For Quick Alerts
  ALLOW NOTIFICATIONS  
  For Daily Alerts

  ನಾ ನೋಡಿದ ದರ್ಶನ್ ಅಭಿನಯದ 'ಚಿಂಗಾರಿ' ಚಿತ್ರವಿಮರ್ಶೆ

  By *ಬಾಲರಾಜ್ ತಂತ್ರಿ
  |

  Kannada Movie Chingari
  ತೆಲುಗು ಚಿತ್ರಕ್ಕೆಂದೇ ಹೆಚ್ಚಾಗಿ ಮೀಸಲಾಗಿರುವ ಬೆಂಗಳೂರು, ವಿದ್ಯಾಪೀಠ ವೃತ್ತದ ಬಳಿಯಿರುವ ಚಂದ್ರೋದಯ ಚಿತ್ರಮಂದಿರದಲ್ಲಿ ತ್ರಿಕೋಣ ಏಕದಿನ ಕ್ರಿಕೆಟ್ ಸರಣಿಯ ನಡುವೆಯೂ ಮುಕ್ಕಾಲು ತುಂಬಿದ್ದ ಥಿಯೇಟರ್ ನಲ್ಲಿ ಚಿತ್ರ ನೋಡೋಕೆ ಕೂತೆ. ಕೈಯಲ್ಲಿ ಒಳ್ಳೆ ಕಥೆ, ಯಾವುದಕ್ಕೂ ತೊಂದರೆ ಬರದಹಾಗೆ ಹಣ ವಿನಿಯೋಗಿಸುವ ನಿರ್ಮಾಪಕ, ಅದಕ್ಕಿಂತಲೂ ಹೆಚ್ಚಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎನ್ನುವ ದೊಡ್ಡ ಹೆಸರು. ಈ ಮೂರನ್ನೂ ಸರಿಯಾಗಿ ಬಳಸಿ ಕೊಳ್ಳುವಲ್ಲಿ ನಿರ್ದೇಶಕ ಹರ್ಷ ಕೊಂಚ ಎಡವಿದ್ದಾರೆ ಎಂದೆನಿಸಿತು.

  ಚಿತ್ರ ನೋಡಿ ಎದ್ದು ಬಂದ ನನಗೆ ಮೊದಲು ಅನಿಸಿದ್ದು ಚಿತ್ರಕಥೆಯಲ್ಲಿ ಸ್ವಲ್ಪ ಗಟ್ಟಿತನ ಅಥವಾ ವೇಗ ಇರಬೇಕೆಂಬುದು. ಚಿತ್ರದ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಇನ್ನೊಂದು ಮೈನಸ್ ಪಾಯಿಂಟ್. ನಾವಿರುದು ಆರು ಕೋಟಿ ಜನಸಂಖ್ಯೆ ಆಲ್ವಾ? ಚಿತ್ರದ ಸಂಭಾಷಣೆಯೊಂದರಲ್ಲಿ ಐದು ಕೋಟಿ ಕನ್ನಡಿಗರು.. ಎನ್ನುವ ಡೈಲಾಗ್ ಇದೆ.. ಹಾಗಾದ್ರೆ ಚಿತ್ರತಂಡ ಒಂದು ಕೋಟಿ ಬಿಟ್ಟಿದ್ದಾದರೂ ಯಾರನ್ನಾ?

  ಯಾವುದೇ ಆಡಂಬರವಿಲ್ಲದೆ ದರ್ಶನ್ ತೆರೆಗೆ ಎಂಟ್ರಿ ಕೊಡೋದು ಡೈಹಾರ್ಡ್ ದರ್ಶನ್ ಅಭಿಮಾನಿಗಳಿಗೆ ಕೊಂಚ ಬೇಸರ ತರಿಸಬಹುದು. ಚಿತ್ರದ ವಿಲನ್ (ಅರುಣ್ ಸಾಗರ್) ಕನ್ನಡದಲ್ಲಿ ಮಾತನಾಡುವುದನ್ನು avoid ಮಾಡಬಹುದಿತ್ತು. ಮಧ್ಯಂತರದ ನಂತರ ಚಿತ್ರ ಸೀರಿಯಸ್ ಆಗಿ ಸಾಗುತ್ತಿರಬೇಕಾದರೆ ಅನಗತ್ಯವಾದ ಹಾಡು ಯಾಕೆ ಬೇಕಿತ್ತು? ಮೂಲ ನೃತ್ಯ ಸಂಯೋಜಕರಾಗಿರುವ ಹರ್ಷ, ಚಿತ್ರದಲ್ಲಿ ಡ್ಯಾನ್ಸ್ ಕೊರಿಯೋಗ್ರಫಿ ಮೇಲೆ ಕೊಂಚ ಗಮನ ಹರಿಸಿದ್ದರೆ ಚೆನ್ನಾಗಿರುತ್ತಿತ್ತು.

