»   » 'ಘರ್ಷಣೆ' ವಿಮರ್ಶೆ: ಸಸ್ಪೆನ್ಸ್ ಪ್ರಿಯರಿಗೆ ಅರ್ಪಣೆ

'ಘರ್ಷಣೆ' ವಿಮರ್ಶೆ: ಸಸ್ಪೆನ್ಸ್ ಪ್ರಿಯರಿಗೆ ಅರ್ಪಣೆ

Posted By:
Subscribe to Filmibeat Kannada

ಒಂದು ಚಿತ್ರದ ಕಥೆಯನ್ನು ಒನ್ ಲೈನ್ ನಲ್ಲಿ ಹೇಳಬಹುದು. ಆದರೆ ಚಿತ್ರ ವಿಮರ್ಶೆಯನ್ನು ಹಾಗೆ ಹೇಳಲು ಸಾಧ್ಯವೆ? ಆದರೆ ಆಕ್ಷನ್ ಕ್ವೀನ್ ಮಾಲಾಶ್ರೀ ಅಭಿನಯದ 'ಘರ್ಷಣೆ' ಚಿತ್ರದ ಬಗ್ಗೆ ಸಾಹಸವೇ ಪ್ರಮುಖ ಆಕರ್ಷಣೆ ಎಂದು ಧೈರ್ಯವಾಗಿ ಒನ್ ಲೈನ್ ನಲ್ಲಿ ಹೇಳಬಹುದು.

Rating:
3.0/5
ಇಲ್ಲಿ ಭರ್ಜರಿ ಫೈಟ್ಸ್ ಇವೆ. ಅದಕ್ಕೆ ತಕ್ಕಂತೆ ಎಸ್ ಎನ್ ಅಭಿಷೇಕ್ ಅವರ ಹಿನ್ನೆಲೆ ಸಂಗೀತವೂ ಭೋರ್ಗರೆದಿದೆ. ಎಂದಿನಂತೆ ಮಾಲಾಶ್ರೀ ಅವರ ಅಭಿನಯ ಆಕ್ಷನ್ ಜೊತೆಗೆ ಸಾಗುತ್ತದೆ. ಸಿಸಿಬಿ ಅಭಿಕಾರಿಣಿ ನೇತ್ರಾವತಿಯಾಗಿ ಅವರು ತಮ್ಮ ಪಾತ್ರಕ್ಕೆ ಸಂಪೂರ್ಣ ನ್ಯಾಯ ಸಲ್ಲಿಸಿದ್ದಾರೆ.

ಕಾಣೆಯಾದ ತನ್ನ ಪ್ರೀತಿಯ ತಂಗಿ ಅಂಜಲಿಯನ್ನು (ರೂಪಿಕಾ) ಹುಡುಕುತ್ತಾ ಸಾಗುವುದೇ ಚಿತ್ರದ ಕಥೆ. ಇದರಲ್ಲಿ ಅವರು ಯಶಸ್ವಿಯೂ ಆಗುತ್ತಾರೆ. ತನ್ನ ತಂಗಿಯನ್ನು ಅಪಹರಿಸಿದ ದುಷ್ಟ ಶಕ್ತಿಗಳ ವಿರುದ್ಧ ಸೆಣೆಸಾಡುತ್ತಾರೆ. ತನ್ನ ಇಲಾಖೆಯವರೇ ಇದರಲ್ಲಿ ಇನ್ವಾಲ್ ಆಗಿರುತ್ತಾರೆ. ಅವರೊಂದಿಗಿನ 'ಘರ್ಷಣೆ'ಯೇ ಚಿತ್ರದ ಸಾರ.

ಚಿತ್ರ: ಘರ್ಷಣೆ
ನಿರ್ಮಾಪಕರು: ಶಂಕರ್ ಗೌಡ ಹಾಗೂ ಶಂಕರ್ ರೆಡ್ಡಿ
ಕಥೆ, ಚಿತ್ರಕಥೆ, ನಿರ್ದೇಶನ: ದಯಾಳ್ ಪದ್ಮನಾಭನ್
ಸಂಗೀತ: ಮಣಿಕಾಂತ್ ಕದ್ರಿ
ಸಂಕಲನ: ಶ್ರೀ ಕ್ರೇಜಿಮೈಂಡ್ಸ್
ಛಾಯಾಗ್ರಹಣ: ರಾಜೇಶ್ ಕಟ
ಸಂಭಾಷಣೆ: ಶ್ಯಾಂ ಪ್ರಸಾದ್
ಸಾಹಸ: ರವಿವರ್ಮ
ಪಾತ್ರವರ್ಗ: ಮಾಲಾಶ್ರೀ, ರೂಪಿಕಾ, ಸುಚೀಂದ್ರಪ್ರಸಾದ್, ಪವಿತ್ರಾಲೋಕೇಶ್, ಆಶೀಷ್ ವಿದ್ಯಾರ್ಥಿ, ರೂಪಿಕಾ, ರವಿಶಂಕರ್, ಮುನಿ, ಗುರುರಾಜ ಹೊಸಕೋಟೆ, ಕಾಶಿ, ಮೈಕೊ ನಾಗರಾಜ್ ಮುಂತಾದವರು.

ಚಿತ್ರದಲ್ಲಿ ಕಥೆ ನೆಪ ಮಾತ್ರಕ್ಕಷ್ಟೇ ಇದೆ

ಚಿತ್ರದ ನಿರ್ದೇಶಕ ದಯಾಳ್ ಪದ್ಮನಾಭನ್ ಅವರು ತಮ್ಮ ಸಂಪೂರ್ಣ ಶ್ರಮವನ್ನು ಸಸ್ಪೆನ್ಸ್, ಥ್ರಿಲ್ಲಿಂಗ್ ಅಂಶಗಳಿಗೆ ಮೀಸಲಾಗಿಟ್ಟಿದ್ದಾರೆ. ಇಲ್ಲಿ ಕಥೆ ನೆಪ ಮಾತ್ರಕ್ಕಷ್ಟೇ ಇದೆ. ಶ್ಯಾಂ ಪ್ರಸಾದ್ ಅವರ ಸಂಭಾಷಣೆಯಲ್ಲಿ ಹೊಸತನವಿಲ್ಲದಿದ್ದರೂ ಕಥೆಗೆ ಪೂರಕವಾಗಿ ಇದೆ. ಅಲ್ಲಲ್ಲಿ ಕೆಲವು ಪಂಚಿಂಗ್ ಡೈಲಾಗ್ ಗಳು ಕಿವಿಗೆ ನಾಟುತ್ತವೆ.

ಚಿತ್ರದ ಮೊದಲರ್ಧ ಕುತೂಹಲಭರಿತ

ಚಿತ್ರದ ಮೊದಲರ್ಧವನ್ನು ಕುತೂಹಲಭರಿತವಾಗಿ ತೆಗೆದುಕೊಂಡು ಹೋಗಿದ್ದಾರೆ ನಿರ್ದೇಶಕ ದಯಾಳ್. ಚಿತ್ರ ದ್ವಿತೀಯಾರ್ಧಕ್ಕೆ ಹೊರಳುತ್ತಿದ್ದಂತೆ ಕೊಂಚ ಕಂಟ್ರೋಲ್ ತಪ್ಪಿದಂತಾಗಿದೆ. ಕೊನೆಕೊನೆಗೆ ನಿರ್ದೇಶಕರು ಚಿತ್ರಕಥೆ ಮೇಲೆ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಎಸ್ ಎನ್ ಅಭಿಷೇಕ್ ಬ್ಯಾಕ್ ಗ್ರೌಂಡ್ ಸ್ಕೋರ್

ಚಿತ್ರದ ಹೈಲೈಟ್ ಗಳಲ್ಲಿ ಎಸ್ ಎನ್ ಅಭಿಷೇಕ್ ಅವರ ಹಿನ್ನೆಲೆ ಸಂಗೀತ ಒಂದು. ರವಿವರ್ಮ ಅವರ ಭರ್ಜರಿ ಫೈಟ್ಸ್ ಸಹ ಮೈನವಿರೇಳುವಂತಿವೆ. ಇದು ಪಕ್ಕಾ ಮಾಲಾಶ್ರೀ ಚಿತ್ರವಾದರೂ ಇಲ್ಲಿ ಬೇರೆ ಕಲಾವಿದರಿಗೂ ಸಾಕಷ್ಟು ಅವಕಾಶ ನೀಡಲಾಗಿದೆ.

ಒಳಗೆ ಸೇರಿದರೆ ಗುಂಡು ರೀಮಿಕ್ಸ್ ಇನ್ನೊಂದು ಆಕರ್ಷಣೆ

'ನಂಜುಂಡಿ ಕಲ್ಯಾಣ' ಚಿತ್ರದ "ಒಳಗೆ ಸೇರಿದರೆ ಗುಂಡು ಹುಡುಗಿಯಾಗುವಳು ಗಂಡು.." ಹಾಡಿನ ನೃತ್ಯ ಸಂಯೋಜನೆ ಇಂದಿನ ಮಾಲಾಶ್ರೀ ಅವರ ಹಾವಭಾವ ಅವರ ಮೈಮಾಟಕ್ಕೆ ಒಪ್ಪುವಂತೆ ಮಾಡಿದ್ದಾರೆ. ಈ ಒಂದು ಹಾಡು ಚಿತ್ರದಲ್ಲಿ ಪ್ರಮುಖ ಆಕರ್ಷಣೆಯಾಗಿ ನಿಲ್ಲುತ್ತದೆ.

ತಾಂತ್ರಿಕವಾಗಿ ಚಿತ್ರ ನೀಟಾಗಿದೆ

ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆಯ ಉಳಿದ ಹಾಡುಗಳು ಅಷ್ಟಾಗಿ ಗಮನಸೆಳೆಯುವುದಿಲ್ಲ. ರಾಜೇಶ್ ಕಟ ಅವರ ಛಾಯಾಗ್ರಹಣವೂ ಕಣ್ಣಿಗೆ ಹಿತಮಿತವಾಗಿ ಮೂಡಿಬಂದಿದೆ. ಒಟ್ಟಾರೆಯಾಗಿ ಮಾಲಾಶ್ರೀ ತಮ್ಮ ಅಭಿಮಾನಿಗಳಿಗೆ ಖಂಡಿತ ನಿರಾಸೆಪಡಿಸುವುದಿಲ್ಲ.

ಪೋಷಕರ ಪಾತ್ರಗಳಲ್ಲಿ ಆಶೀಷ್ ಗೆ ಹೆಚ್ಚು ಅಂಕ

ಪೋಷಕ ಪಾತ್ರಗಳಲ್ಲಿ ಆಶೀಷ್ ವಿದ್ಯಾರ್ಥಿ ಬಹುತೇಕ ಅಂಕಗಳನ್ನು ಪಡೆಯುತ್ತಾರೆ. ಉಳಿದಂತೆ ಮಾಲಾಶ್ರೀ ತಂಗಿಯಾಗಿ ರೂಪಿಕಾ ಅವರ ಪಾತ್ರ ನೆಪಕ್ಕಷ್ಟೇ ಇದೆ. ಇನ್ನು ಕಾಶಿ, ಗುರುರಾಜ್ ಹೊಸಕೋಟೆ, ಸುಚೇಂದ್ರಪ್ರಸಾದ್, ಪವಿತ್ರಾ ಲೋಕೇಶ್, ಮುನಿ, ರವಿಶಂಕರ್, ಮೈಕೋ ನಾಗರಾಜ್ ನೆನಪಿನಲ್ಲಿ ಉಳಿಯುತ್ತಾರೆ.

ಥ್ರಿಲ್, ಕ್ರೈಂ, ಸಸ್ಪೆನ್ಸ್ ಪ್ರಿಯರಿಗೆ ನಿರಾಸೆಪಡಿಸಲ್ಲ

ಕನಸಿನರಾಣಿಯಾಗಿದ್ದ ಮಾಲಾಶ್ರೀ ಈಗ ಆಕ್ಷನ್ ಕ್ವೀನ್. ಅವರೀಗ ಬಳುಕುವ ಬಳ್ಳಿ ಅಲ್ಲದಿದ್ದರೂ ತಮ್ಮ ದೇಹದ ತೂಕ ಗಾತ್ರಕ್ಕೆ ತಕ್ಕಂತಹ ಪಾತ್ರವನ್ನು ನಿರ್ವಹಿಸಿರುವುದು ವಿಶೇಷ. ಇಲ್ಲಿ ಅವರು ಸುನಾಯಾಸವಾಗಿ ಫೈಟ್ಸ್ ಮಾಡಿದ್ದಾರೆ. ಎಲ್ಲೂ ಅತಿ ಅನ್ನಿಸುವುದಿಲ್ಲ. ಮಾಲಾಶ್ರೀ ಚಿತ್ರ ಎಂದ ಮೇಲೆ ಅಷ್ಟೂ ಇಲ್ಲದಿದ್ದರೆ ಹೇಗೆ? ಥ್ರಿಲ್, ಕ್ರೈಂ, ಸಸ್ಪೆನ್ಸ್ ಪ್ರಿಯರಿಗೆ ಖಂಡಿತ ನಿರಾಸೆಪಡಿಸಲ್ಲ 'ಘರ್ಷಣೆ'.

English summary
Action Queen Malashree lead Kannada movie 'Gharshane' review. The action, suspense, thrilling packed movie doesn't disappoints Malashree fans. The background score by Abhishek SN awe-inspiring, excellent.
Please Wait while comments are loading...