»   »  ವಿಮರ್ಶೆ:ಹಾಡಿನ ಹಂಗಾಮದ ಪರಿಚಯ

ವಿಮರ್ಶೆ:ಹಾಡಿನ ಹಂಗಾಮದ ಪರಿಚಯ

By: *ವಿನಾಯಕರಾಮ್ ಕಲಗಾರು
Subscribe to Filmibeat Kannada

ನಡೆದಾಡುವಾ ಕಾಮನ ಬಿಲ್ಲು.... ಉಸಿರಾಡುವಾ ಬೊಂಬೆಯು ಇವಳು... ಸಿಗಲಾರಳು ಹೋಲಿಕೆಗಿವಳು... ಹೀಗೆ ಪರದೆ ಮೇಲೆ ಆ ಹಾಡು ಓಡುತ್ತಿದ್ದರೆ ಜನ ಸಿಳ್ಳೆಯ ಪಟಾಕಿ ಸಿಡಿಸುತ್ತಾರೆ. ಅದು ಮುಗಿದ ನಂತರ ಮತ್ತೆ ಬರುತ್ತದೆ... ಎದೆಯಲ್ಲಿ ಕನಸು ನೂರು ಜಿಗಿ ಜಿಗಿ ಜಿಗಿದು... ಇಡೀ ಚಿತ್ರ ಹಾಡಿನ ಹಂಗಾಮ. ಸಾಹಿತ್ಯದ ಸರಿಗಮ. ಕವಿರಾಜ್ ಇಲ್ಲಿ ಮಹಾರಾಜ್. ಜಯಂತ್ ಕಾಯ್ಕಿಣಿ ಮಹಾಮಂತ್ರಿ. ಸಂಗೀತ ನಿರ್ದೇಶಕ ಜೆಸ್ಸಿ ಗಿಫ್ಟ್ ದಳಪತಿ, ಕ್ಯಾಮೆರಾಮನ್ ಪಿಕೆಎಚ್ ದಾಸ್ ದಂಡ ನಾಯಕ ಇದ್ದಹಾಗೆ. ನೃತ್ಯ ಸಂಯೋಜನೆ ನೂತನ ಭಾವದ ಆವರಣ... ಇಡೀ ಸಿನಿಮಾದಲ್ಲಿ ಹಾಡುಗಳು ಬರು ವುದು ಹೆಚ್ಚೆಂದರೆ 20 ನಿಮಿಷ. ಉಳಿದ ಎರಡು ತಾಸನ್ನು ಪ್ರೇಕ್ಷಕ ನಿದ್ರೆ ಮಾಡಿ ಕಳೆಯ ಬೇಕಾ?

ಮೊದಲಾರ್ಧದಲ್ಲಿ ತಕ್ಕ ಮಟ್ಟಿಗೆ ಧಮ್ ಇದೆ. ಹೋಗ್ತಾ ಹೋಗ್ತಾ ನಿದಿರೆ ಬಂದರೇ ಏನಂತೀ.. ನಾಯಕ ತರುಣ್ ಮುದ್ದಾಗಿ ಕಾಣು ತ್ತಾರೆ. ನಿಂತ ನೀರನ್ನು ಕುಡಿಯೋದು ಕಷ್ಟ, ಹರಿವ ನೀರನ್ನು ಹಿಡಿಯೋದು ಕಷ್ಟ. ತರುಣ್‌ಗೆ ಇದು ಅರ್ಥವಾದರೆ.... ರೇಖಾ ಎಂದಿನಂತೆ ಚೆನ್ನಾಗಿ ಕಾಣುತ್ತಾಳೆ. ಆದರೆ ಗುಂಗುರು ಹೇರ್‌ಸ್ಟೈಲ್ ಮಾತ್ರ ಚಲುವಿನ ಚಿತ್ತಾರ'ದ ಕ್ಲೈಮ್ಯಾಕ್ಸ್‌ನಲ್ಲಿ ಗಣೇಶ್ ಮ್ಯಾಡಿ'ದ ಪಾತ್ರವನ್ನು ನೆನಪಿಸುತ್ತದೆ. ಅವಿನಾಶ್ ಅಣ್ಣಾ... ಅಪ್ಪಾ... ಎಂದು ಗಮನ ಸೆಳೆಯುತ್ತಾರೆ. ಶೋಭರಾಜ್ ಮಾತುಮಾತಿಗೆ ನೋಡ್ ರಾಜಾ, ಹಾಗೆಲ್ಲಾ ಮಾಡ್ಬೇಡಾ ರಾಜಾ...' ಎನ್ನುತ್ತಾ ಕಚಕುಳಿ ಇಟ್ಟು ಒಂಬತ್ತು' ತೋಳವನ್ನು ಹಳ್ಳಕ್ಕೆ ತಳ್ಳುತ್ತಾರೆ.

ಕಾಶಿ, ಮಾ. ಆನಂದ್, ಭಾರ್ಗವಿ ನಾರಾಯಣ್, ಸುಧಾ ಬೆಳವಾಡಿ ಎಲ್ಲರೂ ನೀಟಾಗಿ ನೋಟ್ ಆಗುತ್ತಾರೆ. ಒಟ್ಟಾರೆ ಒಂದಷ್ಟು ಹಾಡುಗಳು ಕೇಳುತ್ತಾ ನೋಡಬೇಕೆನಿಸುತ್ತವೆ. ಸಂಗೀತ
ವೈಭವದ ಜತೆಯಲ್ಲಿ ಕತೆ -ಚಿತ್ರಕತೆಯಲ್ಲಿ ಧಮ್ ಇದ್ದಿದ್ದರೆ ಪರಿಚಯದ ಪರಿಯೇ ಬೇರೆ ಇರುತ್ತಿತ್ತು. ಆದರೆ ಅದು ಹಾಗಾಗಿಲ್ಲ ಎನ್ನುವುದು ಅಸಲೀ ವಿಷಯ!

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada