twitter
    For Quick Alerts
    ALLOW NOTIFICATIONS  
    For Daily Alerts

    ಕೃಷ್ಣನ್ ಮ್ಯಾರೇಜ್ ಸ್ಟೋರಿ ಲೀಲಾ ವಿನೋದ ವಿಲಾಸ

    By * ಉದಯರವಿ
    |

    ಹಲವಾರು ಕಾರಣಗಳಿಗಾಗಿ ಕೃಷ್ಣನ್ ಮ್ಯಾರೇಜ್ ಸ್ಟೋರಿ ಕುತೂಹಲ ಕೆರಳಿಸಿತ್ತು. ಕೇಳಲು ಚಿತ್ತಾಕರ್ಷಕವಾಗಿರುವ ಚಿತ್ರದ ಹಾಡುಗಳು, ಕೃಷ್ಣನ್ ಲವ್ ಸ್ಟೋರಿಗೂ ಇದಕ್ಕೂ ಏನು ಸಂಬಂಧ ಎಂಬ ಪ್ರಶ್ನೆ. ಇದೆಲ್ಲಕ್ಕಿಂತ ಹೆಚ್ಚಾಗಿ ಅಜಯ್ ರಾವ್ ಮತ್ತು ನಿಧಿ ಸುಬ್ಬಯ್ಯ ಬೊಂಬಾಟ್ ಜೋಡಿ ಚಿತ್ರವನ್ನು ನೋಡುವಂತೆ ಮಾಡಿತ್ತು.

    ಈ ಎಲ್ಲ ನಿರೀಕ್ಷೆಗಳನ್ನು ಕೃಷ್ಣನ್ ಮ್ಯಾರೇಜ್ ಸ್ಟೋರಿ ಶೇಕಡ 75ರಷ್ಟು ಈಡೇರಿಸಿದೆ. ಇನ್ನು ಶೇಕಡ 25ರಷ್ಟ ಹುಳುಕುಗಳನ್ನು ಪ್ರೇಕ್ಷಕರು ಹೊಟ್ಟೆಗೆ ಹಾಕಿಕೊಂಡರೆ ಉದಾರ ಮನಸ್ಸಿನಿಂದ ಕೃಷ್ಣನ್ ಮ್ಯಾರೇಜಿಗೆ ಹೋಗಿಬರಬಹುದು. ಚಿತ್ರದ ಕತೆ ಬಗ್ಗೆ ಎರಡು ಸಾಲಲ್ಲಿ ಹೇಳುವುದಾದರೆ...ರಾಧೆಗಾಗಿ ಕೃಷ್ಣನ ಹುಡುಕಾಟ.

    ಕೃಷ್ಣ (ಅಜಯ್ ರಾವ್) ಅವಿಭಕ್ತ ಕುಟುಂಬವೊಂದರ ಕುಡಿ. ತಾನೇ ತನ್ನ ಲೈಫ್ ಪಾಟ್ನರ್ ಹುಡುಕಲು ಮುಂದಾಗುತ್ತಾನೆ. ಇದಕ್ಕಾಗಿ ಮನೆ ಬಿಟ್ಟು ಅಜ್ಜಿ ಊರಿಗೆ ಬರುತ್ತಾನೆ. ಅಲ್ಲಿ ಟೆಕ್ಕಿ(ಣಿ) ಖುಷಿ (ನಿಧಿ ಸುಬ್ಬಯ್ಯ) ಕಣ್ಣಿಗೆ ಬೀಳುತ್ತಾಳೆ. ತನಗೆ ಸಿಕ್ಕಿದ ಹುಡುಗಿಯ ಬಗ್ಗೆ ಮನೆಯವರಿಗೂ ತಿಳಿಸುತ್ತಾನೆ.

    ಚಿತ್ರದ ನಿರ್ದೇಶಕ ನೂತನ್ ಉಮೇಶ್ ಒಂಥರಾ ವಿನೂತನವಾಗಿಯೇ ಇಬ್ಬರ ಭೇಟಿಯನ್ನು ಹೆಣೆದಿದ್ದಾರೆ. ಕತೆ ಕೇಳುತ್ತಿದ್ದರೆ ಇಷ್ಟೇನಾ ಎನ್ನುವಂತಿದ್ದರೂ ನೂತನ್ ಅವರು ತನ್ನದೇ ಆದ ಸ್ಪರ್ಶ ನೀಡುವ ಮೂಲಕ ಚಿತ್ರ ಲವಲವಿಕೆಯಿಂದ ಸಾಗುತ್ತದೆ. ಕಡೆಗೆ ಕೃಷ್ಣ ಮ್ಯಾರೇಜ್ ಆಗ್ತಾನಾ ಇಲ್ಲವೆ ಎಂಬುದನ್ನು ನೀವು ಚಿತ್ರ ನೋಡಿಯೇ ತಿಳಿದುಕೊಂಡರೆ ಚೆಂದ.

