»   » ಕಿಚ್ಚ ಸುದೀಪ್, ದರ್ಶನ್ ಸಂಗಮದಲ್ಲಿ 'ದಿವಾರ್'

ಕಿಚ್ಚ ಸುದೀಪ್, ದರ್ಶನ್ ಸಂಗಮದಲ್ಲಿ 'ದಿವಾರ್'

Posted By:
Subscribe to Filmibeat Kannada

ಇತ್ತೀಚಿಗಷ್ಟೇ ವಿಧಿವಶರಾಗಿರುವ ಬಾಲಿವುಡ್ ಮೇರು ನಿರ್ದೇಶಕ ಹಾಗೂ ನಿರ್ಮಾಪಕ ಯಶ್ ಚೋಪ್ರಾ 1975 ರಲ್ಲಿ ನಿರ್ದೇಶಿಸಿದ್ದ 'ದೀವಾರ್' ಚಿತ್ರವು ಕನ್ನಡಕ್ಕೆ ರೀಮೇಕ್ ಆಗಲಿದೆ. ಬಾಲಿವುಡ್ ನಲ್ಲಿ ಬಂದಿದ್ದ ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಹಾಗೂ ಶಶಿಕಪೂರ್ ನಟಿಸಿದ್ದರು. ಚಿತ್ರವು ಸೂಪರ್ ಹಿಟ್ ದಾಖಲಿಸಿತ್ತು. ಈಗ ಕನ್ನಡದಲ್ಲಿ ಈ ಚಿತ್ರದ ರೀಮೇಕ್ ಹಕ್ಕನ್ನು ನಿರ್ದೇಶಕ ಇಂದ್ರಜಿತ್ ಲಂಕೇಶ್ ಪಡೆದುಕೊಂಡಿದ್ದಾರೆ. ಕನ್ನಡದಲ್ಲಿ ಸುದೀಪ್ ಹಾಗೂ ದರ್ಶನ್ ನಟಿಸಲಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಇಂದ್ರಜಿತ್ ಲಂಕೇಶ್, "ನಾನು ಯಶ್ ಚೋಪ್ರಾ ನಿರ್ದೇಶನದ 'ದೀವಾರ್' ಚಿತ್ರದ ರೀಮೇಕ್ ಹಕ್ಕನ್ನು ಪಡೆದುಕೊಂಡಿದ್ದೇನೆ. ಕನ್ನಡದಲ್ಲಿ ನಾನು ಈ ಚಿತ್ರವನ್ನು ರೀಮೇಕ್ ಮಾಡಲಿದ್ದು ಬಾಲಿವುಡ್ ನಲ್ಲಿ ಅಮಿತಾಬ್ ಬಚ್ಚನ್ ಹಾಗೂ ಶಶಿಕಪೂರ್ ನಟಿಸಿದ್ದ ಪಾತ್ರಗಳನ್ನು ಕನ್ನಡದಲ್ಲಿ ಕಿಚ್ಚ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಬೇಕೆಂಬ ಬಯಕೆ ಹೊಂದಿದ್ದೇನೆ" ಎಂದಿದ್ದಾರೆ.

ದೀವಾರ್ ರೀಮೇಕ್ ನಲ್ಲಿ ಸುದೀಪ್, ದರ್ಶನ್..?

ಇತ್ತೀಚಿಗಷ್ಟೇ ದಿವಂಗತರಾದ ಯಶ್ ಚೋಪ್ರಾ ನಿರ್ದೇಶನದಲ್ಲಿ 1975 ರಲ್ಲಿ ತೆರೆಗೆ ಬಂದ 'ದೀವಾರ್' ಚಿತ್ರವು ಕನ್ನಡದಲ್ಲಿ ರೀಮೇಕ್ ಆಗಲಿದೆ. ರೀಮೇಕ್ ಹಕ್ಕನ್ನು ಕೊಂಡು ಚಿತ್ರವನ್ನು ಕನ್ನಡದಲ್ಲಿ ಮಾಡಲು ನಿರ್ದೇಶಕ ಇಂದ್ರಜಿತ್ ಲಂಕೇಶ್ ಯೋಜನೆ ಹಾಕಿಕೊಂಡಿದ್ದಾರೆ. ಇಂದ್ರಜಿತ್ ಪ್ರಕಾರ, ಈ ಚಿತ್ರದಲ್ಲಿ ನಾಯಕರಾಗಿ ಸುದೀಪ್ ಹಾಗೂ ದರ್ಶನ್ ಮಾತ್ರ ನಟಿಸಲು ಸಾಧ್ಯ.

ಅಮಿತಾಬ್ ಹಾಗೂ ಶಶಿಕಪೂರ್ ಜೋಡಿ ಮೋಡಿ

ಬಾಲಿವುಡ್ ಚಿತ್ರ 'ದೀವಾರ್'ನಲ್ಲಿ ಇಬ್ಬರು ಸಹೋದರರ ಕಥೆಯಿದ್ದು, ಅಲ್ಲಿ ಅವರಿಬ್ಬರೂ ಬೇರೆ ಬೇರೆ ರೀತಿಯಲ್ಲಿ ಜೀವನ ನಡೆಸುತ್ತಾರೆ. ಚಿತ್ರದ ಮುಂದುವರಿದ ಭಾಗದಲ್ಲಿ ಅಮಿತಾಬ್ ಪಾತ್ರಧಾರಿ ಸ್ಮಗ್ಲರ್ ಹಾಗೂ ಶಶಿಕಪೂರ್ ಪಾತ್ರಧಾರಿ ಪೊಲೀಸ್ ಆಗಿ ಬದಲಾಗುತ್ತಾರೆ.

1975ರಲ್ಲಿ ಬಿಡುಗಡೆ; 7 ಫಿಲಂ ಫೇರ್ ಪ್ರಶಸ್ತಿ

'ದೀವಾರ್' ಚಿತ್ರವು 1975 ರಲ್ಲಿ ತೆರೆಗೆ ಬಂದಿದ್ದು ಸೂಪರ್ ಹಿಟ್ ದಾಖಲಿಸಿದೆ. ಫಿಲಂ ಫೇರ್ ಬೆಸ್ಟ್ ಮೂವಿ ಅವಾರ್ಡ್ ಸೇರಿದಂತೆ ಉಳಿದ 6 ಫಿಲಂ ಫೇರ್ ಪ್ರಶಸ್ತಿಗಳನ್ನು ಅದು ಬಾಚಿಕೊಂಡಿದೆ.

ಕಥೆಯಷ್ಟೇ ಅಲ್ಲ, ಸಂಭಾಷಣೆಯೂ ಸೂಪರ್!

'ದೀವಾರ್' ಚಿತ್ರದ ಕಥೆ ಹಾಗೂ ಚಿತ್ರಕಥೆ ತುಂಬಾ ಚೆನ್ನಾಗಿದೆ. ಅಷ್ಟೇ ಅಲ್ಲ, ಚಿತ್ರದ ಸಂಭಾಷಣೆ ಕೂಡ ಎಕ್ಸಲೆಂಟ್. 37 ವರ್ಗಳಾಗಿದ್ದರೂ (1975 ರಲ್ಲಿ ಬಿಡುಗಡೆಯಾಗಿದ್ದು) ಇಂದಿಗೂ ಆ ಚಿತ್ರದ ಬಹಳಷ್ಟು ಸಂಭಾಷಣೆಯನ್ನು ಜನರು ನೆನಪಿಸಿಕೊಳ್ಳುತ್ತಾರೆ.

'ದೀವಾರ್ ಚಿತ್ರದ ಒಂದು ಸಂಭಾಷಣೆಯ ಝಲಕ್!

ವಿಜಯ್: ಆಜಾ ಮೇರೆ ಪಾಸ್ ಬಂಗ್ಲಾ ಹೈ.., ಗಾಡಿ ಹೈ.., ಪೈಸಾ ಹೈ...ತಮ್ಹಾರೆ ಪಾಸ್ ಕ್ಯಾ ಹೈ?
ರವಿ: ಮೇರೆ ಪಾಸ್ ಮಾ ಹೈ...!

ಪರ್ವಿನ್ ಬಾಬ್ಬಿ ಪಾತ್ರ ನೋಡಿ ಪ್ರೇಕ್ಷಕರು ಶಾಕ್!

'ದೀವಾರ್' ಚಿತ್ರದಲ್ಲಿ ಪರ್ವಿನ್ ಬಾಬ್ಬಿ ಮಾಡಿದ್ದ ಬೋಲ್ಡ್ ಪಾತ್ರ, ಆ ಕಾಲದ ಸಂಪ್ರದಾಯಕ್ಕೆ ವಿರುದ್ಧವಾಗಿದ್ದು ಬಹಳಷ್ಟು ಸೆನ್ಸೇಷನ್ ಸೃಷ್ಟಿಸಿತ್ತು. ಆ ಚಿತ್ರದಲ್ಲಿ ಸ್ಮೋಕಿಂಗ್ ಹಾಗೂ ಡ್ರಿಂಕಿಂಗ್ ಮಾಡುತ್ತಾ ತನ್ನ ಲವರ್ ಜೊತೆ ಪರ್ವಿನ್ ಮಲಗುವ ದೃಶ್ಯವನ್ನು ಜನ ಅಚ್ಚರಿಯಿಂದ ನೋಡಿದ್ದರು.

ಸುದೀಪ್, ದರ್ಶನ್ ಒಟ್ಟಾಗಿ ನಟಿಸ್ತಾರಾ?

'ದೀವಾರ್' ಚಿತ್ರವನ್ನು ಕನ್ನಡದಲ್ಲಿ ಮಾಡಲು ನಿರ್ದೇಶಕ ಇಂದ್ರಜಿತ್ ಲಂಕೇಶ್ ಸಿದ್ಧರಾಗುತ್ತಿದ್ದಾರೆ. ಆದರೆ ಅವರೆಣಿಸಿದಂತೆ ಸುದೀಪ್ ಹಾಗೂ ದರ್ಶನ್ ಈ ಚಿತ್ರದಲ್ಲಿ ಒಟ್ಟಾಗಿ ನಟಿಸಬಹುದೇ? ನಟಿಸಲಿ ಎಂಬ ಹಾರೈಕೆ ಬಹಳಷ್ಟು ಅಭಿಮಾನಿಗಳದ್ದು. ಆದರೆ ಉತ್ತರ ಸದ್ಯಕ್ಕೆ ಸಿಕ್ಕಿಲ್ಲ, ಕಾದು ನೋಡಬೇಕಿದೆ...

ಮುಂದುವರಿದ ಇಂದ್ರಜಿತ್ "ಯಶ್ ಚೋಪ್ರಾ ಅವರು ವಿಧಿವಶರಾಗುವುದಕ್ಕಿಂತ ಮೊದಲೇ ಈ 'ದೀವಾರ್' ಚಿತ್ರದ ರೀಮೇಕ್ ಹಕ್ಕನ್ನು ಪಡೆದುಕೊಂಡಿದ್ದೆ. ನನ್ನ ಅನಿಸಿಕೆಯಂತೆ ಮೂಲ ಚಿತ್ರದಲ್ಲಿ ಅಮಿತಾಬ್ ಹಾಗೂ ಶಶಿಕಪೂರ್ ನಟಿಸಿದ್ದ ಪಾತ್ರಗಳನ್ನು ಇಲ್ಲಿ ಸುದೀಪ್ ಮತ್ತು ದರ್ಶನ್ ನಟಿಸಿದರೆ ಒಳ್ಳೆಯದು. ನಾನು ಕಳೆದ ಬಾರಿ ದರ್ಶನ್ ಅವರನ್ನು ಭೇಟಿಯಾದಾಗ ಈ ಬಗ್ಗೆ ಮಾತನಾಡಿದ್ದೇನೆ. ಆದರೆ ದರ್ಶನ್ ನಟಿಸುವ ಬಗ್ಗೆ ಇನ್ನಷ್ಟೇ ಪಕ್ಕಾ ಆಗಬೇಕಿದೆ" ಎಂದಿದ್ದಾರೆ.

ನಿರ್ದೇಶಕ ಇಂದ್ರಜಿತ್ ಪ್ರಕಾರ, 'ದೀವಾರ್' ಚಿತ್ರದ ಪಾತ್ರಗಳಿಗೆ ಕನ್ನಡದಲ್ಲಿ ಸುದೀಪ್ ಮತ್ತು ದರ್ಶನ್ ಬಿಟ್ಟು ಇನ್ಯಾರೂ ಜೀವತುಂಬಲು ಸಾಧ್ಯವಿಲ್ಲ. ಅವರಿಬ್ಬರನ್ನೇ ಮನಸ್ಸಿನಲ್ಲಿಟ್ಟುಕೊಂಡು ಇಂದ್ರಜಿತ್ ಈ ಚಿತ್ರದ ರೀಮೇಕ್ ಹಕ್ಕನ್ನು ಖರೀದಿಸಿದ್ದಾರಂತೆ. ಸುದೀಪ್ ಮತ್ತು ದರ್ಶನ್ ಇಬ್ಬರೂ ಒಪ್ಪಿ ತಮ್ಮ ಈ 'ಡ್ರೀಮ್ ಪ್ರೊಜೆಕ್ಟ್' ಕನಸನ್ನು ನನಸು ಮಾಡಲಿದ್ದಾರೆ ಎಂಬುದು ಇಂದ್ರಜಿತ್ ಅಂಬೋಣ... (ಒನ್ ಇಂಡಿಯಾ ಕನ್ನಡ)

English summary
Late Yash Chopra's 1975s Bollywood movie Deewaar is to remake in Kannada. The Hindi film, which starred Amitabh Bachchan and Shashi Kapoor, is likely to feature Sudeep and Darshan in the lead roles. Indrajit Lankesh has acquired the rights of the film and he told that he wants to cast Sudeep and Darshan for this. 
 
Please Wait while comments are loading...