»   » 'ಪೊರ್ಕಿ' ಚಿತ್ರ ವಿಮರ್ಶೆ: ಇಲ್ಲಿ ಪಿಸ್ತೂಲೇ ಪರಮಾತ್ಮ

'ಪೊರ್ಕಿ' ಚಿತ್ರ ವಿಮರ್ಶೆ: ಇಲ್ಲಿ ಪಿಸ್ತೂಲೇ ಪರಮಾತ್ಮ

By: *ಕಲಗಾರು, ದೇವಶೆಟ್ಟಿ
Subscribe to Filmibeat Kannada

ಒಂದ್ ಸಾರಿ ಕಮಿಟ್ ಆದ್ರೆ ನನ್ ಮಾತನ್ನ ನಾನೇ ಕೇಳಲ್ಲ! ದರ್ಶನ್ ಮಾತು ಮುಗಿಸುವ ಮುನ್ನ ಎದುರಾಳಿಗಳ ಕತೆ ಮುಗಿಸಿರುತ್ತಾನೆ. ಇಲ್ಲಿ ಪಿಸ್ತೂಲೇ ಪರಮಾತ್ಮ. ರೌಡಿಗಳೆಲ್ಲ ಆಟಕ್ಕುಂಟು ಲೆಕ್ಕಕ್ಕಿಲ್ಲ. ಕತೆಯೇ ಹಾಗಿದೆ. ಪಕ್ಕಾ ಮಾಸ್. ಮೂಲ 'ಮಂತ್ರ"ವೇ ಅಷ್ಟು ಫೋರ್ಸ್ ಆಗಿದೆ.

ಇದು ತೆಲುಗಿನ 'ಪೋಕಿರಿ" ರೀಮೇಕ್. ಹಳೆಯ ಯಶಸ್ವೀ ಫಾರ್ಮುಲಾ ಬಳಸಲಾಗಿದೆ. ದರ್ಶನ್ ತೆಳ್ಳಗೆ ಕಾಣುತ್ತಾರೆ. ಆದರೆ ಅಭಿನಯದಲ್ಲಿ ಬದಲಾವಣೆಯಾಗಿಲ್ಲ. ನಾಯಕಿ ಪ್ರಣೀತಾ ಬಿಳಿ ಹಾಲಿನಂತಿರುವ ಬಳುಕುವ ಬಳ್ಳಿ. ದೇವರಾಜ್, ಶೋಭರಾಜ್, ಅವಿನಾಶ್, ಧರ್ಮಾ, ಚಿತ್ರಾ ಶೆಣೈ ಎಲ್ಲರಿಗೂ ಗುರುತಿಸಿಕೊಳ್ಳುವ ಪಾತ್ರ ಕೊಡಲಾಗಿದೆ.

ಆಶಿಷ್ ವಿದ್ಯಾರ್ಥಿ ಪ್ರೈಮರಿ ಸ್ಕೂಲ್ ವಿದ್ಯಾರ್ಥಿಯಂತೆ ಆಡುತ್ತಾರೆ. ಸಾಧು-ಶರಣ್ ಕಾಮಿಡಿ ಓಕೆ. ಹರಿಕೃಷ್ಣ ಸಂಗೀತದಲ್ಲಿ ಮೂರು ಹಾಡುಗಳು ಮಸ್ತ್. ಕೆ.ಕೆ. ಛಾಯಾಗ್ರಹಣ ಚುರುಕಾಗಿದೆ. ಸಂಕಲನದಲ್ಲಿ ಇನ್ನಷ್ಟು ಸಾಧ್ಯತೆ ಬಳಸಿಕೊಳ್ಳಬಹುದಿತ್ತು. ಎಂ.ಡಿ. ಶ್ರೀಧರ್ ಇಲ್ಲಿಯವರೆಗೆ ಪಕ್ಕಾ ಆಕ್ಷನ್ ಚಿತ್ರ ಮಾಡಿರಲಿಲ್ಲ. ಈಗ ಮಾಡಿಗೆದ್ದಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada