»   » 'ಹುಚ್ಚ' ಓಂ ಪ್ರಕಾಶ್ರಾವ್ಗೆ 'ಕಿಚ್ಚ' ಸುದೀಪ್ ಮತ್ತೆ ಸಿಕ್ಕಲ್ವಾ?

'ಹುಚ್ಚ' ಓಂ ಪ್ರಕಾಶ್ರಾವ್ಗೆ 'ಕಿಚ್ಚ' ಸುದೀಪ್ ಮತ್ತೆ ಸಿಕ್ಕಲ್ವಾ?

By: ಕುಸುಮ
Subscribe to Filmibeat Kannada

ಇಂತಿ ನಿಮ್ಮ ಪ್ರೀತಿಯ 'ಕಿಚ್ಚ'. ನಿಮ್ಮ ಪ್ರೀತಿಯ ಕಿಚ್ಚನ ನಮಸ್ಕಾರಗಳು. ರಿಯಾಲಿಟಿ ಶೋಗಳಲ್ಲಿ ಸುದೀಪ್ ತಮ್ಮನ್ನು ಸಂಬೋಧಿಸಿಕೊಳ್ಳುವುದು ಹಾಗೆಯೆ. ತಪ್ಪೇನೂ ಇಲ್ಲ ಬಿಡಿ. ಹಾಗಂತ ಹೆಸರು ಬಂದಿದ್ದೇ 'ಹುಚ್ಚ' ಸಿನಿಮಾದಿಂದ. ಅಂಬರೀಷ್ಗೆ ಹೇಗೆ 'ಅಂತ' ಅನ್ನುವ ಸಿನಿಮಾ ಟರ್ನಿಂಗ್ ಪಾಯಿಂಟ್ ಆಯ್ತೋ, ಸುದೀಪ್ಗೆ ಅಂತಹಾ ಟರ್ನಿಂಗ್ ಪಾಯಿಂಟ್ ಅಂದ್ರೆ 'ಹುಚ್ಚ'.

ಹುಚ್ಚ ಸಿನಿಮಾ ತಮಿಳಿನ 'ಸೇತು' ಚಿತ್ರದ ರೀಮೇಕ್. ಆಗ ತಾನೆ ಸ್ಪರ್ಶ ಸಿನಿಮಾದಲ್ಲಿ ಸಾಫ್ಟ್ ಅಂಡ್ ಚಾಕೋಲೇಟ್ ಹೀರೋ ಆಗಿ ಕಾಣಸಿಕೊಂಡಿದ್ದ ಕಿಚ್ಚನನ್ನು ರಿಸ್ಕ್ ತೆಗೆದುಕೊಂಡು ಅಭಿನಯ ಪ್ರಧಾನ ಪಾತ್ರಕ್ಕೆ ಆಯ್ಕೆ ಮಾಡಿದ್ದು ನಿರ್ದೇಶಕ ಓಂಪ್ರಕಾಶ್ ರಾವ್ 'ಹುಚ್ಚುತನ' ಅಂದ್ರೂ ತಪ್ಪಲ್ಲ.

ಅಂತಹಾ ರಿಸ್ಕ್ ತೆಗೆದುಕೊಂಡ ಓಂ ಪ್ರಕಾಶ್ ರಾವ್, ಈಗ ಯಾವ ಸಿನಿಮಾ ಮಾಡಿದ್ರೂ ಗೆಲ್ಲದೆ ರಿಸ್ಕ್ನಲ್ಲಿದ್ದಾರೆ. ಆದರೂ ಮಾಸ್ ಸಿನಿಮಾಗಳ ವಿಷಯ ಬಂದ್ರೆ ಇವತ್ತಿಗೂ ನೆನಪಾಗೋ ನಿರ್ದೇಶಕ ಓಂಪ್ರಕಾಶ್ ರಾವ್. ಕಿಚ್ಚ ಕೂಡ ಮಾಸ್ ಹೀರೋ. ಈಗ ತನ್ನ ಲೈಫ್ಗೇ ದೊಡ್ಡ ಚೇಂಜ್ ಓವರ್ ನೀಡಿದ ನಿರ್ದೇಶಕನ ಬಗ್ಗೆ ಕಿಚ್ಚ ಯೋಚಿಸಿದ್ದಾರಾ? ಅಥವಾ ಓಂಪ್ರಕಾಶ್ರಾವ್ ಇತ್ತೀಚೆಗೆ ಕಿಚ್ಚನಿಗೆ ಕಥೆ ಹೇಳಿಲ್ಲವಾ ಗೊತ್ತಿಲ್ಲ. [ಇನ್ನೊಂದು ಎಡವಟ್ಟು ಮಾಡಿಕೊಂಡ ಓಂಪ್ರಕಾಶ್ ರಾವ್]

Will Om Prakash Rao and Sudeep come together again?

