twitter
    For Quick Alerts
    ALLOW NOTIFICATIONS  
    For Daily Alerts

    ಬಡವ ರಾಸ್ಕಲ್‌ನ ಪಂಚಿಂಗ್ ಡೈಲಾಗ್‌ಗೆ ಪ್ರೇಕ್ಷಕರು ಫಿದಾ! ಸಿನಿಮಾದಲ್ಲಿದೆ ಕುಟುಂಬ ಮತ್ತು ಸ್ನೇಹಿತರ ಮಹತ್ವ

    |

    ಕನ್ನಡದಲ್ಲಿ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗುತ್ತಿವೆ. ಈ ವಾರ ಕೂಡ ಕನ್ನಡದ ಎರಡು ಸಿನಿಮಾಗಳು ತೆರೆಕಂಡಿದ್ದೂ ಒಳ್ಳೆ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಅದರಲ್ಲಿ ಒಂದು ಡಾಲಿ ಧನಂಜಯ್ ಅಭಿನಯದ 'ಬಡವ ರಾಸ್ಕಲ್' . ಈ ಸಿನಿಮಾ ಸೆಟ್ಟೇರಿದಾಗಿನಿಂದಲೂ ಬಾರಿ ನಿರೀಕ್ಷೆಯನ್ನು ಹುಟ್ಟಿಸಿತ್ತು. ಇದೀಗ ಸಿನಿಮಾ ರಿಲೀಸ್ ಆಗಿದ್ದು ಅಂದುಕೊಂಡಿದಕ್ಕಿಂತ ಹೆಚ್ಚಿನ ರೆಸ್ಪಾನ್ಸ್ ಸಿನಿಮಾಗೆ ಸಿಕ್ಕಿದೆ. ಬಡವ ರಾಸ್ಕಲ್ ಸಿನಿಮಾ ಡಾಲಿ ಧನಂಜಯ್ ಅವರ ಮೊದಲ ನಿರ್ಮಾಣದ ಚಿತ್ರ ಆಗಿರೋದರಿಂದ ಸಾಕಷ್ಟು ನಿರೀಕ್ಷೆ ಸಿನಿಮಾ ಮೇಲಿತ್ತು.

    ಹಾಗೇ ಚಿತ್ರದ ಟೀಸರ್, ಟ್ರೇಲರ್ ಮತ್ತು ಹಾಡುಗಳು ಕೂಡ ಸಿನಿಮಾ ಬಿಡುಗಡೆಗೂ ಮುನ್ನವೇ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿತ್ತು. ಚಿತ್ರತಂಡ ಕೂಡ ಚಿತ್ರದ ಬಗ್ಗೆ ಸಾಕಷ್ಟು ಪ್ರಚಾರವನ್ನು ಮಾಡಿತ್ತು.

    Rating:
    3.0/5

    ಅಂತೇಯೆ ಇವತ್ತು ಗಾಂಧಿನಗರದಲ್ಲಿ ರಿಲೀಸ್ ಆಗಿರುವ ಬಡವ ರಾಸ್ಕಲ್ ಜೋರಾಗಿಯೇ ಅಬ್ಬರಿಸಿದ್ದಾನೆ. ಸಿನಿಮಾದ ಕಥೆ, ಡೈಲಾಗ್, ಸ್ಕ್ರೀನ್ ಪ್ಲೇ, ಸಾಂಗ್ ಎಲ್ಲವೂ ಪ್ರೇಕ್ಷಕರನ್ನು ಹಿಡಿದಿಟ್ಟಿತ್ತು. ಹಾಗಿದ್ರೆ ಬಡವ ರಾಸ್ಕಲ್ ಸಿನಿಮಾದ ಪ್ಲಸ್ ಏನಾಗಿತ್ತು, ಮೈನಸ್ ಎಲ್ಲಿತ್ತು ಅಂತ ಮುಂದೆ ಓದಿ

    ಪ್ರೇಕ್ಷಕರೊಂದಿಗೆ ಸಿನಿಮಾ ನೋಡಿದ ಡಾಲಿ

    ಪ್ರೇಕ್ಷಕರೊಂದಿಗೆ ಸಿನಿಮಾ ನೋಡಿದ ಡಾಲಿ

    ಧನಂಜಯ್ ಶಂಕರ್ ರಾಜ್ ಅನ್ನುವ ಪಾತ್ರದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ಶಂಕರ್ ಒಬ್ಬ ಮಿಡಲ್ ಕ್ಲಾಸ್ ಫ್ಯಾಮಿಲಿಯಲ್ಲಿ ಬೆಳೆದಿರುವ ಹುಡುಗ. ಅಪ್ಪ ಅಮ್ಮನ ಪಾತ್ರದಲ್ಲಿ ರಂಗಾಯಣ ರಘು ಮತ್ತು ತಾರಾ ಜೋಡಿ ಮೋಡಿ ಮಾಡಿದ್ದಾರೆ. ಶಂಕರ್ ಎಂಬಿಎ ವ್ಯಾಸಂಗ ಮಾಡಿದ್ರು ಕೂಡ ಕೆಲಸಕ್ಕೆ ಸೇರಿರೋದಿಲ್ಲ. ಅಪ್ಪನ ಆಟೋವನ್ನು ಓಡಿಸುತ್ತ, ಇಂತದ್ದೆ ಮತ್ತಷ್ಟು ಆಟೋಗಳನ್ನು ಲೋನ್‌ ಮಾಡಿ ತೆಗೆದುಕೊಳ್ಳಬೇಕು ಹಾಗೂ ಅದರಿಂದ ತಾನು ಲೈರ್ಫ ಸೆಟಲ್ ಮಾಡಿಕೊಳ್ಳಬೇಕು ಎಂದು ಇರುವವರು ಶಂಕರ್. ಈ ಚಿತ್ರದಲ್ಲಿ ಧನಂಜಯ್ ನಟನೆ ಮತ್ತು ಪಾತ್ರ ತುಂಬ ನ್ಯಾಚುರಲ್ ಆಗಿ ಬಂದಿದ್ದು, ಎಲ್ಲೂ ಕೂಡ ಸಹಜತೆಯನ್ನು ಮೀರಿ ಸಿನಿಮಾ ಹೋಗಿಲ್ಲಾ.

    ಬಡವ ರಾಸ್ಕಲ್ ಕಥೆಯಲ್ಲಿದೆ ಸಿಂಪಲ್ ಸೂತ್ರ

    ಬಡವ ರಾಸ್ಕಲ್ ಕಥೆಯಲ್ಲಿದೆ ಸಿಂಪಲ್ ಸೂತ್ರ

    ಬಡವ ರಾಸ್ಕಲ್ ಚಿತ್ರದಲ್ಲಿ ಶಂಕರ್ ಜರ್ನಿಯೇ ಒಂದು ಕಥೆ. ಶಂಕರ್ ಸಿನಿಮಾದಲ್ಲಿ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂಬಂತೆ ಇರುವ ವ್ಯಕ್ತಿ. ಹಾಗೇ ಸ್ನೇಹಿತರನ್ನು, ಆಟೋ ಕ್ಯಾಬ್ ಡ್ರೈವರ್‌ಗಳನ್ನು ಪೂಜಿಸುವ ಮತ್ತು ಗೌರವಿಸುವ ವ್ಯಕ್ತಿಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹಾಗೇ ಕುಟುಂಬದಲ್ಲಿ ಪ್ರೀತಿಯ ಮಗನಾಗಿದ್ದರೂ ಜವಾಬ್ದಾರಿ ಮಾತ್ರ ಬಂದಿರೋದಿಲ್ಲಾ. ಮಗನನ್ನು ಜವಾಬ್ದಾರಿಯುತವಾಗಿ ನೋಡಬೇಕು ಅನ್ನೋದು ಅಪ್ಪ ಅಮ್ಮನ ಕನಸು. ಆದರೇ ಅದು ಅರ್ಥವಾಗದೆ ಮದ್ಯಪಾನ, ಧೂಮಪಾನ ಮಾಡಿಕೊಂಡು ಸಮಯ ಕಳೆಯುತ್ತಾನೆ ಮಗ. ಮತ್ತು ಫ್ರೀ ಇದ್ದಾಗ ಅಪ್ಪನ ಆಟೋ ಓಡಿಸೋದು ಬಿಟ್ಟು ಬೇರೆನೂ ಕೆಲಸ ಇಲ್ಲ. ಇಂತಃ ಸಂದರ್ಭದಲ್ಲಿ ಶಂಕರ್ ರೌಡಿ ಪಡೆಗೆ ಒಂದು ಸಣ್ಣ ಕಿರಿಕ್‌ನಿಂದಾಗಿ ಕನೆಕ್ಟ್ ಆಗುತ್ತಾರೆ. ಅಲ್ಲಿಂದ ಶುರುವಾಗುತ್ತೆ ಶಂಕರ್ ರಿಯಲ್ ಜರ್ನಿ.

    ರಂಗಾಯಣ ರಘು-ತಾರ ಜೋಡಿ ಮೋಡಿ

    ರಂಗಾಯಣ ರಘು-ತಾರ ಜೋಡಿ ಮೋಡಿ

    ರೌಡಿ ಪಡೆಯಿಂದ ಶಂಕರ್ ಹೇಗೆ ಪ್ರೀತಿ ಸಂಪಾಧಿಸುತ್ತಾರೆ. ರೌಡಿಗಳೇ ಹೇಗೆ ಶಂಕರ್ ಸ್ನೇಹಿತರಾಗುತ್ತಾರೆ ಮತ್ತು ಕಷ್ಟಕ್ಕೆ ರೌಡಿಗಳು ಹೇಗೆ ಸಹಾಯ ಮಾಡುತ್ತಾರೆ ಅನ್ನೋದು ಕಂಪ್ಲೀಟ್ ಸಿನಿಮಾ. ಶಂಕರ್ ಜೀವನದ ಕಥೆ ಹೇಳುತ್ತಾರೆ, ಅದನ್ನು ಕೇಳಿ ರೌಡಿಗಳು ಫಿದಾ ಆಗುತ್ತಾರೆ. ಶಂಕರ್ ದೊಡ್ಡ ರಾಜಕಾರಣಿಯ ಮಗಳನ್ನು ಪ್ರೀತಿಸಿರುತ್ತಾನೆ ಪ್ರೀತಿಗೆ ಎದುರಾಗಿದ್ದ ಕಷ್ಟವನ್ನು ನಿವಾರಿಸುತ್ತಾರೆ. ಹೀಗೆ ಸಾಗುವ ಈ ಸಿನಿಮಾದಲ್ಲಿ ಸಾಕಷ್ಟು ಕಾಮಿಡಿ ಕಚಗುಳಿ ಕೂಡ ಇದ್ದು, ಸೆಂಟಿಮೆಂಟ್‌ಗು ಅಷ್ಟೆ ಪ್ರಾಮುಖ್ಯತೆ ಸಿನಿಮಾದಲ್ಲಿದೆ.

    ಎಡವಿದ್ದು ಎಲ್ಲಿ ಬಡವ ರಾಸ್ಕಲ್ ಸಿನಿಮಾ

    ಎಡವಿದ್ದು ಎಲ್ಲಿ ಬಡವ ರಾಸ್ಕಲ್ ಸಿನಿಮಾ

    ಹೇಳಬೇಕು ಎಂದರೇ ಬಡವ ರಾಸ್ಕಲ್ ಸಿಂಪಲ್ ಕಥೆಯನ್ನು ಇಟ್ಟುಕೊಂಡು ಅದರಲ್ಲೆ ಕುಟುಂಬ ಮತ್ತು ಸ್ನೇಹಿತರ ಮಹತ್ವವನ್ನು ಹೇಳಿರುವ ಚಿತ್ರ. ಯಾವುದೂ ಕೂಡ ಅತೀ ಆಗದೆ ಯಾವುದು ಕಡಿಮೆ ಆಗದೇ ತುಂಬ ನೀಟ್ ಆಗಿ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ ಶಂಕರ್ ಗುರು. ಒಂದು ಕಡೆ ಕುಟುಂಬ ಒಬ್ಬ ವ್ಯಕ್ತಿಯ ಮೇಲೆ ಹೇಗೆ ಪ್ರಭಾವ ಬೀರುತ್ತದೆ? ಕುಟುಂಬದಲ್ಲಿ ಕಷ್ಟ ಇದ್ದರೂ ಅದನ್ನು ಹೇಗೆ ನಿಭಾಯಿಸುತ್ತಾರೆ. ಮಿಡಲ್ ಕ್ಲಾಸ್ ಫ್ಯಾಮಿಲಿಯಲ್ಲಿ ಜೀವನ ಹೇಗೆ ಸಾಗುತ್ತದೆ ಅನ್ನೋದಕ್ಕೆ ಒಂದಷ್ಟು ಕಾಮಿಡಿ ಕಚಗುಳಿ ಇಟ್ಟು ಪ್ರೇಕ್ಷಕರಿಗೆ ಎಲ್ಲೂ ಬೋರ್ ಆಗದಂತೆ ಅಚ್ಚುಕಟ್ಟಾಗಿ ತೋರಿಸಲಾಗಿದೆ. ಕಥೆ ಸಾಮಾನ್ಯವಾಗಿದೆ. ಆದರೇ ಆಗಾಗ ಬರುವ ಕಾಮಿಡಿಗಳು, ಪಂಚಿಂಗ್ ಡೈಲಾಗ್‌ಗಳು, ಟ್ವಿಸ್ಟ್‌ಗಳು ಪ್ರೇಕ್ಷಕರ ಗಮನ ಬೇರೆಡೆ ಹೋಗದಂತೆ ನೋಡಿಕೊಳ್ಳುತ್ತದೆ. ನಟಿ ಅಮೃತಾ ಅಯ್ಯಂಗಾರ್ ಅವರದ್ದು ದೀರ್ಘಾವಧಿ ಪಾತ್ರ ಅಲ್ಲದೇ ಹೋದರೂ ತನ್ನ ಪಾತ್ರಕ್ಕೆ ತಾನು ಜೀವ ತುಂಬುದುವರಲ್ಲಿ ಯಶಸ್ವಿಯಾಗಿದ್ದಾರೆ.

    ಬಾಕ್ಸ್‌ ಆಫೀಸ್‌ನಲ್ಲಿ ಮಾಡಲಿದೆ ಕಮಾಲ್

    ಬಾಕ್ಸ್‌ ಆಫೀಸ್‌ನಲ್ಲಿ ಮಾಡಲಿದೆ ಕಮಾಲ್

    ಇನ್ನುಳಿದಂತೆ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನೀಡಿದ್ದು, ಹಾಡುಗಳು ಅದ್ಭುತವಾಗಿ ಮೂಡಿಬಂದಿದೆ. ಟೈಟಲ್ ಟ್ರ್ಯಾಕ್ ಒಳಗೊಂಡಂತೆ ಮೆಲೋಡಿ ಸಾಂಗ್ , ಲವ್ ಸಾಂಗ್ ಎಲ್ಲವೂ ಸಿನಿಮಾದ ಬೇಡಿಕೆಗೆ ತಕ್ಕಂತಿದೆ. ಬೆಂಗಳೂರಿನ ಕೆ.ಆರ್ ಮಾತುಕಟ್ಟೆ ಸೇರಿದಂತೆ ಇಲ್ಲೇ ಸುತ್ತಾಮುತ್ತ ಸಿನಿಮಾ ಶೂಟಿಂಗ್ ಮಾಡಲಾಗಿದ್ದು, ಚಿತ್ರತಂಡ ಒಂದೊಳ್ಳೆ ಕಥೆಯನ್ನು ಪ್ರೇಕ್ಷಕರ ಮುಂದೆ ಇಡುವಲ್ಲಿ ಯಶಸ್ವಿಯಾಗಿದೆ ಅಂದ್ರೆ ತಪ್ಪಾಗಲ್ಲಾ. ಚಿತ್ರ ನೋಡಿದವರು ಕೂಡ ಬಡವ ರಾಸ್ಕಲ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಬಾಕ್ಸ್‌ ಆಫೀಸ್‌ ಕಲೆಕ್ಷನ್‌ಗೆ ಮೋಸವಿಲ್ಲ ಎನ್ನಲಾಗುತ್ತಿದೆ.

    English summary
    Badava Rascal Movie Review; Dhananjay, Amrutha Iyengar, Tara and Rangayana Raghu starrer Badava Rascal Kannada movie review and rating.
    Friday, December 24, 2021, 17:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X