  ನಾಯಕಿಯ ಆಯ್ಕೆ ಅಷ್ಟು ಸೂಕ್ತವಲ್ಲ ಎನ್ನವುದು ನನ್ನ ಅನಿಸಿಕೆ ಯಾಕೆಂದರೆ ದರ್ಶನ್ ಅಂತಹ handsome ಹೀರೋ ಮುಂದೆ ನಾಯಕಿ (ದೀಪಿಕಾ ಕಾಮಯ್ಯ ) ಕೊಂಚ ಮಸುಕಾದಂತೆ ಕಾಣಿಸುತ್ತಾಳೆ. ಏನು ಕನ್ನಡ ಚಿತ್ರದ ನಾಯಕರುಗಳೆಲ್ಲಾ ಸ್ಪುರದ್ರೂಪಿಗಳಾ ಎಂದು ನನ್ನ ನಿಮ್ಮ ಪ್ರಶ್ತ್ನೆಯಾದರೂ ನಾಯಕ ಪ್ರಧಾನ ಸಮಾಜವಲ್ಲವೇ ನಮ್ಮದು. ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ.

  ಕೈಯ ಕಚ್ಚಾಸಡಾ.. ಎನ್ನುವ ಭಟ್ರ ಅರ್ಥವಾಗದ ಸಾಹಿತ್ಯಕ್ಕೆ ಹರಿಕೃಷ್ಣ ನೀಡಿದ ಸಂಗೀತ ಲೇಪನ ಥಿಯೇಟರ್ ನಿಂದ ನೀವು ಹೊರಬಂದ ಮೇಲೂ ಬೇಡವೆಂದರೂ ಗುನುಗುತ್ತದೆ. But movie definitely once watchable. ಯಾಕೆಂದರೆ ಚಿತ್ರದ ಅದ್ದೂರಿತನ, ನಿರ್ದೇಶಕ ಹರ್ಷ ಅವರ ಸ್ಟೈಲಿಶ್ ನಿರೂಪಣೆ, ದರ್ಶನ್ ಲೀಲಾಜಾಲ ಅಭಿನಯ.

  ಬಿಗ್ ಬಜೆಟ್ ಚಿತ್ರ ಎಂದ ಮೇಲೆ ಕೆಲವೊಂದು ನ್ಯೂನ್ಯತೆಗಳು ಸಾಮಾನ್ಯ. ಚಿತ್ರದಲ್ಲಿನ ಕೆಲ ಸಣ್ಣಪುಟ್ಟ ತಪ್ಪುಗಳನ್ನು ಎತ್ತಿ ಎತ್ತಿ ತೋರಿಸುವ ಪ್ರಯತ್ನ ಈ ಲೇಖನದಲ್ಲ. ಆದರೂ ಮುಂದಿನ ಚಿತ್ರಗಳಲ್ಲಿ ಇಂತಹ ಕೆಲ ಮಿಸ್ಟೇಕ್ ಗಳ ಬಗ್ಗೆ ಗಮನವಿರಲಿ ಅನ್ನುವುದಷ್ಟೇ.

  2012ರ ಇಡೀ ಕನ್ನಡ ಚಿತ್ರೋದ್ಯಮ ಆತುರದಿಂದ ಹಾಗೂ ಕಾತುರದಿಂದ ಕಾಯುತ್ತಿದ್ದ ಚಿಂಗಾರಿ ಚಿತ್ರ ನಿರೀಕ್ಷೆಗೂ ಮೀರಿ ಇಲ್ಲ, ನಿರೀಕ್ಷೆಗಿಂತ ಸ್ವಲ್ಪ ಕಮ್ಮಿ ಅಂಕ ಸಿಗಬಹುದು ಎಂದರೆ ನಿರ್ದೇಶಕರು ಮತ್ತು ಚಿತ್ರತಂಡ ಬೇಸರಿಸಿಕೊಳ್ಳಬಾರದು. Anyway, movie is doing extraordinarily good in box office.

  English summary
  Readers review by Balaraj Tantry. Kannada movie Chingari. Darshan, Bhavana, Deepika Kamaiah in lead role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X