ಚಿತ್ರದ ಪ್ರಮುಖ ತಾರಾಬಳಗದಲ್ಲಿದ್ದಾರೆ. [ಉಳಿದವರು ಕಂಡಂತೆ ನಂತರ ಶೀತಲ್ ಶೆಟ್ಟಿ ಚಿತ್ರ #96]

ಕೆಂಜಾ ಚೇತನ್ ಕುಮಾರ್ 'ಪ್ರೇಮಗೀಮ ಜಾನೆ ದೊ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿದ್ದಾರೆ.

'ಪ್ರೇಮಗೀಮ ಜಾನೆ ದೊ' ಚಿತ್ರ ನಿಮ್ಮೆದುರಿಗೆ ಬರಲು ಇನ್ನೂ ಬೇಜಾನ್ ಟೈಮ್ ಇದೆ. ಅಷ್ಟರೊಳಗೆ, ಚಿತ್ರದ ಟ್ರೈಲರ್ ನೋಡಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ....

English summary
New comers Gowtham, Pallavi Gowda, Shruthi Thimmaiah, Ramesh Bhat, Prashanth Siddi, Sheetal Shetty starrer Kannada Movie 'Prema Geema Jaane Do' trailer is released. Watch the trailer here.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada