»   » ರನ್ನ ಬಿಡುಗಡೆ ಸಂಭ್ರಮದಲ್ಲಿ ಸುದೀಪ್ ಕ್ಷಮೆ ಕೋರಿದ್ದು ಯಾರನ್ನ?

ರನ್ನ ಬಿಡುಗಡೆ ಸಂಭ್ರಮದಲ್ಲಿ ಸುದೀಪ್ ಕ್ಷಮೆ ಕೋರಿದ್ದು ಯಾರನ್ನ?

By: ಜೀವನರಸಿಕ
Subscribe to Filmibeat Kannada

ಕನ್ನಡದ ಟಾಪ್ ಸ್ಟಾರ್ಗಳ ಸಿನಿಮಾಗಳು ತೆರೆಗೆ ಬರ್ತವೆ ಅಂದ್ರೆ ರಿಲೀಸಾಗೋ ಒಂದುವಾರ ಹಿಂದೆ ಒಂದೆರಡು ವಾರ ಮುಂದೆ ಯಾವ ಸಿನಿಮಾಗಳೂ ಥಿಯೇಟರ್ ಹತ್ತೋ ಧೈರ್ಯ ಮಾಡೋದಿಲ್ಲ.

'ರನ್ನ' ಸಿನಿಮಾ ಬರುತ್ತೆ ಅಂತ ಸಣ್ಣಪುಟ್ಟ ಸಿನಿಮಾಗಳು ಒಂದೂವರೆ ತಿಂಗಳಿಂದ ಕಾಯ್ತಾನೇ ಇವೆ. ಏಪ್ರಿಲ್ ತಿಂಗಳಲ್ಲೇ 'ರನ್ನ' ರೆಡಿ ಅಂತ ಸುದ್ದಿಯೂ ಆಯ್ತು. ಆದ್ರೆ ರೆಡಿಯಾಗಿದ್ದು ಮಾತ್ರ ಮೇ ಕೊನೆಯಲ್ಲಿ. ಈಗ ಜೂನ್ 4ಕ್ಕೆ ರಿಲೀಸಾಗ್ತಿದೆ.

ರನ್ನ ರಿಲೀಸ್ ಆದ ನಂತ್ರ ತೆರೆಗೆ ಬರೋಣ, ಯಾಕೆ ದೊಡ್ಡವರ ನಡುವೆ ಸಿಕ್ಕಿಹಾಕಿಕೊಂಡು ಕಲೆಕ್ಷನ್ ಇಲ್ದೆ ಕಳೆದು ಹೋಗೋದು ಅಂತ ಹತ್ತಕ್ಕೂ ಹೆಚ್ಚು ಸಿನಿಮಾಗಳು ಸೆನ್ಸಾರ್ ಆದ್ರೂ ಥಿಯೇಟರ್ ಇಲ್ಲದೆ ರನ್ನ ಬಂದ ನಂತ್ರ ಬಂದ್ರಾಯ್ತು ಅಂತ ಲೆಕ್ಕ ಹಾಕಿವೆ. [ಹಳೆದು ಹೋಗ್ಲಿ, ಹೊಸದು ಬರ್ಲಿ]

Why did Sudeep apologize at Ranna press meet

ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯಲ್ಲಿ ನಿಂತ ಆರಂಭದಲ್ಲೇ ಕಿಚ್ಚ ಸುದೀಪ್ 'ರನ್ನ' ಸಿನಿಮಾ ತಾಂತ್ರಿಕ ಕಾರಣಗಳಿಂದ ತಡವಾಗಿದೆ. ಇಲ್ಲದಿದ್ರೆ ಇಷ್ಟೊತ್ತಿಗಾಗಲೇ ಪ್ರೇಕ್ಷಕರ ಮುಂದಿರ್ತಿತ್ತು. ನಮ್ಮ ಸಿನಿಮಾ ಡೇಟ್ಸ್ ಏರುಪೇರಿನಿಂದಾಗಿ ಯಾವುದಾದ್ರೂ ಸಿನಿಮಾಗಳಿಗೆ ತೊಂದರೆಯಾಗಿದ್ರೆ ಕ್ಷಮೆ ಕೋರ್ತೀನಿ ಅಂತ ಹೇಳಿದ್ರು.

ಸ್ಟಾರ್ ನಟನ ಈ ಸೌಜನ್ಯ ಎಲ್ಲ ನಾಯಕರಿಗೂ ಮಾದರಿ. ಇನ್ನು 'ರನ್ನ' ಬಂದ ನಂತ್ರ ಮಳೆಗಾಲವಾದ್ರೂ ಪರ್ವಾಗಿಲ್ಲ ಥಿಯೇಟರ್ ಹಿಡಿಯೋಕೆ ನಿರ್ಮಾಪಕರು ವಿತರಕರ ಮನೆ ಮುಂದೆ ಹಿಂದೆ ಕ್ಯೂ ನಿಂತಿರೋ ಸುದ್ದಿ ಇದೆ. ['ರನ್ನ' ಸುದೀಪ್ ಜತೆ ನಟಿಸಿದ ಖುಷಿಯಲಿ ಆನಂದಭಾಷ್ಪ]

English summary
Kiccha Sudeep has apologized to small movie makers who are waiting for Ranna to be released, so that their business is not affected. Whenever big movies release, small film producers withdraw their movie release with apprehension of losing collection.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada