'ಸೂಪರ್ 30' : ಹೃತ್ತಿಕ್ ನಟನೆಯೇ ಜೀವ... ಕಥೆಯೇ ದೈವ..

ರಿಯಲ್ ಕಥೆ ಇಟ್ಟುಕೊಂಡು ಸಿನಿಮಾ ಮಾಡುವುದರಲ್ಲಿ, ಬಾಲಿವುಡ್ ಸಿನಿ ನಿರ್ದೇಶಕರು ಎತ್ತಿದ ಕೈ ಎನ್ನುವುದು ಮತ್ತೆ ಸಾಬೀತು ಆಗಿದೆ. ಈ ಹಿಂದೆ 'ಕ್ವೀನ್' ಎಂಬ ಸುಂದರ ಸಿನಿಮಾ ಮಾಡಿ ಗೆದಿದ್ದ, ವಿಕಾಸ್ ಬಹ್ಲ್ ಮತ್ತೆ ಗೆಲುವಿನ ಸೂಚನೆ ನೀಡಿದ್ದಾರೆ. ಸೋಲು ಗೆಲುವು ಎಲ್ಲದಕ್ಕಿಂತ ಹೆಚ್ಚಾಗಿ ಒಂದು ಒಳ್ಳೆಯ ಸಿನಿಮಾ ಮಾಡಿದ್ದಾರೆ. 'ಸೂಪರ್ 30' ಸಿನಿಮಾ ಹೆಸರಿಗೆ ತಕ್ಕ ಹಾಗೆ ಸೂಪರ್ ಆಗಿದೆ.

Rating:
4.0/5
Star Cast: ಹೃತ್ತಿಕ್ ರೋಷನ್, ಮೃಣಾಲ್ ಠಾಕೂರ್
Director: ವಿಕಾಸ್ ಬಹ್ಲ್

ಅನಂತ್ ಕುಮಾರ್ ಕಥೆ

ಅನಂತ್ ಕುಮಾರ್ ಕಥೆ

'ಸೂಪರ್ 30' ಸಿನಿಮಾ ಬಿಹಾರದ ಅನಂತ್ ಕುಮಾರ್ ಅವರ ಕಥೆ. ಖ್ಯಾತ ಗಣಿತಜ್ಞ ಆಗಿರುವ ಅನಂತ್ ಕುಮಾರ್ ಅವರ ಜೀವನದ ಏಳು - ಬೀಳು, ಸಾಧನೆಯ ಕಥೆ ಚಿತ್ರದಲ್ಲಿದೆ. ಅನಂತ್ ಕುಮಾರ್ ತಮ್ಮ 'ಸೂಪರ್ 30' ಕಾರ್ಯಕ್ರಮದ ಮೂಲಕ ದೇಶಾದ್ಯಂತ ಜನಪ್ರಿಯತೆ ಪಡೆದಿದ್ದಾರೆ. IIT ಪ್ರವೇಶ ಪರೀಕ್ಷೆ ಬರೆಯಲು ಬಯಸುವ ಬಡ ವಿದ್ಯಾರ್ಥಿಗಳಿಗೆ ಆನಂದ್ ಉಚಿತವಾಗಿ ಪಾಠ ಮಾಡುತ್ತಾರೆ.

ಹೃತ್ತಿಕ್ ರೋಷನ್ ಪ್ರಬುದ್ಧ ನಟನೆ

ಹೃತ್ತಿಕ್ ರೋಷನ್ ಪ್ರಬುದ್ಧ ನಟನೆ

ನಟ ಹೃತ್ತಿಕ್ ರೋಷನ್ ಸಿನಿ ಕೆರಿಯರ್ ನ ಬೆಸ್ಟ್ ಪಾತ್ರಗಳ ಪೈಕಿ ಈ ಚಿತ್ರದ ಪಾತ್ರ ನಿಲ್ಲುವುದರಲ್ಲಿ ಯಾವುದೇ ಅನುಮಾನ ಇಲ್ಲ. 'ಸೂಪರ್ 30'ಯ ಮುಖ್ಯ ಆಕರ್ಷಣೆ ಹೃತ್ತಿಕ್ ನಟನೆ. ಅವರ ಬಾಡಿ ಲಾಂಗ್ವೇಜ್ ಹಾಗೂ ಡೈಲಾಗ್ ಡಿಲೆವರಿ ಸ್ಟೈಲ್ ತುಂಬ ಸೂಕ್ತವಾಗಿದೆ. ಕೇಂಬ್ರಿಜ್ ವಿಶ್ವವಿದ್ಯಾನಿಲಯದಲ್ಲಿ ಸೀಟ್ ಸಿಕ್ಕಾಗ ಅವರು ಖುಷಿಯನ್ನು ವ್ಯಕ್ತ ಪಡಿಸುವ ದೃಶ್ಯವಂತು ಅದ್ಭುತ.

ಚಿತ್ರದ ತುಂಬ ಎಮೋಷನ್ಸ್ ಇದೆ

ಚಿತ್ರದ ತುಂಬ ಎಮೋಷನ್ಸ್ ಇದೆ

ಒಂದು ಸಿನಿಮಾಗೆ ಜೀವ ತುಂಬುವುದೇ ಎಮೋಷನ್ಸ್. ಭಾವನೆಗಳು ಇಲ್ಲದೆ, ಬರೀ ದೃಶ್ಯಗಳು ತುಂಬಿದ್ದರೆ ಅದು ಒಳ್ಳೆಯ ಸಿನಿಮಾ ಆಗಲಾರದು. 'ಸೂಪರ್ 30' ಸಿನಿಮಾ ಇಷ್ಟ ಆಗುವುದೇ ಇಲ್ಲಿ. ಸಿನಿಮಾದಲ್ಲಿ ಪ್ರೀತಿ, ಸ್ಫೂರ್ತಿ, ಸಾಧನೆ, ಹಾಸ್ಯ ಎಲ್ಲವೂ ಇದೆ. ಚಿತ್ರದ ತುಂಬ ಎಮೋಷನ್ಸ್ ತುಂಬಿದೆ. ಸಿನಿಮಾದ ಎಲ್ಲ ಪಾತ್ರಗಳು ಕೂಡ ನೈಜವಾಗಿ ಮೂಡಿ ಬಂದಿವೆ.

ಆನಂದ್ ಕಥೆ ಜೊತೆಗೆ ಶಿಕ್ಷಣ ಪರಿಸ್ಥಿತಿ ಅನಾವರಣ

ಆನಂದ್ ಕಥೆ ಜೊತೆಗೆ ಶಿಕ್ಷಣ ಪರಿಸ್ಥಿತಿ ಅನಾವರಣ

ಆನಂದ್ ಕುಮಾರ್ ಕಥೆಯೇ ಚಿತ್ರವಾಗಿದ್ದರೂ, ಅದರ ಜೊತೆಗೆ ಪ್ರಸ್ತುತ ಶಿಕ್ಷಣ ಪರಿಸ್ಥಿತಿಯ ಲೋಪಗಳನ್ನು ಅನಾವರಣ ಮಾಡಲಾಗಿದೆ. ಶಿಕ್ಷಣದ ಪ್ರಾಮುಖ್ಯತೆ ತಿಳಿಸಲಾಗಿದೆ. ರಾಜ, ಮಹಾಭಾರತದ ಘಟನೆಗಳನ್ನು ಚಿತ್ರದ ಸಂದರ್ಭಕ್ಕೆ ಹೋಲಿಕೆ ಮಾಡಿರುವುದು ಕಥೆಯ ಸಾಮರ್ಥ್ಯ ಹೆಚ್ಚು ಮಾಡಿದೆ.

ನೋಡಲೇಬೇಕಾದ ಸಿನಿಮಾ

ನೋಡಲೇಬೇಕಾದ ಸಿನಿಮಾ

ಕೆಲ ಸಿನಿಮಾಗಳ ಮನರಂಜನೆ ಸೀಮಿತವಾಗಿದ್ದರೆ, ಇನ್ನು ಕೆಲವು ಸಿನಿಮಾಗಳು ಮನಸ್ಸಿಗೆ ಇಷ್ಟ ಆಗುವ ಚಿತ್ರಗಳು. 'ಸೂಪರ್ 30' ಎರಡನೇ ವರ್ಗಕ್ಕೆ ಸೇರುವ ಸಿನಿಮಾ. ಆನಂದ್ ಕುಮಾರ್ ಅವರ ನಿಸ್ವಾರ್ತ ಸಾಧನೆಯನ್ನು ತುಂಬ.. ತುಂಬ.. ಚೆನ್ನಾಗಿ ತೆರೆ ಮೇಲೆ ತೋರಿಸಲಾಗಿದೆ. ಬಾಲಿವುಡ್ ನಲ್ಲಿ ಬಂದ ಒನ್ ಆಫ್ ದಿ ಬೆಸ್ಟ್ ಬಯೋಪಿಕ್ ಗಳಲ್ಲಿ 'ಸೂಪರ್ 30' ಕೂಡ ಒಂದಾಗಬಹುದು.

More from Filmibeat

English summary
Hrithik Roshan's 'Super 30' movie is biopic of mathematician Anand Kumar. He best known for his Super 30 programme. 'Super 30' movie will be releasing on July 12th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X