»   » ಚಿತ್ರವಿಮರ್ಶೆ: ಹೂ...ಪ್ರೀತಿಗೆ ಹೊಸ ಅರ್ಥ

ಚಿತ್ರವಿಮರ್ಶೆ: ಹೂ...ಪ್ರೀತಿಗೆ ಹೊಸ ಅರ್ಥ

By: * ದೇವಶೆಟ್ಟಿ ಮಹೇಶ್
Subscribe to Filmibeat Kannada

'ನೀನ್ ಯಾಕೇ ನನ್ ತಾಯಿ ಆಗ್ಲಿಲ್ಲಾ? ನಿನ್ನ ನಿನ್ ಅಪ್ಪನ ಋಣ ಹೇಗೇ ತೀರಿಸ್ಲಿ?' ರವಿಚಂದ್ರನ್ ಹೀಗೆ ಹೇಳುತ್ತಿದ್ದರೆ ಮೀರಾ ಜಾಸ್ಮಿನ್ ಕಣ್ಣಲ್ಲಿ ಗಳನೆ ಗಳಗಳನೆ... ರವಿಚಂದ್ರನ್ ಚಿತ್ರಗಳೇ ಹಾಗೆ. ಅಲ್ಲಿ ಪ್ರೀತಿಗೆ ಹೊಸ ಅರ್ಥ ಕೊಡಲಾಗಿರುತ್ತದೆ.

ಮೊನ್ನೆಯವರೆಗೂ ರವಿ ಪ್ರೀತಿಯ ಬಗ್ಗೆ ಹೇಳಿದ್ದರೂ ನಿನ್ನೆ ಹಾಗೂ ಇಂದು ಹೇಳುವುದರಲ್ಲಿ ಭಿನ್ನತೆ ಇರುತ್ತದೆ. ಅದು ರವಿ ಸಿನಿಮಾ ವಿಶೇಷತೆ. ಇದು ತೆಲುಗಿನ ವಸಂತಂ ಚಿತ್ರದ ರಿಮೇಕ್. ಅಲ್ಲಿಂದ ಇಲ್ಲಿಗೆ ಇಳಿಸುವಾಗ ಒಂದಷ್ಟು ನಮ್ಮತನ ಸೇರಿಕೊಂಡಿದೆ. ಜತೆಗೆ ರವಿತನ, ಅದ್ದೂರಿತನ, ಪ್ರೀತಿ-ಪ್ರೇಮ-ಬದುಕು-ಕನಸು-ನೆನಪು-ಇತ್ಯಾದಿ.

ನಮಿತಾ ಬಂದಮೇಲೆ ಕತೆ ಚುರುಕಾಗುತ್ತದೆ. ಮೀರಾ ಎಂದಿನಂತೆ ಸ್ಪಷ್ಟವಾಗಿ ನಟಿಸಿದ್ದಾರೆ. 'ಅಹಂ ಡ್ರಮ್ಮಾಸ್ಮಿ' ನಮಿತಾ ಹಾಸಿಗೆ ಇರುವುದಕ್ಕಿಂತ ಹೆಚ್ಚು ಕಾಲು ಚಾಚಿದ್ದಾರೆ! ಪವಿತ್ರಾ ಲೋಕೇಶ್ ನಟನೆ ಒಂದು ಹಂತ ದಾಟಿದ ನಂತರ ಅತಿರೇಕ. ಶಂಕರ್ ಅಶ್ವತ್ಥ್ ಅಸಹಾಯಕ ಅಪ್ಪನ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ.

ಬುಲೆಟ್ ಪ್ರಕಾಶ್, ಶರಣ್ ಕಾಮಿಡಿ ಪರವಾಗಿಲ್ಲ. ಪ್ರಕಾಶ್ ರೈ ನಟನೆ ಸೂಪರ್. ವಿ.ಹರಿಕೃಷ್ಣ ಸಂಗೀತದಲ್ಲಿ ವಿಶೇಷತೆ ಇಲ್ಲ. ಛಾಯಾಗ್ರಹಣದಲ್ಲಿ ಸಾಂಕೇತಿಕವಾಗಿ ಕಪ್ಪು ಬಿಳುಪು ಬಣ್ಣ ಬಳಸಿರುವುದು ನಿಜವಾದ ರವಿ ಸ್ಟೈಲ್.

ಇಡೀ ಮನೆಯನ್ನು ಹಸೆ ಚಿತ್ತಾರದ ಮೂಲಕ ಸಿಂಗರಿಸುವ ಮೂಲಕ ದೇಸೀ ಸೊಗಡಿಗೆ ಮತ್ತಷ್ಟು ಬಣ್ಣ ಬಳಿಯಲಾಗಿದೆ. ಕೊನೆಯ 15 ನಿಮಿಷ ನಿಜವಾದ ರವಿಚಂದ್ರನ್ ಸಿನಿಮಾ ನೋಡಿದ ಅನುಭವವಾಗುತ್ತದೆ. ಹಾಡಿನ ಹಂಗಾಮ ಹಾಗೂ ವಿಶೇಷ ಸೆಟ್ ಬಳಕೆ ಅದ್ಭುತವಾಗಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada