»   » ನಿರ್ದೋಷಿ : ಹಗಲಲ್ಲೇ ಡೇ ನೈಟ್ ಮ್ಯಾಚ್!

ನಿರ್ದೋಷಿ : ಹಗಲಲ್ಲೇ ಡೇ ನೈಟ್ ಮ್ಯಾಚ್!

By: * ವಿನಾಯಕರಾಮ್
Subscribe to Filmibeat Kannada

ಇಡೀ ಸಿನಿಮಾ ರಸಗುಲ್ಲಾ'ಮಯ... ಹತ್ತು ನಿಮಿಷಕ್ಕೊಮ್ಮೆ ಬರುವ ಹದಮಾಡಿದ ಹುಡುಗಿಯರು. ಗಲ್ಲ-ಕೆನ್ನೆ ತುಂಬಾ ನಕ್ಕು, ಮಾಯವಾಗುವ ಮಾಯಾಂಗನೆಯರು. ಮೈ' ನೇಮ್ ಈಸ್ ರಸಗುಲ್ಲಾ ಎನ್ನುವ ಲಲಲಲನಾಮಣಿಗಳು...

ಒಂದು ಭಾಷೆಯ ಚಿತ್ರವನ್ನು ಇನ್ನೊಂದು ಭಾಷೆಗೆ ಡಬ್ ಮಾಡುವಲ್ಲಿ ನಿಸ್ಸೀಮರಾಗಿರುವ ಗೋವರ್ಧನ್ ಈ ಚಿತ್ರದ ನಿರ್ದೋಶಿಕರು'. ಬೆಕ್ಕು' ಚಿತ್ರದುದ್ದಕ್ಕೂ ಕಣ್ಣು, ಕಿವಿ, ಮೂಗು, ಬಾಯಿ ಮುಚ್ಚಿಕೊಂಡೇ ಹಾಲು ಕುಡಿಯುತ್ತದೆ. ಹಾಲುಗಲ್ಲದ ಹುಡುಗಿಯರು ಥೈಯಾರ ಥೈಯ ಎನ್ನುತ್ತ ವೈಯಾರ ಮಾಡುತ್ತಾರೆ. ಪ್ರೇಕ್ಷಕ ನಿಜವಾದ ನಿರ್ದೋಶಿಯ ಹುಡುಕಾಟದಲ್ಲಿ ನಿರುದ್ದೇಶವಾಗಿ ನಶೆಗೆ ಜಾರುತ್ತಾರೆ.

ಇನ್ನೇನು ತೂಕಡಿಕೆಗೆ ತಲೆಬಾಗಬೇಕು; ಶ'ಕಲಕ ಕಿಲ' ಕಿಲ ಎನ್ನುತ್ತ ಬರುತ್ತಾರೆ ಮಾಯದಂಥ ಮೇದಿನಿಯರು... ನಿರ್ದೇಶಕರು ಚಿತ್ರದಲ್ಲಿ ಬರುವ ಸ್ತ್ರೀ ಪಾತ್ರಗಳಿಗೆ ಕಡಿಮೆ ಬಟ್ಟೆ ತೊಡಿಸುವ ಮೂಲಕ ಖರ್ಚು ಕಡಿಮೆ ಮಾಡಿದ್ದಾರೆ. ಎಲ್ಲರೂ ಅರೆ ಬರೆ ಬಟ್ಟೆಯಲ್ಲಿ ಪಡ್ಡೆ ಹುಡುಗರ ಬೈತಲೆ ಮೇಲೆ ಬರೆ ಇಡುತ್ತಾರೆ. ನಾಯಕ ಪಿಯುಷ್ ಇನ್ನೂ ಎಸ್ಸೆಸ್ಸೆಲ್ಸಿ ಹುಡುಗನ ಥರ ಆಡುತ್ತಾರೆ. ನಟನೆ ಬಗ್ಗೆ ನಯಾಪೈಸೆ ಗೊತ್ತಿಲ್ಲ. ಮಾತೆತ್ತಿದರೆ ಅಂಗಿ ಬಿಚ್ಚುತ್ತಾರೆ. ಮಾನಸಿಕ ರೋಗಿಯಂತೆ ಆರ್ಭಟಿಸುವಾಗ ಭಯ ಹುಟ್ಟಿಸುತ್ತಾರೆ. ದೂರದಿಂದ ನೋಡಿದರೆ ಥೇಟ್ ಅವತಾರ್ ಚಿತ್ರದ ನಾಯಕನಂತೆ ಕಾಣುತ್ತಾರೆ. ಹಿಂದಿ ನಟ ಕುಲಭೂಷಣ್ ವಿಜ್ಞಾನಿ ಪಾತ್ರಕ್ಕೆ ಒಗ್ಗಿಕೊಂಡಿದ್ದಾರೆ. ಆನಂದ್ ಹಾಸ್ಯಕ್ಕೆ ಆದಿಯಿಲ್ಲ ಅಂತ್ಯವಿಲ್ಲ!

ನಾಯಕಿಯರಾದ ರಿಚಾ, ಕಶೀಷ್ ಮೊದಲಾದವರು ಮೈ'ನಾ ಹಕ್ಕಿಯಂತೆ ಹಾರಾಡುತ್ತಾರೆ. ಕಡಿಮೆ ಮಾತು, ವಸ್ತ್ರವೇ ಅವರ ಅಸ್ತ್ರ. ಸಂಭಾಷಣೆಯಲ್ಲಿ ವಿಶೇಷತೆಯಿಲ್ಲ. ನಿರ್ದೇಶಕರು ಚಿತ್ರಕತೆಯಲ್ಲಿ ವೇಗ ಕಂಡುಕೊಂಡಿದ್ದಾರೆ. ಸಂಭಾಷಣೆ ಮಾಮೂಲಿ. ಛಾಯಾಗ್ರಹಣಕ್ಕೆ ಚುಂಬಕ' ಶಕ್ತಿಯಿದೆ! ಒಟ್ಟಾರೆ ಇಡೀ ಚಿತ್ರ ಜಡೆ-ಮೈ- ಸಂದ್ರ. ಕಣ್ಣಿಗೆ ಹಬ್ಬ. ಅಲ್ಲಲ್ಲಿ ಆರತಿ' ಬೆಳಗುತ್ತದೆ. ಸಿಕ್ಕವರಿಗೆ ಸೀರುಂಡೆ... ಹಗಲಲ್ಲೇ ಒಂಡೆ ಎಂಡ್ ನೈಟ್ ಮ್ಯಾಚ್ ತೋರಿಸುತ್ತಾರೆ ಏ'ಕಾಮಾದ್ವಿತೀಯ ಗೋವರ್ಧನ್!

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada