»   » ಭಟ್ಟರ ಮಗುವಿಗೊಂದು ಮುದ್ದಾದ ಹೆಸರು ಸೂಚಿಸಿ

ಭಟ್ಟರ ಮಗುವಿಗೊಂದು ಮುದ್ದಾದ ಹೆಸರು ಸೂಚಿಸಿ

By: ರವಿಕಿಶೋರ್
Subscribe to Filmibeat Kannada
Yograj Bhat
ಪಂಚರಂಗಿ, ಪರಮಾತ್ಮ, ಮನಸಾರೆ, ಗಾಳಿಪಟ, ಮುಂಗಾರು ಮಳೆ ಖ್ಯಾತಿಯ ಯೋಗರಾಜ್ ಭಟ್ ಈಗ ಎರಡನೇ ಬಾರಿ ತಂದೆಯಾಗಿದ್ದಾರೆ. ಗಣೇಶ ಚತುರ್ಥಿ ಹಬ್ಬದ ದಿನ ಅವರ ಮನೆಗೆ ಹೊಸ ಅತಿಥಿಯ ಆಗಮನವಾಗಿರುವುದು ಗೊತ್ತೇ ಇದೆ.

ವಿಶೇಷ ಎಂದರೆ ಈ ಬಾರಿಯೂ ಭಟ್ಟರ ಮನೆಗೆ ಲಕ್ಷ್ಮಿ ಆಗಮನವಾಗಿರುವುದು. ಅಂದರೆ ಹೆಣ್ಣು ಮಗು. 2008ರಲ್ಲಿ ಯೋಗರಾಜ್ ಭಟ್ ಹಾಗೂ ರೇಣುಕಾ ದಂಪತಿಗಳಿಗೆ ಹೆಣ್ಣು ಮಗುವಾಗಿತ್ತು. ಇನ್ನೂ 'ಮುಂಗಾರು ಮಳೆ' ಗುಂಗಿನಲ್ಲಿದ್ದ ಭಟ್ಟರು ತಮ್ಮ ಚೊಚ್ಚಲ ಮಗುವಿಗೆ ಪುನರ್ವಸು ಎಂದು ಹೆಸರಿಟ್ಟಿದ್ದರು.

ಈ ಬಾರಿ ಇನ್ನೇನು ಮುಂಗಾರು ಮುಗಿದು ಹಿಂಗಾರು ಸಮೀಪಿಸುತ್ತಿದ್ದೆ. ಈ ಬಾರಿ ಭಟ್ಟರಿಗೆ ಯಾವ ಮಳೆ ನಕ್ಷತ್ರದ ಮೇಲೆ ಮನಸ್ಸಾಗುತ್ತದೋ ಏನೋ? ಅವರ ಲೇಟೆಸ್ಟ್ ಚಿತ್ರ 'ಡ್ರಾಮಾ' ಚಿತ್ರೀಕರಣ ಮುಗಿದಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸ ಭರದಿಂದ ಸಾಗುತ್ತಿದೆ.

ಎರಡನೇ ಮಗುವೂ ಹೆಣ್ಣಾಗಿರುವ ಬಗ್ಗೆ ಅವರಿಗೇನು ಬೇಸರವಿಲ್ಲವಂತೆ. ಸಂಭ್ರಮ ಇನ್ನಷ್ಟು ಹೆಚ್ಚಾಗಿದೆ ಎನ್ನುತ್ತಾರೆ ಭಟ್ಟರು. ನನಗೊಂದು ತಂಗಿ ಬೇಕು ಎಂದು ಮೊದಲ ಮಗಳು ಇಷ್ಟಪಟ್ಟಿದ್ದಳಂತೆ. ಅವಳೊಂದಿಗೆ ನನ್ನ ಆಟಿಕೆಗಳೆಲ್ಲವನ್ನೂ ಹಂಚಿಕೊಳ್ಳುತ್ತೇನೆ. ಆ ಹೆಸರಿಡೋಣ ಈ ಹೆಸರಿಡೋಣ ಎಂದು ಏನೇನೋ ಕನಸು ಕಾಣುತ್ತಿದ್ದಳು ಎಂದಿದ್ದಾರೆ ಭಟ್ಟರು.

ಸಿನೆಮಾ ಒಂದಕ್ಕೆ ಶೀರ್ಷಿಕೆ ಇಡಲು ಸಾಕಷ್ಟು ಕಸರತ್ತು ಮಾಡುವ ಭಟ್ಟರು ಈ ಬಾರಿ ತಮ್ಮ ಎರಡನೇ ಮಗಳಿಗೆ ಏನು ಹೆಸರಿಡುತ್ತಾರೋ? ಅಷ್ಟರೊಳಗೆ ನೀವೇ ಯಾಕೆ ಒಂದು ವಿಭಿನ್ನವಾದ ಹೆಸರು ಸೂಚಿಸಬಾರದು?

English summary
Yogaraj Bhat had a memorable Ganesh festival this time, as he become a proud father for the second time. The director welcomed a new member to his family, as his wife Renuka gave birth to a baby girl on September 19.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada