twitter
    For Quick Alerts
    ALLOW NOTIFICATIONS  
    For Daily Alerts

    Fourwalls Movie Review : ತಂದೆಯ ತ್ಯಾಗದ ಪ್ರತೀಕವೇ ಈ ಫೋರ್‌ವಾಲ್ಸ್!

    |

    ಸ್ಯಾಂಡಲ್ ವುಡ್‌ನಲ್ಲಿ ಇಂದು ಒಂದಲ್ಲಾ ಎರೆಡಲ್ಲಾ ಬರೋಬ್ಬರಿ ಆರು ಸಿನಿಮಾಗಳು ತೆರೆಕಂಡಿವೆ. ಅದರಲ್ಲಿ ಒಂದು ಫೋರ್ ವಾಲ್ಸ್. ಟೈಟಲ್ ಕೇಳಿದರೆನೇ ಏನಿರಬಹುದು ಸಿನಿಮಾ ಅಂತ ಅನ್ನಿಸುತ್ತೆ. ಸಿನಿಮಾ ನೋಡಿದಾಗಲೇ ಗೊತ್ತಾಗೋದು ಟೈಟಲ್‌ಗೂ ಸಿನಿಮಾಗೂ ಇರುವ ಕನೆಕ್ಷನ್. ಫೋರ್ ವಾಲ್ಸ್ ಸಿನಿಮಾ ಒಂದು ಸಂದೇಶವನ್ನು ಜನರಿಗೆ ಮುಟ್ಟಿಸುವ ನಿಟ್ಟಿನಲ್ಲಿ ತಯಾರಾದ ಚಿತ್ರ. ಕಮರ್ಷಿಯಲ್ ಸಿನಿಮಾಗಳ ನಡುವಲ್ಲಿ, ಹೊಡಿ ಬಡಿ ಕಾನ್ಸೆಪ್ಟ್ ಗಳ ಚಿತ್ರಗಳೇ ಹೆಚ್ಚೆಚ್ಚು ರಿಲೀಸ್ ಆಗುತ್ತಿರುವ ಈ ಸಮಯದಲ್ಲಿ ಫೋರ್ ವಾಲ್ಸ್ ಚಿತ್ರ ವಿಭಿನ್ನವಾಗಿ ನಿಲ್ಲುತ್ತೆ.

    Rating:
    2.5/5

    ಅಷ್ಟಕ್ಕೂ ಫೋರ್ ವಾಲ್ಸ್ ಸಿನಿಮಾ ಒಬ್ಬ ಅಪ್ಪ ತನ್ನ ಮಕ್ಕಳಿಗಾಗಿ ಹೇಗೆಲ್ಲಾ ಕಷ್ಟ ಪಡುತ್ತಾನೆ, ಹೆಂಡತಿಯ ಆಸರೆಯನ್ನು ಗಂಡ ಕಳೆದುಕೊಂಡಾಗ ಮಕ್ಕಳಿಗೆ ಅಪ್ಪನೇ ಸರ್ವಸ್ವ ಆಗಿರುತ್ತಾನೆ. ಚಿಕ್ಕ ಮಕ್ಕಳಿಂದ ಹಿಡಿದು, ಆ ಮಕ್ಕಳು ದೊಡ್ಡವರಾಗುವ ವರೆಗಿನ ಜವಾಬ್ದಾರಿಯನ್ನು ಅಪ್ಪ ಹೇಗೆಲ್ಲಾ ನಿಭಾಯಿಸುತ್ತಾನೆ, ಕಷ್ಟಗಳು ಎದುರಾದರೂ ಧೈರ್ಯ ಕುಂದದೆ ಹೇಗೆಲ್ಲ ತನ್ನ ಮಕ್ಕಳಿಗೆ ಬೆನ್ನೆಲುಬಾಗಿ ನಿಲ್ಲುತ್ತಾನೆ ಒಬ್ಬ ಅಪ್ಪ ಅನ್ನುವಂತದ್ದನ್ನು ತುಂಬಾ ಅಚ್ಚುಕಟ್ಟಾಗಿ ಈ ಚಿತ್ರದಲ್ಲಿ ತೋರಿಸಲಾಗಿದೆ.

    'One Cut Two Cut' Movie Review: ಏನೋ ಮಾಡಲು ಹೋಗಿ...! 'One Cut Two Cut' Movie Review: ಏನೋ ಮಾಡಲು ಹೋಗಿ...!

    ಇನ್ನು ಕಥೆ ವಿಚಾರಕ್ಕೆ ಬರೋದಾದರೇ ನಟ ಅಚ್ಯುತ್ ಕುಮಾರ್ ಈ ಸಿನಿಮಾದ ಪ್ರಮುಖ ಪಾತ್ರಧಾರಿ. ಶಂಕರ್ ಎಂಬ ಪಾತ್ರದಲ್ಲಿ ಎಲ್ಲರ ಗಮನ ಸೆಳೆಯುತ್ತಾರೆ. ಇನ್ನು ಹಿರಿಯ ನಟ ದತ್ತಣ್ಣ ಕೂಡ ಫೋರ್ ವಾಲ್ಸ್ ಸಿನಿಮಾದಲ್ಲಿ ಶಂಕರ್‌ನ ಮಾವನಾಗಿ ಒಂದು ಸಣ್ಣ ಪಾತ್ರವನ್ನು ನಿಭಾಯಿಸಿದ್ದಾರೆ. ಕಥೆಯಲ್ಲಿ ಶಂಕರ್ ತನ್ನಿಷ್ಟದ ಹುಡುಗಿಯನ್ನು ಮದುವೆ ಯಾಗಿ ಬೆಂಗಳೂರಿಗೆ ಆಗಮಿಸುತ್ತಾನೆ. ಬಂದು ಸಂಸಾರ ಚನ್ನಾಗಿ ನಡೆಯುತ್ತೆ. ಹೆಂಡತಿ ಪ್ರೆಗ್ನೆಂಟ್ ಆಗುತ್ತಾಳೆ. ಒಂದಲ್ಲಾ ಎರೆಡಲ್ಲಾ ಮೂವರು ಹೆಣ್ಣು ಮಕ್ಕಳು ಮತ್ತು ಒಂದು ಗಂಡು ಮಗು ಆಗುತ್ತೆ. ಕೊನೆಯ ಮಗುವಿನ ಹೆರಿಗೆ ಸಮಯದಲ್ಲಿ ಹೆಂಡತಿ ಸಾವನ್ನಪ್ಪುತ್ತಾಳೆ. ಅಲ್ಲಿಂದ ಮಕ್ಕಳ ಜವಾಬ್ದಾರಿ ಶಂಕರ್ ಹೆಗಲೇರುತ್ತೆ. ಅಪ್ಪನಾಗಿ ಶಂಕರ್ ಮಕ್ಕಳನ್ನು ಹೇಗೆ ಬೆಳೆಸುತ್ತಾನೆ , ಮುಂದೆ ಏನೇನು ಸಮಸ್ಯೆಗಳು ಎದುರಾಗುತ್ತೆ? ಸಮಸ್ಯೆ ಬಂದರೂ ಅದನ್ನು ಶಂಕರ್ ಹೇಗೆ ನಿಭಾಯಿಸುತ್ತಾನೆ ಅನ್ನೋದೆ ಚಿತ್ರದ ಒನ್ ಲೈನ್ ಸ್ಟೋರಿ .

    Achyuth Kumar Starerr Four Walls Movie Review
    ಈ ಸಿನಿಮಾದಲ್ಲಿ ಮಕ್ಕಳಿಗೆ ತಂದೆ ಯಾವತ್ತು ವಿಲನ್ ತರನೇ ಕಾಣಿಸುತ್ತಾರೆ. ತಂದೆ ಏನೇ ಮಾಡಿದರೂ ಮಕ್ಕಳಿಗೆ ಏನೂ ಮಾಡಿಲ್ಲ ಅನ್ನೋ ಭಾವನೆ ಹುಟ್ಟಿಕೊಳ್ಳುತ್ತದೆ. ತಂದೆ ಎಷ್ಟೇ ಕಷ್ಟ ಪಟ್ಟರೂ ಮಕ್ಕಳಿಗೆ ನನ್ನಪ್ಪ ಏನೂ ಮಾಡಿಲ್ಲ ಅನ್ನೋದು ಇರುತ್ತೆ. ಆಗ ತಂದೆಯನ್ನು ಕಳೆದುಕೊಂಡಾಗಲೇ ತಂದೆ ಏನೇನು ತ್ಯಾಗ ಮಾಡಿದ್ದಾನೆ, ಮಕ್ಕಳಿಗಾಗಿ ಇಷ್ಟೆಲ್ಲಾ ನೋವು ತಿಂದಿದ್ದಾರೆ ಅನ್ನೋದು ಗೊತ್ತಾಗುತ್ತೆ. ಅದರಂತೆಯೇ ಈ ಚಿತ್ರದಲ್ಲಿ ತಾಯಿ ಇಲ್ಲದ ಮಕ್ಕಳಿಗೆ ಒಬ್ಬ ತಂದೆ ಹೇಗೆಲ್ಲ ತ್ಯಾಗ ಬಲಿದಾನ ಮಾಡುತ್ತಾರೆ ಅನ್ನೋದನ್ನು ಅಚ್ಚು ಕಟ್ಟಾಗಿ ತೋರಿಸಲಾಗಿದೆ.

    ಇಂದು ಬಿಡುಗಡೆ ಆಗುತ್ತಿವೆ ಆರು ಕನ್ನಡ ಸಿನಿಮಾ: ಯಾವುದು? ಎಲ್ಲಿ?ಇಂದು ಬಿಡುಗಡೆ ಆಗುತ್ತಿವೆ ಆರು ಕನ್ನಡ ಸಿನಿಮಾ: ಯಾವುದು? ಎಲ್ಲಿ?

    ಸಿನಿಮಾ ಟೇಕ್ ಆಫ್ ಆಗಲು ಕೊಂಚ ಸಮಯ ಹಿಡಿಯುತ್ತೆ ಆದರೂ , ಸಿನಿಮಾ ನೋಡ್ತಾ ನೋಡ್ತಾ ಪ್ರೇಕ್ಷಕರನ್ನು ಹಿಡಿದಿಡುತ್ತೆ. ಆದರೇ ಕಥೆ ಕೊಂಚ ಲ್ಯಾಗ್ ಆಗುತ್ತಿದೆ ಅನ್ನೋದೊಂದು ಬಿಟ್ಟು , ಬೇರೆ ಯಾವ ಲೋಪದೋಷಗಳು ಸಿನಿಮಾದಲ್ಲಿ ಕಂಡುಬರುವುದಿಲ್ಲ. ಸ್ವಾರ್ಥದ ಪ್ರಪಂಚದಲ್ಲಿ ಮನುಷ್ಯ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಾನೆ ಅನ್ನೋದನ್ನ ಈ ಚಿತ್ರದಲ್ಲಿ ಸವಿವರವಾಗಿ ತೋರಿಸಲಾಗಿದೆ. ಈ ಸಿನಿಮಾದಲ್ಲಿ ಅಚ್ಯುತ್ ಅವರ ಮಕ್ಕಳಾಗಿ ಜಾನ್ವಿ ಜ್ಯೋತಿ, ರಚನಾ ದಶರಥ್‌, ಶ್ರೇಯಾ ಶೆಟ್ಟಿ ನಟಿಸಿದ್ದಾರೆ. ಭಾಸ್ಕರ್‌ ನೀನಾಸಂ, ದತ್ತಣ್ಣ, ಸುಜಯ್‌ ಶಾಸ್ತ್ರಿ ಸಹ ಪ್ರಮುಖ ಪಾತ್ರದಲ್ಲಿದ್ದಾರೆ.

    Achyuth Kumar Starerr Four Walls Movie Review

    ಫೋರ್ ವಾಲ್ಸ್ ಸಿನಿಮಾದ ಟೀಸರ್, ಸಾಂಗ್ಸ್ ನಿಂದ ನಿರೀಕ್ಷೆ ಹುಟ್ಟಿಸಿತ್ತು. ಇದೀಗ ಬಿಡುಗಡೆಯಾಗಿರುವ ಫೋರ್‌ವಾಲ್ಸ್ ಸಿನಿಮಾವನ್ನು ಎಸ್.ಎಸ್.ಸಜ್ಜನ್ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

    ಫೋರ್ ವಾಲ್ಸ್ ಸಿನಿಮಾಕ್ಕೆ ತೆಲುಗಿನ ರುದ್ರಮದೇವಿ, ಗರುಡವೇಗ ಸಿನಿಮಾಗಳಲ್ಲಿ ದುಡಿದ ಅನುಭವ ಇರುವ ವಿ.ಡಿ.ಆರ್ ಕ್ಯಾಮೆರಾ ವರ್ಕ್, ಆನಂದ ರಾಜಾವಿಕ್ರಮ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಎಸ್.ವಿ ಬ್ಯಾನರ್ ನಲ್ಲಿ ಟಿ.ವಿಶ್ವನಾಥ್ ನಾಯ್ಕ್ ನಿರ್ಮಾಣ ಮಾಡಿದ್ದಾರೆ. ಇಂದು ರಿಲೀಸ್ ಆಗಿರುವ ಸಿನಿಮಾ ಬೆಳ್ಳಿ ಪರದೆ ಮೇಲೆ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿ ಯಾಗಿದೆ.

    English summary
    Achyuth kumar starrer Four Walls movie released today. here is the Four Walls movie review.
    Friday, February 11, 2022, 16:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X