Don't Miss!
- Lifestyle
ಬೆಳ್ಳಿಯ ಆಭರಣಗಳು ಹೊಳಪಿನಿಂದ ಕೂಡಿರಲು ಈ ಟ್ರಿಕ್ಸ್ ಬಳಸಿ
- News
ಜಾರ್ಖಂಡ್: ಆಸ್ಪತ್ರೆಯಲ್ಲಿ ಅಗ್ನಿ ದುರಂತ- ವೈದ್ಯ ದಂಪತಿ ಸೇರಿ 6 ಮಂದಿ ಸಾವು!
- Automobiles
ಟಾಟಾದ ಜನಪ್ರಿಯ ಕಾರುಗಳ ಬೆಲೆ ಏರಿಕೆ: ಘೋಷಣೆ
- Sports
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಸರ್ಫರಾಜ್ ಖಾನ್ಗೆ ಅವಕಾಶ ಇಲ್ಲ: ಬಿಸಿಸಿಐ ನೀಡಿದ ಭರವಸೆ ಏನು?
- Technology
ChatGPT Effect: AI ಟೂಲ್ಸ್ ಬ್ಯಾನ್ ಮಾಡಲು ಮುಂದಾದ ಬೆಂಗಳೂರಿನ ಈ ಕಾಲೇಜುಗಳು!
- Finance
ಹಿಂಡನ್ಬರ್ಗ್ vs ಅದಾನಿ ನಡುವೆ ಎಲ್ಐಸಿ, ಎಸ್ಬಿಐ ಉಳಿತಾಯ ರಿಸ್ಕ್ನಲ್ಲಿದೆಯೇ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಡ್ರಗ್ಸ್ ಪ್ರಕರಣದಲ್ಲಿ ಬರಿ ಹೆಣ್ಮಕ್ಳ ಹೆಸರು ಮಾತ್ರ ಯಾಕೆ ಬರ್ತಿದೆ?
ಕನ್ನಡ ಚಿತ್ರರಂಗ ಮತ್ತು ಹಿಂದಿ ಚಿತ್ರರಂಗದಲ್ಲಿ ಸದ್ಯ ಡ್ರಗ್ಸ್ ಪ್ರಕರಣ ಬಹಳ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಡ್ರಗ್ಸ್ ಸೇವನೆ ಬಗ್ಗೆ ಅನುಮಾನ ವ್ಯಕ್ತವಾದ ಬಳಿಕ ಎನ್‌ಸಿಬಿ ಅಧಿಕಾರಿಗಳು ಡ್ರಗ್ಸ್ ಪೆಡ್ಲರ್‌ಗಳ ಜಾಲ ಬೆನ್ನತ್ತಿದ್ದಾರೆ.
Recommended Video
ಬೆಂಗಳೂರಿನಲ್ಲಿ ಕೆಲವು ಡ್ರಗ್ಸ ಪೆಡ್ಲರ್‌ಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ಸ್ಯಾಂಡಲ್‌ವುಡ್ ಇಂಡಸ್ಟ್ರಿಯ ಇಬ್ಬರು ಖ್ಯಾತ ನಟಿಯರನ್ನು ಅರೆಸ್ಟ್ ಮಾಡಿದ್ದಾರೆ. ಆ ಕಡೆ ಬಾಲಿವುಡ್‌ನಲ್ಲಿ ನಟಿ ರಿಯಾ ಚಕ್ರವರ್ತಿ ಬಂಧನವಾಗಿದೆ. ಡ್ರಗ್ಸ್ ಜಾಲದಲ್ಲಿ ದೊಡ್ಡ ದೊಡ್ಡ ನಟರು ಹೆಸರು ಸಹ ಇದೆ, ಆದರೆ ಏಕೆ ಬರಿ ಹೆಣ್ಮಕ್ಳ ಹೆಸರು ಮಾತ್ರ ಹೊರಗೆ ಬರ್ತಿದೆ ಎಂಬ ಕೂಗು ಸದ್ದು ಮಾಡ್ತಿದೆ? ಮುಂದೆ ಓದಿ....
ಡ್ರಗ್ಸ್
ಪ್ರಕರಣ:
ನಟಿ
ಸಂಜನಾ
ಗಲ್ರಾನಿ
5
ದಿನ
ಸಿಸಿಬಿ
ಪೊಲೀಸರ
ವಶಕ್ಕೆ

ನಟಿಯರೇ ಏಕೆ ಟಾರ್ಗೆಟ್?
ಡ್ರಗ್ಸ್ ಜಾಲದಲ್ಲಿ ಉದ್ಯಮಿಗಳ ಪುತ್ರರು, ರಾಜಕಾರಣಿಗಳ ಮಕ್ಕಳು, ಖ್ಯಾತ ನಟರು, ಖ್ಯಾತ ನಟಿಯರು ಇದ್ದಾರೆ ಇಂದ್ರಜಿತ್ ಲಂಕೇಶ್ ಆರೋಪಿಸಿದ್ದರು. ಆದರೆ, ಇದುವರೆಗೂ ಇಬ್ಬರು ನಟಿಯರ ಹೆಸರು ಬಿಟ್ಟರೆ ಉದ್ಯಮಿ ಪುತ್ರರಾಗಲಿ ಅಥವಾ ರಾಜಕಾರಣಿಗಳ ಪುತ್ರರ ಹೆಸರುಗಳನ್ನಾಗಲಿ ಬಹಿರಂಗವಾಗಿಲ್ಲ. ಸಿಸಿಬಿ ನೋಟಿಸ್ ಸಹ ನೀಡಿಲ್ಲ.

ಮೂವರು ನಟಿಯರು ಅರೆಸ್ಟ್
ಡ್ರಗ್ಸ್ ಪ್ರಕರಣದಲ್ಲಿ ಕನ್ನಡದ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಅರೆಸ್ಟ್ ಆಗಿದ್ದಾರೆ. ಇನ್ನು ಬಾಲಿವುಡ್‌ನಲ್ಲಿ ಸುಶಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ರಿಯಾ ಚಕ್ರವರ್ತಿಯನ್ನು ಎನ್‌ಸಿಬಿ ಅಧಿಕಾರಿಗಳು ಇಂದು ಬಂಧಿಸಿದ್ದಾರೆ.
Breaking:
ಸುಶಾಂತ್
ಸಿಂಗ್
ಪ್ರೇಯಸಿ
ರಿಯಾ
ಚಕ್ರವರ್ತಿ
ಅರೆಸ್ಟ್

ಪಾರೂಲ್ ಯಾದವ್ ಪ್ರಶ್ನೆ?
ಡ್ರಗ್ಸ್ ಪ್ರಕರಣದಲ್ಲಿ ಇದುವರೆಗೂ ಮೂವರು ಮಹಿಳೆಯರನ್ನು ಬಂಧಿಸಲಾಗಿದೆ. ಆದರೆ, ಕಾರ್ಪೊರೇಟ್ ವ್ಯಕ್ತಿಗಳು, ಉದ್ಯಮಿಗಳು, ಕ್ರೀಡಾಪಟುಗಳು ಅಥವಾ ನಟರು ಸಹ ಡ್ರಗ್ಸ್ ಸೇವಿಸುತ್ತಿಲ್ಲ ಮತ್ತು ಬಳಸುತ್ತಿಲ್ಲವೇ ಎಂದು ಪಾರೂಲ್ ಯಾದವ್ ಪ್ರಶ್ನಿಸಿದ್ದು, ಮೂವರು ನಟಿಯರು ಮಾತ್ರ ಏಕೆ ಬಲಿಪಶು ಎಂದು ಟೀಕಿಸಿದ್ದಾರೆ.

ತನಿಖೆ ಪ್ರಗತಿಯಲ್ಲಿದೆ.....
ಬಾಲಿವುಡ್ ಹಾಗೂ ಸ್ಯಾಂಡಲ್‌ವುಡ್ ಎರಡೂ ಕಡೆಯೂ ಡ್ರಗ್ ಪೆಡ್ಲರ್‌ಗಳು ಹಾಗೂ ಅವರ ಜೊತೆ ಆಪ್ತ ವಲಯದಲ್ಲಿ ಸಂಪರ್ಕದಲ್ಲಿದ್ದ ನಟಿಯರನ್ನು ಬಂಧಿಸಲಾಗಿದೆ. ಸದ್ಯದ ಪರಿಸ್ಥಿತಿ ಗಮನಿಸಿದರೆ ನಟಿಯರು ಮಾತ್ರ ಏಕೆ ಟಾರ್ಗೆಟ್ ಎಂಬ ಪ್ರಶ್ನೆ ಕಾಡಬಹುದು. ಆದರೆ, ತನಿಖೆ ಇನ್ನೂ ಪ್ರಗತಿಯಲ್ಲಿದೆ. ಇನ್ನೂ ಯಾವೆಲ್ಲ ಹೆಸರುಗಳು ಈ ಪ್ರಕರಣದಲ್ಲಿ ಹೊರಬೀಳಲಿದೆ ಎನ್ನುವುದು ಸದ್ಯಕ್ಕೆ ಗೊತ್ತಿಲ್ಲ.