twitter
    For Quick Alerts
    ALLOW NOTIFICATIONS  
    For Daily Alerts

    ರಮ್ಯಾ ತೊಳೆದಿಟ್ಟ ಬೆಣ್ಣೆಯ ಮೇಲೆ ಇಟ್ಟ ದ್ರಾಕ್ಷಿ ಹಣ್ಣು

    By * ವಿನಾಯಕರಾಮ್ ಕಲಗಾರು
    |
    <ul id="pagination-digg"><li class="previous"><a href="/reviews/katari-veera-surasundarangi-bombat-ambarish-065077.html">« Previous</a>

    Actress Ramya
    (ಹಿಂದಿನ ಪುಟದಿಂದ...) ಯಮಧರ್ಮ: ಅವನು ಎಷ್ಟೆಂದರೂ ಬುದ್ಧಿವಂತನಲ್ಲವೇ ಚಿತ್ರಗುಪ್ತರೆ? ಅದಿರಲಿ, ಆ ಗಂಧದಗುಡಿಯ ಮಹಾರಾಣಿ(ಸ್ಯಾಂಡಲ್‌ವುಡ್ ಕ್ವೀನ್) ರಮ್ಯಾ ಹೇಗೆ ಅಭಿನಯಿಸಿದ್ದಾಳೆ?

    ಚಿತ್ರಗುಪ್ತ: ಅಯ್ಯೋ ಅಯ್ಯೋ ಅಯ್ಯೋ.. ನನ್ನ ಕಣ್ಣುಗಳಿಗೆ ಜ್ವರ ಬರಿಸುವಷ್ಟು ಬಿಸಿಬಿಸಿ(ಹಾಟ್) ಆಗಿ ಕಾಣುತ್ತಾರೆ ಆ ರಂಗಿನ ರಮ್ಯಾ ಅವರು. ಮೂರನೇ ಆಯಾಮ(ತ್ರೀಡಿ)ಯಲ್ಲಿ ಅವರನ್ನು ನೋಡುತ್ತಿದ್ದರೆ ಅವರಿಗೆ ಯವಸ್ಸಾಗಿದೆ ಎನ್ನುವುದೇ ಗೊತ್ತಾಗುವುದಿಲ್ಲ ಮಹಾಪ್ರಭು. ಈಗ ತಾನೇ ತೊಳೆದಿಟ್ಟ ಬೆಣ್ಣೆಯ ಮೇಲೆ ದ್ರಾಕ್ಷಿ ಹಣ್ಣು ಸಿಕ್ಕಿಸಿದಷ್ಟು ಅಂದವಾಗಿ ಕಾಣುತ್ತಾರೆ ಆ ಯಮ್ಮ-ಧರ್ಮ!

    ಯಮಧರ್ಮ: ಅಹುದೇ? ಪರವಾಗಿಲ್ಲವೇ? ಭೂಲೋಕದಲ್ಲೂ ಕಣ್ಣು ಕುಕ್ಕುವ ಹೆಣ್ಣುಮಕ್ಕಳು ಇದ್ದಾರೆ ಎಂದಾಯಿತು. ಸರಿ ಸರಿ.. ಬರೀ ಹೆಂಗಸರ ಬಗ್ಗೆಯೇ ಹೇಳಬೇಡಿ, ಬೇರೆ ಏನಾದರೂ ಹೇಳಿ...

    ಚಿತ್ರಗುಪ್ತ: ಮಹಾಸ್ವಾಮಿ.. ಇಡೀ ಸಿನಿಮಾ ನೋಡಿಸಿಕೊಂಡು ಹೋಗುತ್ತದೆ. ಅಲ್ಲಲ್ಲಿ ಬೇಸರದ ಅಲೆ ಬೆನ್ನು ಕೆರೆಯುತ್ತದೆ. ಉಪೇಂದ್ರ ಎಂಬ ರಕ್ತಕಣ್ಣೀರಿನ ನಾಯಕ ಅಲಲ್ಲಿ ನಗಿಸಿ ನಗಿಸಿಯೇ ಕಣ್ಣೀರು ಬರಿಸುತ್ತಾನೆ. ನಿರ್ದೇಶಕ ಸುರೇಶ್ ಕೃಷ್ಣ ತಮ್ಮ ಕೆಲಸವನ್ನು ನಿಯತ್ತಾಗಿ ಮಾಡಿದ್ದಾರೆ. ಹರಿಕೃಷ್ಣ ಸಂಗೀತದಲ್ಲಿ ಅಂಬಿಕಾ, ಜುಮ್ತಾ ಜುಮ್ತಾ ಹಾಡು ಕೇಳಿಸಿಕೊಂಡು ಮರೆತುಬಿಡುವಂತಿದೆ. ಉಳಿದಂತೆ ಯಾವುದರಲ್ಲೂ ಶಕ್ತಿಮದ್ದು(ಪವರ್) ಇಲ್ಲ. ಛಾಯಾಗ್ರಾಹಕ ವೇಣು ಹರಿಸಿದ ಶ್ರಮದ ಬೆವರು ಪ್ರೇಕ್ಷಕರ ಹಣೆಯಲ್ಲೂ ಆಗಾಗ ಮೂಡುತ್ತದೆ. ಉಳಿದಂತೇ ರಂಬೆ ಊರ್ವಶಿ ಮೇನಕೆಯರನ್ನೇ ನಾಚಿಸುವ, ಮರೆಮಾಚಿಸುವ ಸುಮನಾ ರಂಗನಾಥೆ, ರಿಶಿಕಾ ಸಿಂಗಾರವ್ವಾ, ರಮನಿತು ಚೌದರಾಂಬೆ ಎಲ್ಲರನ್ನೂ ನೆನೆಸಿಕೊಂಡರೆ ನನ್ನ ಕೈಕಾಲುಗಳೇ ಕುಣಿಯಲು ಶುರುಮಾಡುತ್ತವೆ ಯಮಧರ್ಮಾ!

    ಯಮಧರ್ಮ: ಸರಿ ಸರಿ.. ನಿನ್ನ ಪಾತ್ರ ಮಾಡಿರುವ ವ್ಯಕ್ತಿ ಯಾರು? ಹೇಗೆ ಕಾಣುತ್ತಾನೆ ಆತ?

    ಚಿತ್ರಗುಪ್ತ: ನನ್ನ ಯೋಗ್ಯತೆಯನ್ನೇ ಪರೀಕ್ಷೆ ಮಾಡುವ ಮಟ್ಟಕ್ಕೆ ಆ ದೊಡ್ಡಣ್ಣ ಎಂಬ ಪಾತ್ರಧಾರಿ ಮಿಂಚಿದ್ದಾನೆ ಮಹಾಪ್ರಭು. ಆತ ಈ ಹಿಂದೆ ಒಂದಷ್ಟು ಚಿತ್ರಗಳಲ್ಲಿ ನಿಮ್ಮ ಪಾತ್ರವನ್ನೂ ಮಾಡಿ ಸೈ ಎನಿಸಿಕೊಂಡಿದ್ದ. ಕಠಾರಿವೀರ ಚಿತ್ರದಲ್ಲಿ ಚಿತ್ರಗುಪ್ತನ ಪಾತ್ರವನ್ನು ಚಿತ್ರಾನ್ನ ತಿಂದಷ್ಟೇ ಸಲೀಸಾಗಿ ಮಾಡಿದ್ದಾರೆ. ಅವರಿಗಿಂತ ಹೆಚ್ಚಾಗಿ ಮಂಗಳೂರಿನ ಮಹಾನ್ ವ್ಯಕ್ತಿ ಮುತ್ತಪ್ಪ ರೈ ಅವರೂ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದೂ ಒಬ್ಬ ಸೈತಾನ್ (ಡಾನ್) ರೂಪದಲ್ಲಿ!

    ಯಮಧರ್ಮ: ಓಹೋ.. ಅದೇ ಜಯ ಕರ್ನಾಟಕ ಎಂಬ ಪಕ್ಷ ಕಟ್ಟಿಕೊಂಡು ಸದ್ಯ ಸಮಾಜ ಸೇವೆಯಲ್ಲಿ ತೊಡಗಿರುವ ಅದೇ ಮುತ್ತಪ್ಪ ರೈಯೇ? ಭಲೇ ಚಿತ್ರಗುಪ್ತರೇ! ನಿಮ್ಮ ಮಾತು ಕೇಳಿ ನನಗೂ ಯಾಕೋ ಆ ಚಿತ್ರವನ್ನು ನೋಡಬೇಕು ಎನಿಸುತ್ತಿದೆ. ಎಳೆತನ್ನಿ ನಮ್ಮ ಕೋಣವನ್ನು.. ನಡೆಯಿರಿ ಚಿತ್ರಮಂದಿರದ ಕಡೆಗೆ...

    ಚಿತ್ರಗುಪ್ತ: ಆದರೆ ನನ್ನದೊಂದು ವಿನಂತಿ ಮಹಾರಾಜಾ.. ಕೋಣ ಬೇಡ. ನಡೆದುಕೊಂಡೇ ಹೋಗೋಣ. ಏಕೆಂದರೆ, ಅಲ್ಲಿ ವಾಹನ ನಿಲುಗಡೆಯ ಸಮಸ್ಯೆ(ಪಾರ್ಕಿಂಗ್ ಪ್ರಾಬ್ಲಮ್) ಇದೆ. ಜೊತೆಗೆ ಪ್ರಾಣಿದಯಾ ಸಂಘದ ಮೇನಕಮ್ಮ(ಮೇನಕಾ ಗಾಂಧಿ)ನದ್ದು ಇತ್ತೀಚೆಗೆ ವಿಪರೀತ ಕಿರಿಕಿರಿ ಮಿಶ್ರಿತ ಕಾನೂನು ಜಾರಿಯಲ್ಲಿದೆ! ಯಮಹೋ ಯಮಹ...

    <ul id="pagination-digg"><li class="previous"><a href="/reviews/katari-veera-surasundarangi-bombat-ambarish-065077.html">« Previous</a>

    English summary
    Katari Veera Surasundarangi 3D movie review by Vinayakaram Kalagaru. Upendra, Ramya, Ambarish are in lead. Dialogues are the highlight of the film. Full entertainment without much logic. Just enjoy it.
    Thursday, May 10, 2012, 18:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X