twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರ ವಿಮರ್ಶೆ: ಮತ್ತೆ ಬನ್ನಿ ಪ್ರೀತ್ಸೋಣ ಒಮ್ಮೆ ನೋಡಿ ಬನ್ನಿ

    By * ಉದಯರವಿ
    |

    ಸಾಕಷ್ಟು ಸಮಯದ ಬಳಿಕ ರೊಮ್ಯಾಂಟಿಕ್ ಹೀರೋ ಪ್ರೇಮ್ 'ಐ ಯಾಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ' ಎಂದು ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಈ ಬಾರಿಯೂ ಅವರು ಹೆಂಗೆಳೆಯರ ಮನಗೆಲ್ಲುವಲ್ಲಿ ಸೋತಿಲ್ಲ. ಕತೆ ಒಂಥರಾ ಡಿಫರೆಂಟ್ ಆಗಿದೆ. ಚಿತ್ರವೂ ಅಷ್ಟೆ ಅಚ್ಚುಕಟ್ಟಾಗಿ ಮೂಡಿಬಂದಿದೆ. ಇದು ಮತ್ತೆ ಮತ್ತೆ ನೋಡುವ ಚಿತ್ರವಲ್ಲದಿದ್ದರೂ ಒಮ್ಮೆ ನೋಡಿ ಆನಂದಿಸಲು ನಮ್ಮದೇನು ತಕರಾರಿಲ್ಲ.

    ಮೊದಲ ನೋಟದಲ್ಲೆ ಚೇತನಾರನ್ನು (ಕರೀಷ್ಮಾ ತನಾ) ಕಂಡು ಹಳ್ಳಕ್ಕೆ ಬೀಳುತ್ತಾನೆ ಶಾಮ್ (ಪ್ರೇಮ್). ಹುಡುಗಿಯ ಸಾಚಾತನ, ಚೆಂದುಳ್ಳಿ ಚೆಲುವು ನಮ್ಮ ಹುಡುಗ ಶಾಮ್‌ಗೆ ಸಖತ್ ಇಷ್ಟ ಆಗುತ್ತದೆ. ತಂದೆ ತಾಯಿಯನ್ನು ಒಪ್ಪಿಸಿ ಮದುವೆನೂ ಆಗ್ತಾನೆ. ಇದೆಲ್ಲಾ ಸಖತ್ ಸ್ಪೀಡ್ ಆಗಿ ನಡೆದು ಹೋಗುತ್ತದೆ.

    ಚೇತನಾಳೊಂದಿಗಿನ ಶಾಮ್ ಸಂಸಾರ ಹಾಲು ಜೇನಿನಂತೆ ಸಾಗುತ್ತಿರುತ್ತದೆ. ಆದರೆ ಹಾಲಿಗೆ ಹುಳಿ ಹಿಂಡುವ ಘಟನೆಯೊಂದು ನಡೆಯುವ ಮೂಲಕ ಕತೆ ಅಲ್ಲಿಂದ ಮಗ್ಗುಲು ಬದಲಿಸುತ್ತದೆ. ಶಾಮ್‌ಗೆ ಲಿಫ್ಟ್‌ನಲ್ಲಿ ಮೊಬೈಲ್‌ವೊಂದು ಸಿಗುತ್ತದೆ. ಕಳೆದುಕೊಂಡವರಿಗೆ ಮೊಬೈಲ್ ಹಿಂದಿರುಗಿಸಲು ಹೋಗುತ್ತಾನೆ. ಅಲ್ಲಿಂದ ಕತೆ ವಿಚಿತ್ರ ತಿರುವು ಪಡೆದುಕೊಳ್ಳುತ್ತದೆ.

    ಕೆಲವು ನಾಟಕೀಯ ಬೆಳವಣಿಗೆಗಳ ಬಳಿಕ ಪತ್ನಿ ಮೇಲೆ ಶಾಮ್‌ಗೆ ಅನುಮಾನ ಕಾಡುತ್ತದೆ. ಶಾಮ್ ಅಂದುಕೊಂಡಂತೆ ಚೇತನಾ ಆಗಿರುತ್ತಾರಾ? ಕೊನೆಗೆ ಏನಾಗುತ್ತದೆ ಎಂಬ ಕುತೂಹಲದಲ್ಲಿ ಕತೆ ಸಾಗುತ್ತದೆ. ಒಂದು ಹಂತದಲ್ಲಿ ಪ್ರೇಕ್ಷಕರ ಕುತೂಹಲ ಸೀಟಿನ ಅಂಚಿಗೆ ಬರುವಂತೆ ಮಾಡಿಬಿಡುತ್ತದೆ!

    ತಮ್ಮ ಮೊದಲ ನಿರ್ದೇಶನದಲ್ಲೆ ನಿರ್ದೇಶಕ ರವೀಂದ್ರ ಗೆದ್ದಿದ್ದಾರೆ. ಚಿತ್ರದ ಸೆಟ್‌ಗಳು, ಕಾಸ್ಟ್ಯೂಮ್ಸ್‌ಗೆ ಹಿಂದೆ ಮುಂದೆ ನೋಡದಂತೆ ದುಡ್ಡು ಸುರಿದಿರುವುದು ಎದ್ದು ಕಾಣುವ ಅಂಶ. ಕರಿಷ್ಮಾ ತನಾ ಕೂಡ ಇದು ತನ್ನ ಮೊದಲ ಚಿತ್ರ ಎಂಬುದು ಗಮನಕ್ಕೆ ಬಾರದಷ್ಟು ಸಲೀಸಾಗಿ ಅಭಿನಯಿಸಿದ್ದಾರೆ. ಪ್ರೇಮ್ ಕೂಡ ಅಷ್ಟೆ ಜಿದ್ದಿಗೆ ಬಿದ್ದಂತೆ ನಟಿಸಿದ್ದಾರೆ.

    ಚಿತ್ರದಲ್ಲಿ ಲಿಪ್ ಲಾಕ್ ಸೀನ್ ಇದೆಯಂತೆ, ಸಿಕ್ಕಾಪಟ್ಟೆ ಹಾಟ್ ಸೀನ್‌ಗಳಿವೆಯಂತೆ ಎಂಬ ಮಾತುಗಳು ಬಿಡುಗಡೆಗೂ ಮುನ್ನ ಕೇಳಿಬಂದಿದ್ದವು. ಆದರೆ ಆ ರೀತಿಯ ದೃಶ್ಯಗಳನ್ನು ನಿರೀಕ್ಷಿಸಿ ಹೊರಟರೆ ನಿರಾಸೆ ಕಟ್ಟಿಟ್ಟ ಬುತ್ತಿ. ಚಿತ್ರದಲ್ಲಿ ತಬಲಾ ನಾಣಿ ಅವರದು ಗಮನಾರ್ಹ ಪಾತ್ರ. ಆ ಪಾತ್ರಕ್ಕೆ ಸಂಪೂರ್ಣ ನ್ಯಾಯ ಸಲ್ಲಿಸಿದ್ದಾರೆ.

    ಚಿತ್ರದ ಮತ್ತೊಂದು ಪ್ರಮುಖ ಅಂಶ ಎಂದರೆ ಮಠ ಗುರುಪ್ರಸಾದ್ ಡೈಲಾಗ್ಸ್. ಚಿತ್ರದಲ್ಲಿ ಸಂಜನಾ ಪ್ರಮುಖ ಆಕರ್ಷಣೆಯಾಗಿ ನಿಲ್ಲುತ್ತಾರೆ. ಅನೂಪ್ ಸೀಳಿನ್ ಸಂಗೀತದ ಬಗ್ಗೆಯೂ ಕೆಮ್ಮುವಂತಿಲ್ಲ. ಇದೇ ಮಾತು ಅಶೋಕ್ ಕಶ್ಯಪ್ ಅವರ ಛಾಯಾಗ್ರಹಣಕ್ಕೂ ಅನ್ವಯಿಸುತ್ತದೆ. ಒಟ್ಟಾರೆಯಾಗಿ ನಮ್ಮ ಸಲಹೆ ಏನೆಂದರೆ ಒಮ್ಮೆ ಫ್ಯಾಮಿಲಿ ಸಮೇತ ಹೋಗಿ ನೋಡಿ ಬನ್ನಿ.

    English summary
    Here is the review of Kannada movie I'm Sorry Mathe Banni Preethsona. The story is interesting, filled with interesting twist and turns. Prem makes a good comeback with the film.The film's worth a one time watch.
    Monday, June 20, 2011, 12:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X