Don't Miss!
- News
ಹೊಸ ಘಟಕ, ಪದಾಧಿಕಾರಿ ಘೋಷಣೆ, ಶೀಘ್ರವೇ ಚುನಾವಣೆ ಅಭ್ಯರ್ಥಿ ಆಯ್ಕೆ ಆರಂಭ: AAP
- Sports
ಟೆಸ್ಟ್ನಲ್ಲೂ ನಂಬರ್ 1 ಸ್ಥಾನದ ಮೇಲೆ ಕಣ್ಣಿಟ್ಟ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ
- Finance
Union Budget 2023: ತೆರಿಗೆದಾರರಿಗೆ ದೀರ್ಘಾವಧಿ ತೆರಿಗೆ ವಿನಾಯಿತಿ ಘೋಷಿಸಿ: KPMG
- Lifestyle
ಆ್ಯಪಲ್ ಶೇಪ್ನ ದೇಹ ಹೊಂದಿರುವವರಿಗೆ ಹೆಚ್ಚಾಗಿ ಕಾಯಿಲೆ ಬೀಳುತ್ತಾರೆ, ಏಕೆ?
- Automobiles
ವಧುವನ್ನು ಮನೆಗೆ ಕರೆದೊಯ್ಯಲು ತಂದೆಯ ಹಳೆಯ ಮಾರುತಿ 800 ಕಾರು ಬಳಿಸಿದ ಕೆನಡಾದ ಎನ್ಆರ್ಐ
- Technology
ಮೆಸೆಂಜರ್ಗಾಗಿ ಕೆಲವು ಫೀಚರ್ಸ್ ಪರಿಚಯಿಸಿದ ಮೆಟಾ; ಬಳಕೆದಾರರಿಗೆ ಸಾಕಷ್ಟು ಅನುಕೂಲ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಶ್ರವಂತ್, ಮನಿಶ್ ಚಂದ್ರ 'ನಾವಿಕ' ಚಿತ್ರವಿಮರ್ಶೆ
ಸಹೋದರರ ಸವಾಲ್ ಆಗಿರುವ 'ನಾವಿಕ' ಚಿತ್ರದಲ್ಲಿ, ನಾಯಕರಲ್ಲೊಬ್ಬರಾದ ಶಂಕರ್ (ಶ್ರವಂತ್ ರಾವ್) ಕಾನೂನಿನ ಚೌಕಟ್ಟಿನಲ್ಲಿ ಸಮಾಜ ಘಾತುಕರನ್ನು ನಿಯಂತ್ರಿಸಬೇಕೆಂಬ ಉದ್ದೇಶ, ಗುರಿ ಹೊಂದಿರುವವರು. ಆದರೆ ಇನ್ನೊಬ್ಬರು ಸೂರಿ (ಮನಿಶ್ ಚಂದ್ರ) ಕಾನೂನನ್ನು ನಂಬಿ ಕುಳಿತರಾಗದು, ಸಮಾಜ ಕಂಟಕರನ್ನು ಮುಗಿಸಲೇಬೇಕು ಎಂಬ ಮಾತಿಗೆ ಕಟ್ಟುಬಿದ್ದವರು. ಇವರಿಬ್ಬರ ಗುರಿ ಒಂದೇ ಆದರೂ ದಾರಿ ಬೇರೆ ಬೇರೆ. ಸಹೋದರರಿಬ್ಬರ 'ಶತ್ರು ಸಂಹಾರ'ದ ಕಥೆಯನ್ನು ನೀಟಾಗಿ ಮನಮುಟ್ಟುವಂತೆ ಹೇಳಬೇಕಿದ್ದ ನಿರ್ದೇಶಕ ಸೇನ್ ಪ್ರಕಾಶ್, ಅಬ್ಬರದ ನಿರೂಪಣೆ ನಂಬಿ ಮೋಸಹೋಗಿದ್ದಾರೆ ಎನ್ನಬಹುದು.
ಬಿಗಿಯಾದ ನಿರೂಪಣೆ ಮೇಲೆ ಸಾಗಬೇಕಾಗಿದ್ದ ಚಿತ್ರಕಥೆ, ಉದ್ದುದ್ದ ಹಾಗೂ ಅನಗತ್ಯ ವೈಭವೀಕರಣದ ಸಂಭಾಷಣೆ ಮೂಲಕ ಹಾದಿ ತಪ್ಪಿದೆ. ನಿರ್ದೇಶಕರಿಗೆ ಏನೋ ಹೇಳಬೇಕು ಎಂಬುದು ಗೊತ್ತಿದೆಯಾದರೂ ಅದನ್ನು ಚಿತ್ರದಲ್ಲಿ ಪಾತ್ರದ ಮೂಲಕ ಹೇಗೆ ಹೇಳಿಸಬೇಕು ಎಂಬುದಾಗಲೀ ಅಥವಾ ದೃಶ್ಯ ಮಾಧ್ಯಮವಾಗಿರುವ ಸಿನಿಮಾ ಮೂಲಕ ಅದನ್ನು ಪ್ರೇಕ್ಷಕರಿಗೆ ಹೇಗೆ ಮುಟ್ಟಿಸಬೇಕೆಂಬುದಾಗಲೀ ಗೊತ್ತಿಲ್ಲ. ಸಿದ್ಧ ಸೂತ್ರದ ಕಥೆಯೊಂದನ್ನು ಸಾಕಷ್ಟು ಹೋಮ್ ವರ್ಕ್ ಮಾಡಿಕೊಳ್ಳದೇ ತೆರೆಗೆ ತರುವ ಪ್ರಯತ್ನ ಮಾಡಿರುವ ನಿರ್ದೇಶಕರ 'ನಾವಿಕ', ದಾರಿವಿಲ್ಲದೇ ಗಾಳಿಪಟ ಹಾರಿಸಿಬಿಟ್ಟಂತಾಗಿದೆ.
ಚಿತ್ರಕ್ಕೆ ನಾಯಕರಾಗಿರುವ ಶ್ರವಂತ್ ರಾವ್ ಹಾಗೂ ಮನಿಶ್ ಚಂದ್ರ ಇಬ್ಬರ ಅಭಿನಯವೂ ಓಕೆ. ಶ್ರವಂತ್ ರಾವ್ ಪೊಲೀಸ್ ಪಾತ್ರದಲ್ಲಿ ಕಷ್ಟಪಟ್ಟು ನಟಿಸಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಆದರೆ ಡಾನ್ಸ್ ಹಾಗೂ ಫೈಟ್ಸ್ ನಲ್ಲಿ ಅವರು ಲೀಲಾಜಾಲ. ಇನ್ನು ಪಕ್ಕಾ ಪೊರ್ಕಿಯಾಗಿ ಗಮನಸೆಳೆಯಬೇಕಿದ್ದ ಮನಿಶ್ ಚಂದ್ರ, ಇನ್ನಷ್ಟು ಲವಲವಿಕೆಯಿಂದ ನಟಿಸಿಬೇಕಿತ್ತಾದರೂ ಪಾತ್ರಕ್ಕೆ ತಕ್ಕ ಅಭಿನಯ ನೀಡಿದ್ದಾರೆ. ಯಾಕೋ ಚಿತ್ರದ ತುಂಬಾ ಯಾವುದೋ ಹ್ಯಾಂಗೋವರ್ ನಲ್ಲಿ ಇದ್ದಂತೆ ಕಾಣುತ್ತಾರೆ ಮನಿಶ್. ಆದರೆ ಅದು ಚಿತ್ರಕ್ಕೆ ಮೈನಸ್ ಪಾಯಿಂಟ್ ಆಗದಂತೆ ಅವರು ಎಚ್ಚರಿಕೆ ವಹಿಸಿದ್ದನ್ನು ಮೆಚ್ಚಲೇಬೇಕು.
ಉಳಿದಂತೆ, ನಾಯಕಿಯರಾದ ಸ್ವಾತಿ ಮತ್ತು ಎಸ್ಟರ್ ನೊರಾನಾ ಇಬ್ಬರಲ್ಲಿ ಎಸ್ಟರ್ ಅವರು ಸೌಂದರ್ಯದ ಖನಿಯಾಗಿ ಸಾಕಷ್ಟು ಗಮನಸೆಳೆದರೂ ಅವರ ಪಾತ್ರಕ್ಕೆ ಚಿತ್ರದಲ್ಲಿ ಅಷ್ಟೇನೂ ಮಹತ್ವವಿಲ್ಲ. ಆದರೆ ಮಹತ್ವದ ಪಾತ್ರವಿದ್ದರೂ ಅಭಿನಯದಲ್ಲಿ ತಲ್ಲೀನತೆ ಪಡೆದುಕೊಳ್ಳದ ಸ್ವಾತಿ, ಸಿಕ್ಕ ಒಳ್ಳೆಯ ಅವಕಾಶವನ್ನು ತಾವಾಗೇ ಕೈಚೆಲ್ಲಿದ್ದಾರೆ. ಇನ್ನುಳಿದಂತೆ ಪೋಷಕ ಪಾತ್ರಗಳಲ್ಲಿ ಶೋಭರಾಜ್, ಟೆನ್ನಿಸ್ ಕೃಷ್ಣ ಮಿಂಚಿದ್ದಾರೆ. ಹಾಸ್ಯ ಪಾತ್ರದಲ್ಲಿ ಚಿದಾನಂದ ಹಾಗೂ ಹಾಗೂ ನಟ ನೀನಾಸಂ ಅಶ್ವತ್ಥ್, ಪಾತ್ರ ಬಯಸುವ ಅಭಿನಯ ನೀಡಿದ್ದಾರೆ.
ಸಂಗೀತ ನಿರ್ದೇಶಕ ರಾಜ್ ನಾರಾಯಣ್ ಯಾಕೋ ಸರಿಯಾಗಿ ಸಂಗೀತ ನೀಡುವಲ್ಲಿ ವಿಫಲರಾಗಿದ್ದಾರೆ. ಚಿತ್ರದ ಮೈನಸ್ ಪಾಯಿಂಟ್ ಸಾಲಿಗೆ ಸೇರಿರುವ ಅವರ ಸಂಗೀತದಲ್ಲಿ ಒಂದೇ ಒಂದು ಹಾಡು ಚಿತ್ರ ನೋಡಿ ಈಚೆ ಬಂದಾಗ ನೆನಪಿನಲ್ಲಿರುವುದಿಲ್ಲ. ಸಿನಿಟೆಕ್ ಸೂರಿ ಛಾಯಾಗ್ರಹಣ ಚೆನ್ನಾಗಿದೆ. ನಿರ್ಮಾಪಕರೂ ಆಗಿರುವ ರಂಗಸ್ವಾಮಿ ಬಿಳುಗಲಿ ಈ ಚಿತ್ರಕ್ಕೆ ಕಥೆ ಹೆಣೆದಿದ್ದು, ಕಥೆಯನ್ನು ಇನ್ನೂ ಚೆನ್ನಾಗಿ ಮಾಡಬಹುದಿತ್ತು. ಯೋಗಿಯವರ ಉದ್ದುದ್ದ ಸಂಭಾಷಣೆಯಲ್ಲಿ ಧಮ್ ಕಡಿಮೆ. ಸುಬ್ಬು ಸಾಹಸ, ರಾಜು ನೃತ್ಯ ನಿರ್ದೇಶನ ಓಕೆ. ಒಟ್ಟಿನಲ್ಲಿ, ನಾವಿಕ ಚಿತ್ರವನ್ನು ಹತ್ತರ ಜೊತೆ ಹನ್ನೊಂದು ಎಂಬಂತೆ ಒಮ್ಮೆ ನೋಡಿ ಆನಂದಿಸಬಹುದು.