ಆದರೆ ಸುದೀಪ್ ಸಂದರ್ಶನಗಳಲ್ಲಿ ಕೂಡ 'ಹುಚ್ಚ' ಸಿನಿಮಾ ಬಗ್ಗೆ ಮಾತನಾಡಿದ್ರೂ, ಓಂಪ್ರಕಾಶ್ ರಾವ್ ಬಗ್ಗೆ ಹೇಳಿರೋದು ಕಡಿಮೇನೇ. ಸುದೀಪ್ ಅಭಿನಯ ಮತ್ತು ತೆಗೆದುಕೊಂಡ ರಿಸ್ಕ್ ಸಿನಿಮಾವನ್ನು ಗೆಲ್ಲಿಸಿತು ಅನ್ನೋದರಲ್ಲಿ ಅನುಮಾನವಿಲ್ಲ.

ಆದರೆ ಬೆಡ್ ಜಾಹಿರಾತಿನಲ್ಲಿ ಅಭಿನಯಿಸಿ, ಸ್ಪರ್ಶದಂತಹಾ ಸಾಫ್ಟ್ ಸಿನಿಮಾದಲ್ಲಿ ನಟಿಸಿದ್ದ ಚಾಕೋಲೇಟ್ ಹೀರೋನನ್ನು ಒರಟು ಪಾತ್ರದ ಹುಚ್ಚದಂತಹಾ ಸಿನಿಮಾಗೆ ಆಯ್ಕೆ ಮಾಡಿದ್ದು ಓಂಪ್ರಕಾಶ್ ರಾವ್ ಅನ್ನೋ ನಿರ್ದೇಶಕನ ತಾಕತ್ತು ತಾನೆ? ['ಕೋಟಿಗೊಬ್ಬ-2' ಬಗ್ಗೆ ಬ್ರೇಕಿಂಗ್ ನ್ಯೂಸ್ ಕೇಳಿದ್ರೆ ಕಣ್ಣು-ಬಾಯಿ ಬಿಡ್ತೀರಾ.!]

ಸದ್ಯ ಓಂಪ್ರಕಾಶ್ ನಿರ್ದೇಶನದ ಹುಚ್ಚ-2 ಸಿನಿಮಾ ರಿಲೀಸ್ಗೆ ತಯಾರಾಗಿದೆ. ಮಾಧ್ಯಮಗಳ ಮುಂದೆ ಖಾಸಗಿ ಕಾರ್ಯಕ್ರಮಗಳಲ್ಲಿಯೂ ಓಂಪ್ರಕಾಶ್ ರಾವ್ ಕಾಣಿಸಿಕೊಂಡಿಲ್ಲ. ಈ ನಡುವೆ ಹುಬ್ಬಳ್ಳಿ' ನಂತರ ಸುದೀಪ್-ಓಂಪ್ರಕಾಶ್ರಾವ್ ಕಾಂಬಿನೇಷನ್ನಲ್ಲಿ ಮತ್ತೊಂದು ಮಾಸ್ ಸಿನಿಮಾ ಬಂದ್ರೆ ಸೂಪರ್ ಅಲ್ವಾ? [ಹುಚ್ಚ 2 ನಾಯಕಿ ಶ್ರಾವ್ಯಾಗೆ ಹೀರೋ ಸಿಕ್ಕಿದ ಕಣ್ರಿ!]

English summary
Huchcha was the turning point for Kannada actor Sudeep. It gave him the nick name Kichcha. No doubt the credit for this has to go to Om Prakash Rao, the director of Huchcha. But, after Hubballi both have not come together. Will they?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada