»   » ವಿಡಿಯೋ: 'ಕತ್ತಲೆ ಭಾಗ್ಯ'ಕ್ಕೆ ಸ್ಯಾಂಡಲ್ ವುಡ್ ಸ್ಟಾರ್ಸ್ ಸಖತ್ ಪಂಚ್

ವಿಡಿಯೋ: 'ಕತ್ತಲೆ ಭಾಗ್ಯ'ಕ್ಕೆ ಸ್ಯಾಂಡಲ್ ವುಡ್ ಸ್ಟಾರ್ಸ್ ಸಖತ್ ಪಂಚ್

Posted By:
Subscribe to Filmibeat Kannada

ಕರ್ನಾಟಕದಲ್ಲಿ ಆಗುತ್ತಿರುವ ಲೋಡ್ ಶೆಡ್ಡಿಂಗ್ ಬಗ್ಗೆ ಫೇಸ್ ಬುಕ್, ವಾಟ್ಸ್ ಆಪ್ ಮತ್ತು ಟ್ವಿಟ್ಟರ್ ನಲ್ಲಿ ಹಾಸ್ಯ ವಿಡಂಬನೆ ಮಾಡುವವರೇ ಹೆಚ್ಚು. ಕರ್ನಾಟಕ ಸರ್ಕಾರದ 'ಕತ್ತಲೆ ಭಾಗ್ಯ' ಯೋಜನೆ ಬಗ್ಗೆ ಹುಟ್ಟಿಕೊಂಡಿರುವ ಜೋಕ್ ಗಳು ಒಂದೆರಡಲ್ಲ.

ಅಂತಹುದರಲ್ಲಿ 'ನಮ್ದುಕೆ' ಅನ್ನುವ ಯೂಟ್ಯೂಬ್ ವಾಹಿನಿ 'ಕತ್ತಲೆ ಭಾಗ್ಯ' ಬಗ್ಗೆ ಒಂದು ವಿಡಿಯೋ ರೆಡಿ ಮಾಡಿದೆ. ಸರ್ಕಾರದ 'ಕತ್ತಲೆ ಭಾಗ್ಯ' ಯೋಜನೆ ಬಗ್ಗೆ ಸ್ಯಾಂಡಲ್ ವುಡ್ ಸ್ಟಾರ್ಸ್ ಹೇಗೆ ಪ್ರತಿಕ್ರಿಯೆ ಕೊಡಬಹುದು? ಈ ಪ್ರಶ್ನೆಗೆ ನೀವು ಉತ್ತರ ಕಂಡುಕೊಳ್ಳುವ ಮುನ್ನ ಈ ವಿಡಿಯೋನ ಒಮ್ಮೆ ನೋಡಿಬಿಡಿ....

ಡೈಲಾಗ್ ಕಿಂಗ್ ಸಾಯಿಕುಮಾರ್, ನವರಸ ನಾಯಕ ಜಗ್ಗೇಶ್, ರಿಯಲ್ ಸ್ಟಾರ್ ಉಪೇಂದ್ರ, ರವಿಶಂಕರ್ ಮತ್ತು ಡಾ.ರಾಜ್ ಕುಮಾರ್ ರವರ ಅನುಕರಣೆ ಮಾಡಿರುವ ಈ ವಿಡಿಯೋ ಸಖತ್ ಮಜವಾಗಿದೆ. ['ಕತ್ತಲೆ ಭಾಗ್ಯ' ಯೋಜನೆಯ ಪ್ರಯೋಜನಗಳು ಯಾವವು?!]

ಶ್ರವಣ್ ಮತ್ತು ಸಂದೀಪ್ ತಯಾರಿಸಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 'ಕತ್ತಲೆ ಭಾಗ್ಯ' ಬಗ್ಗೆ ನೀವೂ ಗೊಣಗುತ್ತಿದ್ದರೆ, ಒಮ್ಮೆ ಈ ವಿಡಿಯೋ ನೋಡಿ ನಕ್ಕುಬಿಡಿ.

English summary
YouTube channel 'Namdu K' has made fun on Kattale Bhagya. Watch the short video on Kannada Stars reaction against Kattale Bhagya.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada