»   »  'ಜಾಲ' ಇದು ನರಭಕ್ಷಕರ ಪ್ರಕ್ಷುಬ್ಧ ಕತೆ

'ಜಾಲ' ಇದು ನರಭಕ್ಷಕರ ಪ್ರಕ್ಷುಬ್ಧ ಕತೆ

By: *ವಿನಾಯಕರಾಮ್ ಕಲಗಾರು
Subscribe to Filmibeat Kannada

ಒಂದು ಸಸ್ಪೆನ್ಸ್ ಥ್ರಿಲ್ಲರ್ ಕತೆಯನ್ನು ಹೀಗೂ ತೋರಿಸಬಹುದಾ?ಕೆಲವರು ಕಾಡಿಗೆ ಹೋಗುತ್ತಾರೆ. ಹೋಗ್ತಾ ಹೋಗ್ತಾ ಕಾನನದಲ್ಲಿ ಮಾಯವಾಗುತ್ತಾರೆ. ಎಲ್ಲಿಗೆ ಹೋದರು? ಏನಾದರು? ಆ ರಹಸ್ಯ ಬೇಸಲು ಹೋದವರು ಎಲ್ಲಿ ಮರೆಯಾದರು? ಈ ಎಲ್ಲ ಪ್ರಶ್ನೆಗೆ ಉತ್ತರ ಹಾಗೂ ಪ್ರಶ್ನೆ ಜಾಲ ಚಿತ್ರ!

ಇದು ನರಭಕ್ಷಕರ ಪ್ರಕ್ಷುಬ್ಧ ಕತೆ. ಸಾಯುವವರ ಸಾವಯವ ಚಿತ್ರಕತೆ. ನಿರ್ದೇಶಕ ನಾಗನಾಥ ಜೋಶಿ ಒಂದು ವಿಚಿತ್ರ ವ್ಯಥೆಯನ್ನು ಭಯಾನಕ ರೀತಿಯಲ್ಲಿ ಚಿತ್ರಿಸಿದ್ದಾರೆ. ಹತ್ತಾರು ಹುಡುಗಿಯರು, ಜತೆಗೆ ಹುಡುಗರು, ಒಂದಷ್ಟು ರೊಮ್ಯಾನ್ಸ್, ನಿಮಾನ್ಸ್, ಪಡ್ಡೆಗಳಿಗೆ ಎಂಜಾಯ್ ಮಾಡಲು ಮತ್ತೊಂದು ಚಾನ್ಸ್. ಕತೆಯ ನಿರೂಪಣೆಗೆ ಬಳಸಿರುವ ಲೊಕೇಶನ್ ಚೆನ್ನಾಗಿದೆ. ಆದರೆ ಅದನ್ನು ಕ್ಯಾಮೆರಾ ಕಣ್ಣಲ್ಲಿ ಹಿಡಿದಿಡಲು ನಿರ್ದೇಶಕರು ಪರ ಪರ ಪರದಾಡಿದ್ದಾರೆ.

ಒಟ್ಟಾರೆ ಇಡೀ ಚಿತ್ರವನ್ನು ಕಾಮಿಡಿ ರೂಪದಲ್ಲಿ ನೋಡಿದರೆ ಪ್ರೇಕ್ಷಕರು ಬಚಾವ್. ಹೊಸಬರೇ ಹೆಚ್ಚಿರುವ ಜಾಲದಲ್ಲಿ ಪ್ರತೀ ದೃಶ್ಯವೂ ಹಾಸ್ಯದ ಜಲಧಾರೆ. ವಿಚಿತ್ರ ಹಾಗೂ ವಿನೋದದ ಅಮೃತಧಾರೆ. ಜೋಶಿ ಆಯ್ಕೆ ಮಾಡಿಕೊಂಡ ಕತೆಯ ತಿರುಳು ಇಷ್ಟವಾಗುತ್ತದೆ. ಸಂಭಾಷಣೆ ಸಾಂಗವಾಗಿ ಸಾಗುತ್ತದೆ. ನೋಡ್ತಾ ನೋಡ್ತಾ ಕಳೆದದ್ದೆಲ್ಲಿ, ಕಳೆದುಕೊಂಡಿದ್ದೆಲ್ಲಿ ಎನ್ನುವುದು ನಿಮ್ಮ ತುರ್ತು ಅವಗಾಹನೆಗೆ!

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada