»   » ಚಿತ್ರವಿಮರ್ಶೆ: ಪ್ರೀತಿಯಿಂದ ರಮೇಶ್

ಚಿತ್ರವಿಮರ್ಶೆ: ಪ್ರೀತಿಯಿಂದ ರಮೇಶ್

By: *ವಿನಾಯಕ ರಾಮ್
Subscribe to Filmibeat Kannada

ಜನಕ್ಕೆ ಕಂಪ್ಯೂಟರ್ ಅಂದ್ರೆ ಗೊತ್ತು. ಆದರೆ, ಒಂದು ಇ-ಮೇಲ್ ಸಂದೇಶ ದಲ್ಲಿ ಗೆಳೆತನವಾಗಿ, ಅಲ್ಲೆಲ್ಲೋ ಇರುವ ಅವನನ್ನು ಇವಳು ಲವ್ ಮಾಡುತ್ತಾಳೆ ಎನ್ನುವುದು ಹೊಸ ವಿಷಯ. ಕೆಲವೇ ಮಂದಿಗೆ ಇಂಟರ್ ನೆಟ್ ಚಾಟಿಂಗ್ ಬಗ್ಗೆ ಮಾಹಿತಿಯಿದೆ. ಹಳ್ಳಿ ಮಂದಿಗೆ ಆ ಬಗ್ಗೆ ಹೆಚ್ಚು ಗೊತ್ತಿಲ್ಲ. ನಿರ್ದೇಶಕ ಗುಣಶೇಖರ್ ಆ ಮಟ್ಟಿಗೆ ಯಶಸ್ವಿಯಾಗಿದ್ದಾರೆ.

ಆ ಕಡೆ ಒಬ್ಬ -ಹಲೋ ಸ್ನೇಹಾ... ಎಂದು ಸಂದೇಶ ರವಾನಿಸುತ್ತಾನೆ. ಈ ಕಡೆ ಒಬ್ಬಾಕೆ -ಹಾಯ್ ರಮೇಶ್... ಎಂದು ಉತ್ತರಿಸುತ್ತಾಳೆ. ಅದು ಹೋಗುತ್ತಾ ಹೋಗುತ್ತಾ ಪ್ರಶ್ನೆಯನ್ನೇ ಪ್ರಶ್ನಿಸುವ ಉತ್ತರವಾಗುತ್ತದೆ. ಅಲ್ಲಿಗೆ ಪ್ರೀತಿ ಯಿಂದ' ಬಂದ ಪ್ರೇಕ್ಷಕ ಸುಸ್ತಾಗಿ, ಗೊರನೆ ಗೊರಗೊರನೆ... ಇಲ್ಲಿ ಎಲ್ಲ ಸರಿ ಇಲ್ಲ ಎಂದಲ್ಲ ; ಸಂಭಾಷಣೆ ಒಂದು ಹಂತದ ವರೆಗೆ ಚೂಟಿಯಾಗಿದೆ. ಎಲ್ಲವನ್ನೂ ನಗುವಲ್ಲೇ ಗೆಲ್ಲಬಲ್ಲ ರಮೇಶ್ ಅರವಿಂದ್ ಇದ್ದಾರೆ.

ದೂರದಿಂದ ನಡೆದುಬರುತ್ತಿದ್ದರೆ ಥೇಟ್ ಪುತ್ಥಳಿ ಬೊಂಬೆಯಂತೆ ಕಾಣುವ ರಮಣೀತು ಚೌಧರಿ ಔರೆ. 'ಕೋಲು ಡೆ'ಜಂಗಮ ದೇವರ ಪ್ರೀತಿಗಷ್ಟೇ ಪಾತ್ರವಾಗಿರುವ ಹಾಗೇ ಸುಮ್ಮನೆ' ಕಿರಣ್ ಕಾಗೆ ಹಾರಿಸುವ ದೃಶ್ಯಗಳಿವೆ. ಒಂದಷ್ಟು ಮಾತು-ಕತೆ-ಕವನ-ಕಾವ್ಯ-ಕವಲು-ಕಾರಂಜಿ... ಒಟ್ಟಾರೆ ಇಡೀ ಚಿಂದಿ-ಚಿತ್ರಾನ್ನ!

ರಮೇಶ್ ಎಂದಿನಂತೆ ಮನಸ್ಸಿಗೆ ತಟ್ಟುವಂತೆ ನಟಿಸಿದ್ದಾರೆ. ರಮೇಶ್‌ಜೀ... ತಮ್ಮ ಈ ಸೌಂದರ್ಯದ ಗುಟ್ಟೇನು?! ರಮಣೀತು ಚೌಧರಿ ಅದೇಕೆ ಅಷ್ಟೊಂದು ಬಣ್ಣ ಬಳಿದುಕೊಳ್ಳುತ್ತಾರೋ ಗೊತ್ತಿಲ್ಲ. ನಟನೆಯಲ್ಲಿ ಹಿಂದಿನಿಗಿಂತ ಬದಲಾವಣೆ ಕಾಣುತ್ತದೆ. ಕಿರಣ್ ನಿಜ್ವಾಗ್ಲೂ ಅದ್ಭುತ ಪೋಷಕ ನಟ... ಅಕಟಕಟಾ... ಸಂಗೀತ ಪರವಾಗಿಲ್ಲ. ಛಾಯಾಗ್ರಹಣ ಕೆಲವು ಕಡೆ ಮಬ್ಬು ಉಬ್ಬು ತಬ್ಬು. ದೃಶ್ಯಜೋಡಣೆ ಜಾಳು ಜಾಳು. ನಿರ್ಮಾಪಕರು ಹಣ ಹೂಡಿಕೆಯಲ್ಲಿ ಎಲ್ಲಿಯೂ ರಾಜಿಯಾಗಿಲ್ಲ. ನಿರ್ದೇಶಕ ಗುಣಕುಮಾರ್ ಅದನ್ನು ಇನ್ನಷ್ಟು ವ್ಯವಸ್ಥಿತ ರೀತಿಯಲ್ಲಿ ಬಳಸಿಕೊಳ್ಳಬಹುದಿತ್ತು.

ಮಿಸ್ಟರ್ ಡೈರೆಕ್ಟ್ರೇ-ಕತೆಯ ಎಳೆಯಷ್ಟೇ ಚೆನ್ನಾಗಿದ್ದರೆ ಸಾಲದು. ಬೆಳೆಯೂ ಇರಬೇಕು. ಪ್ರೇಕ್ಷಕರ ಮೈಂಡು ಇಂದು-ಹೊಸಾ ಗಾನಾ ಬಜಾನಾ... ಎನ್ನುತ್ತಿದೆ. ನಿಮ್ಮ ತಲೆ-ಹಳೇ ಪ್ರೇಮ ಪುರಾಣಾ... ಎಂದು ಲಗಾಟಿ ಹಾಕುತ್ತಿದೆ. ಆದಷ್ಟು ನಿರ್ಮಾಪಕರನ್ನು ಉಳಿಸಿ, ರಮೇಶ್ ಅರವಿಂದ್ ಅಂಥ ಮೇರು ನಟರ ಅಭಿನಯವನ್ನು ಬಳಸಿ ಕೊಳ್ಳಿ ಎನ್ನುತ್ತಾ... ಪ್ರೀತಿಯಿಂದ...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada