For Quick Alerts
  ALLOW NOTIFICATIONS  
  For Daily Alerts

  2015 ರಲ್ಲಿ ಭರವಸೆ ಮೂಡಿಸಿದ ಯುವ ತಾರೆಯರು

  By Harshitha
  |

  ನೋಡನೋಡುತ್ತಲೇ 2015ಕ್ಕೆ ಗುಡ್ ಬೈ ಹೇಳುವ ಕಾಲ ಬಂದೇ ಬಿಡ್ತು. 2015ಕ್ಕೆ ಟಾಟಾ ಹೇಳಿ, 2016 ರನ್ನ ಬರ ಮಾಡಿಕೊಳ್ಳುವ ಮುನ್ನ ಈ ವರ್ಷ ಸ್ಯಾಂಡಲ್ ವುಡ್ ನಲ್ಲಿ ಏನೇನೆಲ್ಲಾ ಆಯ್ತು ಅಂತ ನೀವು ತಿಳಿಯಲೇಬೇಕು.

  ಈ ವರ್ಷ ಬರೀ ಸ್ಟಾರ್ ನಟರಿಗೆ ಮಾತ್ರ ಅಲ್ಲ. ಹೊಸಬರಿಗೂ ಅದೃಷ್ಟ ಖುಲಾಯಿಸಿದೆ. ಡಾ.ರಾಜ್ ಕುಮಾರ್ ಮೊಮ್ಮಗ ವಿನಯ್ ರಾಜ್ ಕುಮಾರ್ ಸೇರಿದಂತೆ ಅನೇಕ ಯುವ ಪ್ರತಿಭೆಗಳು 2015 ರಲ್ಲಿ ಸ್ಯಾಂಡಲ್ ವುಡ್ ಬೆಳ್ಳಿ ಪರದೆ ಮೇಲೆ ತಮ್ಮ ಅದೃಷ್ಟ ಪರೀಕ್ಷೆ ಮಾಡಿದರು. [ವರ್ಷವಿಡೀ ಬ್ರೇಕಿಂಗ್ ನ್ಯೂಸ್ ಮಾಡಿದ ಕನ್ನಡ ನಟ ಯಾರು?]

  ಮೊದಲ ಚಿತ್ರದಲ್ಲೇ ಗಾಂಧಿನಗರದಲ್ಲಿ ಭರವಸೆ ಮೂಡಿಸಿರುವ ನವ ಕಲಾವಿದರ ಪಟ್ಟಿ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ.....

  ವಿನಯ್ ರಾಜ್ ಕುಮಾರ್

  ವಿನಯ್ ರಾಜ್ ಕುಮಾರ್

  ಡಾ.ರಾಜ್ ಕುಮಾರ್ ಮೊಮ್ಮಗ, ರಾಘವೇಂದ್ರ ರಾಜ್ ಕುಮಾರ್ ಪುತ್ರ ವಿನಯ್ ರಾಜ್ ಕುಮಾರ್ ಬೆಳ್ಳಿತೆರೆ ಮೇಲೆ ಎಂಟ್ರಿಕೊಟ್ಟಿದ್ದು ಇದೇ ವರ್ಷ. ಅದು 'ಸಿದ್ದಾರ್ಥ' ಚಿತ್ರದ ಮೂಲಕ. ಮೊದಲ ಚಿತ್ರದಲ್ಲೇ ಆಕ್ಷನ್ ಮತ್ತು ಡ್ಯಾನ್ಸ್ ಮೂಲಕ ಜನರ ಮನ ಗೆಲ್ಲುವಲ್ಲಿ ವಿನಯ್ ಯಶಸ್ವಿ ಆದರು ಅಂದ್ರೆ ತಪ್ಪಾಗಲಿಕ್ಕಿಲ್ಲ. ['ಸಿದ್ದಾರ್ಥ' ವಿಮರ್ಶೆ: ಅಣ್ಣಾವ್ರ ಹೆಸರುಳಿಸಿದ ಮೊಮ್ಮಗ]

  ನಿರುಪ್ ಭಂಡಾರಿ

  ನಿರುಪ್ ಭಂಡಾರಿ

  ನೋಡೋಕೆ ಸ್ಮಾರ್ಟ್ ಅಂಡ್ ಹ್ಯಾಂಡ್ಸಮ್ ಆಗಿರುವ ನಿರುಪ್ ಭಂಡಾರಿ ಇಂದು ಹರೆಯದ ಹುಡುಗಿಯರ ಡ್ರೀಮ್ ಬಾಯ್ ಆಗಿರುವುದಕ್ಕೆ ಕಾರಣ 'ರಂಗಿತರಂಗ' ಚಿತ್ರ. ಮೊದಲ ಚಿತ್ರದಲ್ಲೇ ನಿರುಪ್ ಭಂಡಾರಿ ಗಾಂಧಿನಗರದಲ್ಲಿ ಭರವಸೆ ಮೂಡಿಸಿರುವುದು ಸುಳ್ಳಲ್ಲ. [ಚಿತ್ರ ವಿಮರ್ಶೆ : 'ರಂಗಿತರಂಗ' ಬಲು ರೋಚಕ]

  ಸಂತೋಷ್ ರೇವಾ (ವಿಕ್ಕಿ)

  ಸಂತೋಷ್ ರೇವಾ (ವಿಕ್ಕಿ)

  ದುನಿಯಾ ಸೂರಿ ಬಳಿ ಅಸಿಸ್ಟೆಂಟ್ ಆಗಿದ್ದ ಸಂತೋಷ್ ರೇವಾ ಅಲಿಯಾಸ್ ವಿಕ್ಕಿ 'ಕೆಂಡಸಂಪಿಗೆ' ಮೂಲಕ ಬೆಳ್ಳಿತೆರೆ ಮೇಲೆ ಮಿಂಚಿದರು. ಮೊದಲ ಪ್ರಯತ್ನದಲ್ಲೇ ಸಂತೋಷ್ ವಿಮರ್ಶಕರನ್ನ ಮೆಚ್ಚಿಸಿದರು. ['ಕೆಂಡಸಂಪಿಗೆ' ವಿಮರ್ಶೆ - ಸೂರಿಯ ಹೊಸ 'ದುನಿಯಾ']

  ಗುರುನಂದನ್

  ಗುರುನಂದನ್

  'ಫಸ್ಟ್ ರ್ಯಾಂಕ್ ರಾಜು' ಆಗಿ ಗುರುನಂದನ್ ಮಾಡಿರುವ ಮೋಡಿಗೆ ಈಗಲೂ ಚಿತ್ರಮಂದಿರಗಳಲ್ಲಿ ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವುದೇ ಸಾಕ್ಷಿ.

  ಅನೂಪ್ ಸಾ.ರಾ

  ಅನೂಪ್ ಸಾ.ರಾ

  'ಡವ್' ಚಿತ್ರದ ಮೂಲಕ ಸಾ.ರಾ.ಗೋವಿಂದು ಪುತ್ರ ಅನೂಪ್ ಸಾ.ರಾ 'ಆಕ್ಷನ್ ಹೀರೋ' ಆಗಿ ಎಂಟ್ರಿಕೊಟ್ಟರು.

  ನಭಾ ನಟೇಶ್

  ನಭಾ ನಟೇಶ್

  'ವಜ್ರಕಾಯ' ಚಿತ್ರದಲ್ಲಿ ಬಜಾರಿ ಪಟಾಕಿಯಾಗಿ ನಭಾ ನಟೇಶ್ ನೀಡಿದ ಅಭಿನಯಕ್ಕೆ ಕ್ಲೀನ್ ಬೌಲ್ಡ್ ಆಗದವರು ಯಾರಿದ್ದಾರೆ ಹೇಳಿ... [ಚಿತ್ರವಿಮರ್ಶೆ ; ಶಿವ ಭಕ್ತರಿಗೆ 'ವಜ್ರಕಾಯ' ನೋ ಪ್ರಾಬ್ಲಂ.!]

  ಐಶಾನಿ ಶೆಟ್ಟಿ

  ಐಶಾನಿ ಶೆಟ್ಟಿ

  'ವಾಸ್ತುಪ್ರಕಾರ' ಮತ್ತು 'ರಾಕೆಟ್' ಸಿನಿಮಾಗಳಲ್ಲಿ ಮಿಂಚಿದ ಐಶಾನಿ ಶೆಟ್ಟಿ ಕೂಡ ಈ ವರ್ಷ ಗಾಂಧಿನಗರಕ್ಕೆ ಪರಿಚಯವಾದವರು.

  ಮಾನ್ವಿತಾ ಹರೀಶ್

  ಮಾನ್ವಿತಾ ಹರೀಶ್

  'ಕೆಂಡಸಂಪಿಗೆ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಮಾನ್ವಿತಾ ಹರೀಶ್ ಕೂಡ ಈ ವರ್ಷ ಭರವಸೆ ಮೂಡಿಸಿದ ಯುವ ನಾಯಕಿಯರ ಪೈಕಿ ಒಬ್ಬರು.

  ರಾಧಿಕಾ ಚೇತನ್

  ರಾಧಿಕಾ ಚೇತನ್

  'ರಂಗಿತರಂಗ' ಚಿತ್ರದಲ್ಲಿ ನಟಿಸಿದ ರಾಧಿಕಾ ಚೇತನ್ ಗೆ ಅವಕಾಶಗಳ ಮಹಾಪೂರವೇ ಹರಿದು ಬರುತ್ತಿದೆ.

