'ದಬಾಂಗ್' ಚಿತ್ರಕ್ಕೆ ಸುದೀಪ್ ಅವರನ್ನ ಸೂಚಿಸಿದ್ದು ಯಾರು ಗೊತ್ತಾ?
Recommended Video
ಪೈಲ್ವಾನ್ ಹಾಗೂ ಕೋಟಿಗೊಬ್ಬ ಚಿತ್ರಗಳನ್ನ ಬಹುತೇಕ ಮುಗಿಸಿರುವ ಕಿಚ್ಚ ಸುದೀಪ್ ಈಗ ಬಾಲಿವುಡ್ ಗೆ ಜಿಗಿಯುತ್ತಿದ್ದಾರೆ. ಸಲ್ಮಾನ್ ಖಾನ್ ಅಭಿನಯಿಸುತ್ತಿರುವ ದಬಾಂಗ್ 3 ಚಿತ್ರಕ್ಕಾಗಿ ಸುದೀಪ್ ಬಿಟೌನ್ ಅಂಗಳಕ್ಕೆ ಎಂಟ್ರಿಯಾಗುತ್ತಿದ್ದಾರೆ.
ಕಳೆದ ಕೆಲವಿ ವರ್ಷಗಳಿಂದ ಸಲ್ಮಾನ್ ಖಾನ್ ಜೊತೆಯಲ್ಲಿ ಸುದೀಪ್ ಸಿನಿಮಾ ಮಾಡುತ್ತಾರೆ ಎನ್ನಲಾಗಿತ್ತು. ಏಕ್ತಾ ಟೈಗರ್, ಟೈಗರ್ ಜಿಂದಾ ಹೈ ಅಂತಹ ಸಿನಿಮಾಗಳಿಗಾಗಿ ಸುದೀಪ್ ಹೆಸರು ಬಂತು. ಆದ್ರೆ, ಆ ಚಿತ್ರಗಳಲ್ಲಿ ಅಭಿನಯ ಚಕ್ರವರ್ತಿ ಕಾಣಿಸಿಕೊಳ್ಳಲೇ ಇಲ್ಲ.
ಇದೀಗ, ದಬಾಂಗ್ 3 ಸಿನಿಮಾ ಬರ್ತಿದ್ದು, ಈ ಚಿತ್ರದಲ್ಲಿ ಸಲ್ಲು ಭಾಯ್ ಜೊತೆ ಸ್ಕ್ರೀನ್ ಶೇರ್ ಮಾಡ್ತಿದ್ದಾರೆ. ಈ ಚಿತ್ರಕ್ಕೆ ಸುದೀಪ್ ಬೇಕು ಅಂತ ನಿರ್ಧರಿಸಿದ್ದು ಯಾರು? ಸುದೀಪ್ ಈ ಸಿನಿಮಾ ಮಾಡ್ತಾರೆ ಎಂದಾಗ ಸಲ್ಲು ಅಂಡ್ ಟೀಂ ರಿಯಾಕ್ಷನ್ ಹೇಗಿತ್ತು? ಮುಂದೆ ಓದಿ......

ಸ್ಕ್ರಿಪ್ಟ್ ಚರ್ಚೆ ವೇಳೆಯೇ ಸುದೀಪ್ ಹೆಸರು
ದಬಾಂಗ್ 3 ಚಿತ್ರವನ್ನ ಪ್ರಭುದೇವ ನಿರ್ದೇಶನ ಮಾಡ್ತಿದ್ದಾರೆ. ಸಲ್ಮಾನ್ ಸಹೋದರ ಅರ್ಬಾಜ್ ಖಾನ್ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರ ಮಾಡಬೇಕೆಂದು ಸ್ಕ್ರಿಪ್ಟ್ ಬಗ್ಗೆ ಚರ್ಚೆ ಮಾಡುವಾಗಲೇ ಸುದೀಪ್ ಈ ಪಾತ್ರಕ್ಕೆ ಬೇಕು ಎಂದು ಹೆಸರು ಪ್ರಸ್ತಾಪಿಸಿದರಂತೆ.

ಕಿಚ್ಚನ ಹೆಸರು ಹೇಳಿದ್ದು ಪ್ರಭುದೇವ
ದಬಾಂಗ್ 3 ಚಿತ್ರದಲ್ಲಿ ಇಂತಹದೊಂದು ಪಾತ್ರವಿದೆ. ಈ ಕ್ಯಾರೆಕ್ಟರ್ ಗೆ ಸುದೀಪ್ ಸೂಕ್ತವೆಂದು ನಿರ್ಧರಿಸಿದ್ದು ನಿರ್ದೇಶಕ ಪ್ರಭುದೇವ. 'ಸುದೀಪ್ ಅವರ ಹೆಸರನ್ನ ಚಿತ್ರತಂಡಕ್ಕೆ ಹೇಳಿದ ನಂತರ ಎಲ್ಲರೂ ಸರ್ಪ್ರೈಸ್ ಆದರು. ಓಹ್ ಅವರಾ? ಎಂದು ಖುಷಿಯಾದರು' ಎಂದು ಪ್ರಭುದೇವ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಸೋಹಿಲ್ ಖಾನ್ ಮೂಲಕ ಡೀಲ್
'ಸುದೀಪ್ ಮತ್ತು ಸಲ್ಮಾನ್ ಖಾನ್ ಗೆ ಪರಿಚಯವಿದೆ. ಸಲ್ಮಾನ್ ಖಾನ್ ಸಹೋದರ ಸೋಹಿಲ್ ಖಾನ್ ಕಿಚ್ಚನಿಗೆ ಆತ್ಮೀಯ ಸ್ನೇಹಿತ. ಇಬ್ಬರು ಒಟ್ಟಿಗೆ ಕ್ರಿಕೆಟ್ ಕೂಡ ಆಡ್ತಾರೆ. ಹಾಗಾಗಿ, ಸುದೀಪ್ ಅವರನ್ನ ಈ ಪಾತ್ರಕ್ಕೆ ಕರೆತರಲು ದಬಾಂಗ್ ಚಿತ್ರತಂಡಕ್ಕೆ ಕಷ್ಟವೇನು ಆಗಿರಲ್ಲ. ಸೋಹಿಲ್ ಖಾನ್ ಮೂಲಕ ಡೀಲ್ ಆಯ್ತು' ಎಂದು ಪ್ರಭುದೇವ ತಿಳಿಸಿದ್ದಾರೆ.

ಮುಂದಿನ ವಾರ ದಬಾಂಗ್ ಸೆಟ್ ನಲ್ಲಿ ಸುದೀಪ್
ಈಗಾಗಲೇ ದಬಾಂಗ್ 3 ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. ಮುಂದಿನ ವಾರದಲ್ಲಿ ಸುದೀಪ್ ದಬಾಂಗ್ ಚಿತ್ರತಂಡವನ್ನ ಸೇರಿಕೊಳ್ಳಲಿದ್ದಾರೆ. ಸಲ್ಮಾನ್ ಖಾನ್, ಸುದೀಪ್ ಸೇರಿದಂತೆ ಸೋನಾಕ್ಷಿ ಸನ್ಹಾ, ಅರ್ಬಾಜ್ ಖಾನ್, ಮಹೀ ಗಿಲ್, ನಿಖ್ತಿನ್ ಧೀರ್ ಇನ್ನು ಹಲವರು ನಟಿಸಲಿದ್ದಾರೆ.


Click it and Unblock the Notifications