    ಪ್ರತಿ ಸನ್ನಿವೇಶವನ್ನು ಬ್ಯೂಟಿಫುಲ್ ಆಗಿ ತೋರಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ಆದರೆ ಚಿತ್ರದ ಮೊದಲರ್ಧ ಅರುವತ್ತು ಕಿ.ಮೀ ವೇಗದಲ್ಲಿ ಸಾಗಿದರೆ. ದ್ವಿತೀಯಾರ್ಧ ನಟರಾಜ ಸೈಕಲ್‌ನಂತಾಗಿದೆ. ಮೆಗಾ ಧಾರಾವಾಹಿಯಂತೆ ಹಿಗ್ಗಿದಷ್ಟು ಜಗ್ಗಿದ್ದಾರೆ ನಿರ್ದೇಶಕರು.

    ಅಜಯ್ ರಾವ್ ಡಿಸ್ಟಿಂಕ್ಷನ್‌ನಲ್ಲಿ ಪಾಸಾಗಿದ್ದಾರೆ. ಇನ್ನು ಚಿತ್ರದ ನಾಯಕಿ ನಿಧಿ ಸುಬ್ಬಯ್ಯಗೆ ಹೇಳಿ ಮಾಡಿಸಿದ ಪಾತ್ರ ಇದು. ಚಿತ್ರದ ಉಳಿದ ಪಾತ್ರಧಾರಿಗಳಾದ ವಿನಯಾಪ್ರಸಾದ್, ಜೈ ಜಗದೀಶ್, ಭಾರ್ಗವಿ ನಾರಾಯಣ್, ಸಂಗೀತಾ ಮುಂತಾದವರೂ ಅಷ್ಟೇ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.

    ಅಲ್ಲಲ್ಲಿ ವಾಯ್ಸ್ ಡಬ್ಬಿಂಗ್ ನಿರಾಸೆ ಮೂಡಿಸುತ್ತದೆ. ಕ್ಲೈಮ್ಯಾಕ್ಸ್ ಸನ್ನಿವೇಶದಲ್ಲಂತೂ ನಿಧಿ ಸುಬ್ಬಯ್ಯ ವಾಯ್ಸ್ ಡಬ್ಬಿಂಗ್ ತೀರಾ ಕಳಪೆಯಾಗಿದೆ. ಈ ತಾಂತ್ರಿಕ ಸಮಸ್ಯೆಗಳನ್ನು ನಿರ್ದೇಶಕರು ಗಮನಿಸಿದ್ದರೆ ಚಿತ್ರವನ್ನು ಮತ್ತಷ್ಟು ಸೊಗಸಾಗಿ ತೆರೆಗೆ ತರಬಹುದಿತ್ತು.

    ಶೇಖರ್ ಚಂದ್ರು ಅವರ ಛಾಯಾಗ್ರಹಣ ಕಣ್ಣಿಗೆ ಹಬ್ಬ, ಮನಸ್ಸಿಗೆ ಕೂಲ್ ಕೂಲ್. ಚಿತ್ರದ ಪ್ರಮುಖ ಹೈಲೈಟ್ ಹಾಡುಗಳು. ಕೃಷ್ಣನ್ ಲವ್ ಸ್ಟೋರಿಯಲ್ಲಿ ಸಕ್ಸಸ್ ಆದಂತೆ ಶ್ರೀಧರ್ ಸಂಭ್ರಮ್ ಅವರ ಮೆಲೋಡಿ ಇಲ್ಲೂ ಕಿವಿಗೆ ಇಂಪಾಗಿದೆ. ವಾಯ್ಸ್ ಡಬ್ಬಿಂಗ್‌‍ ಕಡೆಗೆ ಸ್ವಲ್ಪ ಕಿವಿ, ದ್ವಿತೀಯಾರ್ಧದ ಕಡೆಗೆ ಒಂಚೂರು ಕಣ್ಣು ಹಾಯಿಸಿದ್ದಿದ್ದರೆ ಶೇಕಡ 100 ಅಂಕಗಳಲ್ಲಿ ಕೃಷ್ಣ ಪಾಸಾಗುತ್ತಿದ್ದ.

    English summary
    Here is the Kannada movie Krishnan Marriage Story review. The eligible bachelor in the family is to wed and the story revolves around his 'perfect' bride. Ajai has done a good job. Shekar Chandru camera gives a grand feel and looks very colorful in every scene.
    Saturday, July 16, 2011, 16:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X