  ಅವಂತಿಕಾ ಶೆಟ್ಟಿ

  ಅವಂತಿಕಾ ಶೆಟ್ಟಿ

  'ರಂಗಿತರಂಗ' ಬೆಡಗಿ ಅವಂತಿಕಾ ಶೆಟ್ಟಿ ಕೂಡ ಕನ್ನಡ ಚಿತ್ರರಂಗದ ಬಹು ಬೇಡಿಕೆಯ ತಾರೆ ಆಗ್ಬಿಟ್ಟಿದ್ದಾರೆ.

  ಮಯೂರಿ

  ಮಯೂರಿ

  'ಅಶ್ವಿನಿ ನಕ್ಷತ್ರ' ಧಾರಾವಾಹಿ ಖ್ಯಾತಿಯ ಮಯೂರಿ 'ಕೃಷ್ಣಲೀಲಾ' ಮೂಲಕ ಬೆಳ್ಳಿಪರದೆ ಮೇಲೆ ಪದಾರ್ಪಣೆ ಮಾಡಿದ್ದು ಈ ವರ್ಷವೇ. ['ಕೃಷ್ಣಲೀಲಾ' ವಿಮರ್ಶೆ: ಗಿಮಿಕ್ ಇಲ್ಲ...ಎಲ್ಲೂ ಕೆಮ್ಮಂಗಿಲ್ಲ!]

  ಖುಷಿ

  ಖುಷಿ

  'ರಿಂಗ್ ರೋಡ್' ಸಿನಿಮಾದಲ್ಲಿ ಕಿಲ್ಲರ್ ಸುಂದರಿ ಪಾತ್ರ ನಿರ್ವಹಿಸಿದ್ದ ಖುಷಿ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿರುವುದು ಸುಳ್ಳಲ್ಲ. [ಚಿತ್ರ ವಿಮರ್ಶೆ : ರಂಗುರಂಗಿನ 'ರಿಂಗ್ ರೋಡ್' ಜರ್ನಿ]

  ಊರ್ವಶಿ ರೌಟೇಲಾ

  ಊರ್ವಶಿ ರೌಟೇಲಾ

  'ಮಿಸ್ಟರ್ ಐರಾವತ' ಮೂಲಕ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡಿದ ಬೆಡಗಿ ಊರ್ವಶಿ ರೌಟೇಲಾ ಈಗ ಬಾಲಿವುಡ್ ನ ಮೋಸ್ಟ್ ವಾಂಟೆಡ್ ನಟಿ.

  ಪ್ರಿಯಾ ಬೆಳ್ಳಿಯಪ್ಪ

  ಪ್ರಿಯಾ ಬೆಳ್ಳಿಯಪ್ಪ

  ನಟ-ನಟಿಯರ ಜೊತೆಗೆ ಈ ವರ್ಷ ಯುವ ನಿರ್ದೇಶಕರೂ ಕೂಡ ಸದ್ದು ಮಾಡಿದರು. ಅಂಥವರಲ್ಲಿ ನಿರ್ದೇಶಕಿ ಪ್ರಿಯಾ ಬೆಳ್ಳಿಯಪ್ಪ ಕೂಡ ಒಬ್ಬರು. ತಾಂತ್ರಿಕ ವರ್ಗದಲ್ಲಿ ಸಂಪೂರ್ಣ ಹೆಣ್ಣು ಮಕ್ಕಳನ್ನೇ ಬಳಸಿಕೊಂಡು 'ರಿಂಗ್ ರೋಡ್' ಸಿನಿಮಾ ಮಾಡಿದ ಪ್ರಿಯಾ ಬೆಳ್ಳಿಯಪ್ಪಗೆ ಗಾಂಧಿನಗರದಲ್ಲಿ ಉತ್ತಮ ಭವಿಷ್ಯವಿದೆ.

  ಅನುಪ್ ಭಂಡಾರಿ

  ಅನುಪ್ ಭಂಡಾರಿ

  ಮೊದಲ ಪ್ರಯತ್ನ 'ರಂಗಿತರಂಗ'ದಲ್ಲಿ ನಿರ್ದೇಶನ ಮತ್ತು ಸಂಗೀತ ನಿರ್ದೇಶನದಲ್ಲಿ ಕಮಾಲ್ ಮಾಡಿದ ಅನುಪ್ ಭಂಡಾರಿಗೆ 2015 ಮರೆಯಾದ ವರ್ಷ.

  English summary
  2015 witnessed many newcomers entering Sandalwood. Among-st those here is the list of Talented Newcomers who made promising entry into Sandalwood in 2015.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X