Don't Miss!
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- Sports
IND vs NZ 2nd T20: ಭಾರತಕ್ಕೆ ಸಾಧಾರಣ ಗುರಿ ನೀಡಿದ ನ್ಯೂಜಿಲೆಂಡ್
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'777 ಚಾರ್ಲಿ' ಸಿನಿಮಾದಲ್ಲಿ ನಟಿಸಿರುವ ನಾಯಿ ಈಗ ಎಲ್ಲಿದೆ?
'777 ಚಾರ್ಲಿ' ಸಿನಿಮಾ ನಾಳೆ (ಜೂನ್ 10) ದೇಶದಾದ್ಯಂತ ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಪ್ರೀಮಿಯರ್ ಶೋಗಳು ದೇಶದಾದ್ಯಂತ ಹಲವು ನಗರಗಳಲ್ಲಿ ಪ್ರದರ್ಶನ ಕಂಡಿದ್ದು, ಸಿನಿಮಾದ ಬಗ್ಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಪ್ರೀಮಿಯರ್ ಶೋ ನೋಡಿದವರು, ಸಿನಿಮಾದಲ್ಲಿ ಕಾಣಿಸಿಕೊಂಡಿರುವ ನಾಯಿ ಚಾರ್ಲಿಗೆ ಮನಸ್ಸೊಪ್ಪಿಸಿದ್ದಾರೆ. ಮುದ್ದಾದ ನಾಯಿಯ ಪ್ರತಿಭೆಗೆ ಮಾರುಹೋಗಿದ್ದಾರೆ.
777
Charlie
Movie
Review:
ನಾಯಿ-ಮನುಷ್ಯ
ಬಾಂಧವ್ಯದ
ಭಾವುಕ
ಕಥನ
ಚಿತ್ರತಂಡ ಹೇಳಿರುವಂತೆ '777 ಚಾರ್ಲಿ' ಸಿನಿಮಾಕ್ಕಾಗಿ ಒಟ್ಟು ನಾಲ್ಕು ನಾಯಿಯನ್ನು ತರಬೇತಿ ನೀಡಲಾಗಿತ್ತು. ಅದರಲ್ಲಿ ಎರಡು ನಾಯಿಗಳನ್ನು ಮಾತ್ರವೇ ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ. ಈಗ ಸಿನಿಮಾ ಮುಗಿದ ಬಳಿಕ ಈ ನಾಯಿಗಳು ಎಲ್ಲಿವೆ? ಇಲ್ಲಿದೆ ಉತ್ತರ.
ಸಿನಿಮಾದ ಪ್ರೀಮಿಯರ್ ಶೋನಲ್ಲಿ ಭಾಗವಹಿಸಿದ್ದ ನಟ ರಕ್ಷಿತ್ ಶೆಟ್ಟಿ ಹೇಳಿರುವಂತೆ, ಸಿನಿಮಾದ ಮೊದಲಾರ್ಧದಲ್ಲಿ ಕಾಣಿಸಿಕೊಂಡಿರುವ ನಾಯಿಯನ್ನು ಅವರೇ ತೆಗೆದುಕೊಂಡು ಹೋಗಲಿದ್ದಾರಂತೆ. ದ್ವೀತೀಯಾರ್ಧದಲ್ಲಿ ಕಾಣಿಸಿಕೊಂಡಿರುವ ನಾಯಿಯನ್ನು ನಿರ್ದೇಶಕ ಕಿರಣ್ ರಾಜ್ ಮನೆಗೆ ಕೊಂಡೊಯ್ಯಲಿದ್ದಾರೆ. ಇನ್ನುಳಿದ ಎರಡು ನಾಯಿಗಳನ್ನು ಚಿತ್ರತಂಡದ ಇತರ ಇಬ್ಬರು ಕೊಂಡೊಯ್ಯಲಿದ್ದಾರೆ.

ಎಲ್ಲ ಪ್ರಶಸ್ತಿಗಳು ಚಾರ್ಲಿಗೆ ಸಲ್ಲಿಕೆಯಾಗಬೇಕು: ರಕ್ಷಿತ್
ಸಿನಿಮಾದಲ್ಲಿ ಕಾಣಿಸಿಕೊಂಡಿರುವ ನಾಯಿ ಚಾರ್ಲಿಯ ಬಗ್ಗೆ ವಿಶೇಷ ಗೌರವುಳ್ಳ ರಕ್ಷಿತ್ ಶೆಟ್ಟಿ, ಆ ನಾಯಿಗಳು ನಮ್ಮ ಸೆಟ್‌ಗೆ ಬಂದಿದ್ದೇ ನಮಗೆಲ್ಲ ಹೊಸದನ್ನು ಕಲಿಸಲು ಎನಿಸುತ್ತದೆ. ಈ ಸಿನಿಮಾಕ್ಕೆ ಸಲ್ಲಿಕೆಯಾಗುವ ಎಲ್ಲ ಗೌರವಗಳು ಚಾರ್ಲಿಗೆ ಸೇರಬೇಕು. ಯಾವುದೇ ಪ್ರಶಸ್ತಿಗಳು ಬಂದರು ಅದು ಚಾರ್ಲಿಗೆ ಸಲ್ಲಬೇಕು. ನನಗೆ ಸಿನಿಮಾ ಮಾಡಲು ಕಾರಣವಿದೆ, ಪ್ಯಾಷನ್, ಹಣ, ಹೆಸರು, ಖ್ಯಾತಿಯ ಹಂಬಲ ಆದರೆ ಇದ್ಯಾವುದೂ ಚಾರ್ಲಿಗೆ ಇಲ್ಲ, ಆದರೂ ಅದು ನಮಗಾಗಿ ಕೆಲಸ ಮಾಡಿದೆ'' ಎಂದು ಭಾವುಕವಾಗಿ ಹೇಳಿದರು ರಕ್ಷಿತ್ ಶೆಟ್ಟಿ.

ನಾಯಿಗಳನ್ನು ದತ್ತು ತೆಗೆದುಕೊಳ್ಳುವಂತಾಗಬೇಕು: ರಕ್ಷಿತ್
ನಮ್ಮ ಸಿನಿಮಾದಿಂದ ಕೆಲವು ಮನಸ್ಸುಗಳು ಬದಲಾದರೂ ನಮಗದು ಬಹಳ ದೊಡ್ಡ ಗೌರವ. ಜನ ಹೆಚ್ಚು-ಹೆಚ್ಚು ನಾಯಿಗಳನ್ನು ದತ್ತು ತೆಗೆದುಕೊಳ್ಳುವಂತಾದರೆ ನಮ್ಮ ಶ್ರಮ ಸಾರ್ಥಕ. ಆ ಬದಲಾವಣೆಗೆ ಕಾರಣವಾದ ಪುಣ್ಯ ಚಾರ್ಲಿಗೆ ಧಕ್ಕುತ್ತದೆ. ನಮ್ಮ ಉದ್ದೇಶವೂ ಅದೇ ಆಗಿದೆ. ಸಾವಿರಾರು ನಾಯಿಗಳು ಬೀದಿಗಳಲ್ಲಿವೆ, ಅವುಗಳನ್ನು ಹೆಚ್ಚು ಮಂದಿ ಅಡಾಪ್ಟ್ ಮಾಡಿಕೊಳ್ಳುವಂತಾಗಬೇಕು'' ಎಂದಿದ್ದಾರೆ ರಕ್ಷಿತ್ ಶೆಟ್ಟಿ.

ನಾಯಿಗಳ ಸಂರಕ್ಷಣೆಗೆ ಯೋಜನೆ
ಸಿನಿಮಾ ಬಿಡುಗಡೆ ಆದ ಬಳಿಕ ನಾಯಿಗಳ ಸಂರಕ್ಷಣೆಗೆ ಏನಾದರೂ ಮಾಡುವ ಯೋಜನೆ ಇದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ರಕ್ಷಿತ್ ಶೆಟ್ಟಿ, ಖಂಡಿತ ಆ ಯೋಚನೆ ಇದೆ. ಆದರೆ ಈಗಲೇ ಅದನ್ನು ಹೇಳಿದರೆ, ಸಿನಿಮಾದ ಪ್ರಚಾರಕ್ಕಾಗಿ ಹೇಳುತ್ತಿದ್ದಾರೆ ಎಂದುಕೊಳ್ಳುತ್ತಾರೆ. ಹಾಗಾಗಿ ಸಿನಿಮಾ ಬಿಡುಗಡೆ ಆಗಿ ಒಂದು ವಾರದ ಬಳಿಕ ನಮ್ಮ ಯೋಜನೆಗಳನ್ನು ಘೋಷಿಸುತ್ತೇವೆ'' ಎಂದಿದ್ದಾರೆ ರಕ್ಷಿತ್ ಶೆಟ್ಟಿ.

ಜೂನ್ 10 ಕ್ಕೆ ಬಿಡುಗಡೆ ಆಗಲಿದೆ ಸಿನಿಮಾ
'777 ಚಾರ್ಲಿ' ಸಿನಿಮಾವು ಜೂನ್ 10 ರಂದು ದೇಶದಾದ್ಯಂತ ಹಲವು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ಸಿನಿಮಾವನ್ನು ಕಿರಣ್ ರಾಜ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಜೊತೆಗೆ ರಾಜ್ ಬಿ ಶೆಟ್ಟಿ, ಸಂಗೀತ ಶೃಂಗೇರಿ ನಟಿಸಿದ್ದಾರೆ. ಅತಿಥಿ ಪಾತ್ರಗಳಲ್ಲಿ ದಾನಿಶ್ ಸೇಠ್ ಮತ್ತು ಬಾಬಿ ಸಿಂಹ ನಟಿಸಿದ್ದಾರೆ. ಸಿನಿಮಾವನ್ನು ರಕ್ಷಿತ್ ಶೆಟ್ಟಿ ಹಾಗೂ ಜಿಎಸ್ ಗುಪ್ತ ನಿರ್ಮಾಣ ಮಾಡಿದ್ದಾರೆ.