For Quick Alerts
  ALLOW NOTIFICATIONS  
  For Daily Alerts

  ರಾಘಣ್ಣನಿಗೆ ನಿಜವಾಗಿ ಆಗಿರೋದೇನು ಗೊತ್ತಾ?

  By Rajendra
  |

  ಹೆಚ್ಚಿನ ಚಿಕಿತ್ಸೆಗಾಗಿ ರಾಘವೇಂದ್ರ ರಾಜ್ ಕುಮಾರ್ ಶುಕ್ರವಾರ (ಡಿ.13) ರಾತ್ರಿ ಸಿಂಗಾಪುರಕ್ಕೆ ಪ್ರಯಾಣ ಬೆಳೆಸಿದರು. ಒಂದೂವರೆ ತಿಂಗಳ ನಂತರ ಮೊದಲ ಬಾರಿಗೆ ರಾಘವೇಂದ್ರ ರಾಜ್ ಕುಮಾರ್ ಸಾರ್ವಜನಿಕರಿಗೆ ಕಾಣಿಸಿದ್ದಾರೆ.

  ಇಲ್ಲಿಯವರೆಗೂ ರಾಜ್ ಕುಟುಂಬ ರಾಘವೇಂದ್ರ ರಾಜ್ ರನ್ನು ಮಾಧ್ಯಮದ ಮುಂದೆ ಕಾಣಿಸದಂತೆ ನೋಡಿಕೊಂಡಿತ್ತು. ಹೀಗಾಗೀನೇ ಚಿತ್ರಪ್ರೇಮಿಗಳಿಗೆ ಮತ್ತು ರಾಜ್ ಕುಟುಂಬದ ಅಭಿಮಾನಿಗಳಿಗೆ ರಾಘಣ್ಣನಿಗೆ ಏನೋ ದೊಡ್ಡ ಸಮಸ್ಯೆಯಾಗಿದೆ ಅನ್ನೋ ಕುತೂಹಲವಿತ್ತು. [ಸಿಂಗಪುರಕ್ಕೆ ರಾಘವೇಂದ್ರ ರಾಜ್; ಚಿಕಿತ್ಸೆ ವಿವರಗಳು]

  ಈಗ ಆ ಕುತೂಹಲಕ್ಕೆ ಬ್ರೇಕ್ ಬಿದ್ದಿದೆ. ರಾಘವೇಂದ್ರ ರಾಜ್ ಕುಮಾರ್ ಅವರ ಎಡಪಾರ್ಶ್ವದ ಅರ್ಧಭಾಗ ಶಕ್ತಿ ಕಳೆದುಕೊಂಡಿದೆ. ಬೆಂಗಳೂರು ಏರ್ ಫೋರ್ಟ್ನಲ್ಲಿ ಕಾರಿನಿಂದ ಇಳಿದು ಕುಟುಂಬದವರು ಸಂಬಂಧಿಕರ ಸಹಾಯದಿಂದ ಒಂದೊಂದೇ ಹೆಜ್ಜೆಗಳನ್ನಿಡ್ತಾ ಬಂದ ರಾಘಣ್ಣ ಮೊದಲಿನಂತೇ ಇದ್ದರೂ ಸಹ ದೇಹದ ಎಡಭಾಗ ಶಕ್ತಿ ಕಳೆದುಕೊಂಡಂತಾಗಿತ್ತು.

  ಸಿಂಗಾಪುರಕ್ಕೆ ವಿಮಾನ ಏರೋ ಮೊದಲು 100 ಮೀಟರ್ ನಡೆದ ರಾಘಣ್ಣನನ್ನ ಮಾಧ್ಯಮದವ್ರು ವಿಡಿಯೋ ತೆಗೆಯದಂತೆ ವಿನಂತಿಸಿಕೊಂಡರು ಶಿವಣ್ಣ. ರಾಘಣ್ಣ ಗುಣವಾದ ನಂತರ ಅವರೇ ಮಾಧ್ಯಮಗಳ ಮುಂದೆ ಬರ್ತಾರೆ ಅಂತ ಹೇಳಿದ್ರು. ರಾಘಣ್ಣ ಸಿಂಗಾಪುರಕ್ಕೆ ತೆರಳಿ ಬೇಗ ಚಿಕಿತ್ಸೆ ಪಡೆದು ಗುಣಮುಖರಾಗಲಿ ಅನ್ನೋ ಆಶಯ ನಮ್ಮದು ಮತ್ತು ಕೋಟ್ಯಂತರ ಅಭಿಮಾನಿಗಳದ್ದು. (ಒನ್ಇಂಡಿಯಾ ಕನ್ನಡ)

  English summary
  What actually happened to actor producer Raghavendra Rajkumar? who recently suffered a health scare after he suffered a heart attack and was hospitalized for the same sojourn to Mount Elizabeth hospital in Singapore for further treatment on December 13.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X